ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಎಎಪಿ ಕಣಕ್ಕೆ

|
Google Oneindia Kannada News

ಬೆಂಗಳೂರು, ಜನವರಿ 31 : ಹೊಸಕೋಟೆ ನಗರಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. 23 ಸದಸ್ಯರನ್ನು ಹೊಂದಿರುವ ನಗರಸಭೆಗೆ ಫೆಬ್ರವರಿ 9ರಂದು ಚುನಾವಣೆ ನಡೆಯಲಿದೆ.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕನಕನಗರ ವಾರ್ಡ್‌ (ನಂ. 21) ರಿಂದ ಅಸದ್ ಉಲ್ಲಃ ಬೇಗ್ ಕಣಕ್ಕಿಳಿಯುತ್ತಿದ್ದಾರೆ. ನಗರಸಭೆಯ ಆಡಳಿತ ವೈಫಲ್ಯತೆಯಿಂದಾಗಿ ನಗರ ಹಲವಾರು ಸಮಸ್ಯೆಗಳ ಆಗರವಾಗಿದೆ ಎಂದು ಎಎಪಿ ದೂರಿದೆ.

ಅಮಿತ್ ಶಾ ಮೇಲೆ 48 ಗಂಟೆ ನಿರ್ಬಂಧ ಹೇರಿ: ಆಯೋಗಕ್ಕೆ ಎಎಪಿ ಮನವಿಅಮಿತ್ ಶಾ ಮೇಲೆ 48 ಗಂಟೆ ನಿರ್ಬಂಧ ಹೇರಿ: ಆಯೋಗಕ್ಕೆ ಎಎಪಿ ಮನವಿ

ಹೊಸಕೋಟೆಯ ಕನಕನಗರ ವಾರ್ಡ್‌ ಅನ್ನು ಮಾದರಿ ವಾರ್ಡ್ ಆಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಎಎಪಿ ನಗರಸಭೆ ಚುನಾವಣೆ ಕಣಕ್ಕಿಳಿದಿದೆ. ಅಸದ್ ಉಲ್ಲಃ ಬೇಗ್ ಪ್ರಸ್ತುತ ಕಾನೂನು ವಿದ್ಯಾರ್ಥಿಯಾಗಿದ್ದು, ಸುಮಾರು 12 ವರ್ಷಗಳಿಂದ ಹೊಸಕೋಟೆಯಲ್ಲಿ ಆರೋಗ್ಯ ಶಿಬಿರಗಳು, ಪ್ರಥಮ ಚಿಕಿತ್ಸಾ ತರಬೇತಿಗಳಂತಹ ಹಲವಾರು ಜನಪರ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ; ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆದೆಹಲಿ ವಿಧಾನಸಭೆ ಚುನಾವಣೆ; ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

AAP To Contest For Hoskote City Municipal Council

ಸಾಮಾಜಿಕ ಹಾಗೂ ರಾಜಕೀಯ ಹೋರಾಟಗಳಲ್ಲಿ ಅಸದ್ ಉಲ್ಲಃ ಬೇಗ್ ಮುಂಚೂಣಿಯಲ್ಲಿದ್ದಾರೆ. ಕೊಡಗು, ಚೆನ್ನೈ, ಉತ್ತರಖಾಂಡ್, ಕಾಶ್ಮೀರ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರವಾಹ ಸಂಭವಿಸಿದಾಗ ನೆರೆಸಂತ್ರಸ್ಥರಿಗೆ ಸಹಾಯಾಸ್ತ ಚಾಚಿ, ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ.

'ಪ್ರತ್ಯೇಕ ಬಸ್ ಪಥ’ ಯೋಜನೆ ಯಶಸ್ಸಿಗೆ 6 ಸೂತ್ರಗಳನ್ನು ನೀಡಿದ ಎಎಪಿ 'ಪ್ರತ್ಯೇಕ ಬಸ್ ಪಥ’ ಯೋಜನೆ ಯಶಸ್ಸಿಗೆ 6 ಸೂತ್ರಗಳನ್ನು ನೀಡಿದ ಎಎಪಿ

ಧ್ಯೇಯೋದ್ದೇಶಗಳು

* ಜನರ ಕುಂದುಕೊರತೆಗಳನ್ನು ಅರಿಯಲು ಪ್ರತಿ ತಿಂಗಳು ನಿಯಮಿತವಾಗಿ ವಾರ್ಡ್ ಸಭೆ ನಡೆಸುವುದು
* ಶಾಲೆಗಳು ಮತ್ತು ಅಂಗನವಾಡಿಗಳ ಗುಣಮಟ್ಟವನ್ನು ಉನ್ನತ ಗುಣಮಟ್ಟಕ್ಕೇರಿಸುವುದು
* ವೈಜ್ಞಾನಿಕ ಕಸವಿಲೇವಾರಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಮಾಡುವುದು
* ವ್ಯವಸ್ಥಿತ ಒಳ ಚರಂಡಿ ವ್ಯವಸ್ಥೆ ಮತ್ತು ಉದ್ಯಾನವನಗಳ ನಿರ್ಮಾಣ
* ಉತ್ತಮ ಗುಣಮಟ್ಟದ ರಸ್ತೆಗಳು ಮತ್ತು ಕಾಮಗಾರಿಗಳು
* ಪ್ರತಿ ಮನೆಗೂ ಶುದ್ದ ಕುಡಿಯುವ ನೀರಿನ ಸೌಲಭ್ಯ
* ವಿಶ್ವಾಸಾರ್ಹ ಸರ್ಕಾರಿ ಆಸ್ಪತ್ರೆಗಳ ನಿರ್ಮಾಣ ಮತ್ತು ನಿರ್ವಹಣೆ

English summary
Aam Aadmi Party candidate will contest for Hoskote city municipal council election from Kanaka Nagar ward. Election will be held on February 9, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X