• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಪ್ರತ್ಯೇಕ ಬಸ್ ಪಥ’ ಯೋಜನೆ ಯಶಸ್ಸಿಗೆ 6 ಸೂತ್ರಗಳನ್ನು ನೀಡಿದ ಎಎಪಿ

|

ಬೆಂಗಳೂರು, ಅಕ್ಟೋಬರ್ 25: ಬಿಬಿಎಂಪಿ ಆಯುಕ್ತರು ಮತ್ತು ಬಿಎಂಟಿಸಿ ಅಧ್ಯಕ್ಷರ ಸಹಭಾಗಿತ್ವದ ಶ್ರಮದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಟಿನ್ ಫ್ಯಾಕ್ಟರಿಯ ನಡುವೆ ಬಿಎಂಟಿಸಿ ಬಸ್ಗಳಿಗೆ ಪ್ರತ್ಯೇಕ ಬಸ್ ಪಥ ಇಂದು ಕಾರ್ಯರೂಪಕ್ಕೆ ಬಂದಿರುವುದನ್ನು ಆಮ್ ಆದ್ಮಿ ಪಕ್ಷವು ಸ್ವಾಗತಿಸಿದೆ.

ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಜನಪರ ಮತ್ತು ಪರಿಸರ ಸ್ನೇಹಿ ಯೋಜನೆಗಳನ್ನು ಕಾರ್ಯಘತಗೊಳಿಸಬಹುದು ಎಂಬುದನ್ನು ಇದು ಸ್ಪಷ್ಟಡಿಸಿದೆ. ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಮೊದಲ ಹೆಜ್ಜೆಯಾಗಿರುವ ಈ ಯೋಜನೆ ಯಶಸ್ವಿಯಾಗಲಿ ಎಂದು ಆಮ್ ಆದ್ಮಿ ಪಕ್ಷವು ಆಶಿಸುತ್ತದೆ.

ಬಿಎಂಟಿಸಿ ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ಏನಾಗುತ್ತೆ?

ಇಂತಹ ಯೋಜನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಮಾದರಿಯಾಗುವಂತಾಗಬೇಕು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ನೀಡದ ಅರೆಮನಸ್ಸಿನ ಪ್ರಯತ್ನಗಳಾಗದಂತೆ ಕಾಳಜಿವಹಿಸಬೇಕು. ಈಗಾಗಲೇ ಬೆಂಗಳೂರಿನ ಎಲ್ಲಾ ರಸ್ತೆಗಳು ವಾಹನಗಳಿಂದ ತುಂಬಿಹೋಗಿರುವ ಸಂದರ್ಭದಲ್ಲಿಯೂ ಬಸ್ ಪಥವನ್ನು ಪ್ರತ್ಯೇಕಿಸುವುದರಿಂದ ಹಾಲಿ ಬಸ್ ಬಳಕೆದಾರರಿಗೆ ಪ್ರಯಾಣದ ಅವಧಿ ಕಡಿಮೆಯಾಗಿ ಲಾಭವಾಗುವುದು ಖಚಿತ. ಆದರೆ ಮುಖ್ಯವಾಗಿ ಖಾಸಗಿ ವಾಹನ ಬಳಕೆದಾರರು ಸಾರ್ವಜನಿಕ ಸಾರಿಗೆ ಅಳವಡಿಸಿಕೊಂಡಾಗ ಮಾತ್ರ ಇದರ ನಿಜವಾದ ಲಾಭ ದೊರೆಯುತ್ತದೆ ಮತ್ತು ಟ್ರಾಫಿಕ್ ದಟ್ಟಣೆ ಕಡಿಮೆಯಾಗುತ್ತದೆ. ಇದರರ್ಥ ನಾವು ಪ್ರತ್ಯೇಕ ಬಸ್ ಪಥವನ್ನು ಒದಗಿಸುವುದರ ಜೊತೆಗೆ ಸಮರೋಪಾದಿಯಲ್ಲಿ ಈ ಕೆಳಗಿನ ಹೆಜ್ಜೆಗಳನ್ನೂ ಇಡಬೇಕಾದ ಅವಶ್ಯಕತೆ ಇದೆ ಎಂದು ಎಎಪಿಯ ನೀತಿ ಮತ್ತು ಸಂಶೋಧನಾ ತಂಡದ ಮುಖ್ಯಸ್ಥರಾದ ಬಸವರಾಜ ಮುದಿಗೌಡರ್

ಹೇಳಿದ್ದಾರೆ.

ಖಾಸಗಿ ವಾಹನವನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಅಳವಡಿಸಿಕೊಳ್ಳಬೇಕು ಎಂದೆನಿಸುವಷ್ಟು ಸ್ಪಷ್ಟ ಪ್ರಯೋಜನ ಪ್ರಯಾಣಿಕರಿಗೆ ಕಂಡಾಗ ಮಾತ್ರ ಸಾರ್ವಜನಿಕ ಸಾರಿಗೆ ಯಶಸ್ವಿಯಾಗುತ್ತದೆ. ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಸಾರ್ವಜನಿಕ ಸಾರಿಗೆಯನ್ನು ಅಳವಡಿಸಕೊಳ್ಳುವುದೊಂದೇ ಮಾರ್ಗವಾಗಿದೆ. ನಾವು ಸಮಗ್ರ ಪರಿಹಾರ ಕಂಡುಕೊಳ್ಳದೆ ಒಂದೆರಡು ಸಂಸ್ಥೆಗಳಿಗೆ ಸೀಮಿತವಾದ ಅರೆಪ್ರಯತ್ನದಿಂದ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಇವು ಆಮ್ ಅದ್ಮಿ ಪಕ್ಷದ ಕೆಲವು ಸಲಹೆಗಳು. ಈ ವಿಷಯವಾಗಿ ಇನ್ನೂ ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿಗೆ ಸಹಾಯ ಮಾಡಲು ಬಯಸುತ್ತವೆ. ಆಮ್ ಆದ್ಮಿ ಪಕ್ಷ ಮತ್ತು ಕಾರ್ಯಕರ್ತರು ಈ ವಿಷಯದ ಬಗ್ಗೆ ಯಾವುದೇ ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ ಮತ್ತು ಈ ಯೋಜನೆ ಯಶಸ್ವಿಯಾಗಲು ಸಹಾಯ ಮಾಡುತ್ತಾರೆ.

ಪ್ರತ್ಯೇಕ ರಸ್ತೆ ಪಥದ ಆಗಮನ ಮತ್ತು ನಿರ್ಗಮನ ಕೇಂದ್ರ

ಪ್ರತ್ಯೇಕ ರಸ್ತೆ ಪಥದ ಆಗಮನ ಮತ್ತು ನಿರ್ಗಮನ ಕೇಂದ್ರ

1) ಪ್ರತ್ಯೇಕ ರಸ್ತೆ ಪಥದ ಆಗಮನ ಮತ್ತು ನಿರ್ಗಮನ ಕೇಂದ್ರಗಳಲ್ಲಿ ಟ್ರಾನಿಸ್ಟ್ ಹಬ್ ಗಳನ್ನು ಒದಗಿಸಬೇಕು. ಅದು ಜನರು ಇತರ ಸಾರಿಗೆ ವ್ಯವಸ್ಥೆಗಳಿಂದ ಪ್ರತ್ಯೇಕ ಪಥದ ಸಾರಿಗೆಗೆ ಬದಲಾಯಿಸಲು ಸುಲಭವೂ ಮತ್ತು ಅನುಕೂಲವೂ ಆಗುವಂತಿರಬೇಕು.

2) ಜನರು ಸಮರ್ಪಕವಾಗಿ ಸಂಚರಿಸುವಂತೆ ಮಾಡುವುದು ಆಧ್ಯತೆಯಾಗಿರಬೇಕೇ ಹೊರತು ಕೇವಲ ಬಿಎಂಟಿಸಿ ಬಸ್ಸುಗಳು ಚಲಿಸುವಂತೆ ಮಾಡುವುದಲ್ಲ. ಹಾಗಾಗಿ ಪತ್ಯೇಕ ಪಥವನ್ನು ಒಂದು ಸಂಸ್ಥೆಯ ಆಸ್ತಿಯನ್ನಾಗಿ ಮಾಡುವ ಬದಲು, ಬಿಎಂಟಿಸಿ ಬಸ್ಸುಗಳಂತೆಯೇ, ಅಂಥದ್ದೇ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಐಟಿ ಮತ್ತು ಇತರೆ ಖಾಸಗಿ ಕಂಪನಿಗಳ ಬಸ್ಸುಗಳು, ಮಿನಿ ಬಸ್ಸುಗಳೂ ಸಹ ಪ್ರತ್ಯೇಕ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಬೇಕು.

ಪ್ರತ್ಯೇಕ ಬಸ್‌ ಪಥದಲ್ಲಿ ಸಂಚಾರ ಆರಂಭಿಸಿದ ಬಿಎಂಟಿಸಿ ಬಸ್

ಸಾರಿಗೆ ವ್ಯವಸ್ಥೆಯ ಯಶಸ್ಸು ನಿರ್ಧಾರ

ಸಾರಿಗೆ ವ್ಯವಸ್ಥೆಯ ಯಶಸ್ಸು ನಿರ್ಧಾರ

3) ಕೊನೆಯ ಹಂತದ ಸಂಪರ್ಕವು ಹೇಗಿದೆ ಎನ್ನುವುದರ ಮೇಲೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಯಶಸ್ಸು ನಿರ್ಧಾರವಾಗುತ್ತದೆ. 15 ಕಿ.ಮೀ ಬಸ್ ಪ್ರಯಾಣಕ್ಕೆ 20 ರೂ ಕೊಟ್ಟು ಮನೆಗೆ ಸೇರುವ ಕೊನೆಯ ಒಂದು ಕಿ.ಮೀ ಪ್ರಯಾಣಕ್ಕೆ ಆಟೋ ಚಾಲಕರು 50 ರೂ ಬೇಡಿಕೆ ಇಟ್ಟಾಗ ಲೆಕ್ಕ ತಪ್ಪಿ ಹೋಗುತ್ತದೆ. ಕೆಲವು ಸರತಿ ಆ 50 ರೂಗಳ ಪ್ರಯಾಣವು ಗತಿ ಇಲ್ಲದ ಪರಸ್ಥಿತಿ ಎದುರಿಸಬೇಕಾಗುತ್ತದೆ. ದ್ವಿ ಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಕೊಳ್ಳುವ ಸಾಮರ್ಥ್ಯ ಇರುವವರು ಕೊನೆಯ ಈ ಒಂದು ಕಿ.ಮೀ ಪ್ರಯಾಣದ ಅನುಕೂಲಕ್ಕಾಗಿ 15 ಕಿ.ಮೀ ಪ್ರಯಾಣವನ್ನು ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಾರೆ. ಹಾಗಾಗಿ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳವುದು ಅವಶ್ಯ.

3.1) ಬಸ್ ನಿಲ್ದಾಣಗಳಲ್ಲಿ ಸ್ಥಳೀಯ ಪ್ರದೇಶದ ಪ್ರಯಾಣಕ್ಕಾಗಿ ನಿಗದಿತ ಶುಲ್ಕದೊಂದಿಗೆ ಪ್ರಿ-ಪೈಯ್ಡ್ ಆಟೋ ಸ್ಟಾಂಡ್ ಗಳನ್ನು ನಿರ್ಮಾಣ ಮಾಡಬೇಕು. ಸ್ಥಳೀಯ ಪ್ರಯಾಣಕ್ಕಾಗಿ ಈ-ರಿಕ್ಷಾ ಮತ್ತು ಸಣ್ಣ ಬ್ಯಾಟರಿ ಕಾರುಗಳಿಗೆ ಉತ್ತೇಜನ ನೀಡಿ. ಅಗತ್ಯವಿದ್ದರೆ ಸಹಾಯಧನವನ್ನೂ ಒದಗಿಸಿ.

3.2) ವಸತಿ ಪ್ರದೇಶದಿಂದ ಹತ್ತಿರದ ಬಸ್ ನಿಲ್ದಾಣ ಮತ್ತು ಮೆಟ್ರೋ ಸ್ಟೇಷನ್ಗಳಿಗೆ ಬಿಎಂಟಿಸಿಯು ಗುತ್ತಿಗೆ ಅಥವಾ ಬಾಡಿಗೆ ಆಧಾರದಲ್ಲಿ ಮಿನಿ ಬಸ್ಗಳನ್ನು ಓಡಿಸಬೇಕು.

ಸುರಕ್ಷತೆಯು ಮತ್ತೊಂದು ಸವಾಲಾಗಿದೆ

ಸುರಕ್ಷತೆಯು ಮತ್ತೊಂದು ಸವಾಲಾಗಿದೆ

4) ಸುರಕ್ಷತೆಯು ಮತ್ತೊಂದು ಸವಾಲಾಗಿದ್ದು, ವಿಶೇಷವಾಗಿ ಮಹಿಳಾ ಪ್ರಯಾಣಿಕರು ಖಾಸಗಿ ವಾಹನಗಳನ್ನು ಬಳಸುವಂತೆ ಮಾಡುತ್ತದೆ. ಬಸ್ ಅಥವಾ ಮೆಟ್ರೋದಲ್ಲಿ ಪ್ರಯಾಣ ಸುರಕ್ಷಿತವಾಗಿರುತ್ತದಾದರೂ, ಅದರಿಂದ ಇಳಿದ ಕೂಡಲೇ ಅಸುರಕ್ಷತೆಯ ಭಾವನೆ ಕಾಡಲಾರಂಭಿಸುತ್ತದೆ. ಹೀಗಾಗಿ

4.1) ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಸ್ಥಳಗಳಲ್ಲಿಯೂ ಬೀದಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಕತ್ತಲೆ ಸ್ಥಳಗಳನ್ನು ಗುರುತಿಸಿ ಪರಿಹರಿಸಬೇಕು.

4.2) ವಸತಿ ಪ್ರದೇಶಗಳಲ್ಲಿ ಸಂಜೆ ಸಮಯದಲ್ಲಿ ಸಾಕಷ್ಟು ಬೀಟ್ ವಾಹನಗಳು ಮತ್ತು ಕಾನ್ಸ್ಟಬಲ್‍ಗಳನ್ನು ನೇಮಿಸಲು ಬೆಂಗಳೂರು ನಗರ ಪೋಲಿಸರು ಸಹಾಯ ಮಾಡಬೇಕು.

4.3) ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ನಿರ್ವಹಣೆ ಮಾಡುವುದರಿಂದ ಸುರಕ್ಷತೆಯ ಭಾವ ಹೆಚ್ಚಾಗುತ್ತದೆ ಮತ್ತು ಅಪರಾಧ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಸಿಸಿ ಕ್ಯಾಮೆರಾಗಳನ್ನು ವಸತಿ ಸ್ಥಳಗಳಲ್ಲಿ ಅಳವಡಿಸಬೇಕು.

 ಪ್ರಯಾಣಿಕರಿಗಾಗಿ ವ್ಯವಸ್ಥೆಯನ್ನು ರೂಪಿಸಬೇಕು

ಪ್ರಯಾಣಿಕರಿಗಾಗಿ ವ್ಯವಸ್ಥೆಯನ್ನು ರೂಪಿಸಬೇಕು

5) ಕೇವಲ ಬಸ್ ಗಳಿಗಾಗಿ ಮಾತ್ರವಲ್ಲದೆ, ಪ್ರಯಾಣಿಕರಿಗಾಗಿ ವ್ಯವಸ್ಥೆಯನ್ನು ರೂಪಿಸಬೇಕು. ಪ್ರಯಾಣಿಕರು ಬಸ್ ಅಥವಾ ಮೆಟ್ರೋ ನಿಲ್ದಾಣಗಳಿಂದ ತಮ್ಮ ಕೆಲಸಕ್ಕೊ ಅಥವಾ ಮನೆಗೋ 200 ಮೀಟರ್ ಇಂದ 2 ಕಿ.ಮೀ ವರಗೂ ಕ್ರಮಿಸಬೇಕಾಗಬಹುದು. ಯಾವುದೇ ಸಾರ್ವಜನಿಕ ಸಂಪರ್ಕವನ್ನು ರೂಪಿಸುವಾಗ ಈ ಕೊನೆಯ ಹಂತದ ನಡಿಗೆಯನ್ನು ಪ್ರಾಥಮಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಇಂದು ಬೆಂಗಳೂರಿನ ರಸ್ತೆಗಳಲ್ಲಿ ಫುಟ್ ಪಾತ್‍ಗಳು ಚರಂಡಿಗಳ ಮೇಲಿನ ಚಪ್ಪಡಿ ಕಲ್ಲುಗಳಿಗೆ ಸೀಮಿತವಾಗಿವೆ. ಇವು ಸ್ವಚ್ಛವಾಗಿಯೂ, ಸುರಕ್ಷವಾಗಿಯೂ ಮತ್ತು ನಡೆಯಲು ಯೋಗ್ಯವಾಗಿಯೂ ಇಲ್ಲ. ರಸ್ತೆಗಳು ವಾಹನ ಹಾಗೂ ಪಾದಚಾರಿಗಳಿಬ್ಬರಿಗೂ ಸ್ನೇಹಿಯಾಗಿರಲು ಸಾಧ್ಯವಿದೆ ಎಂಬುದಕ್ಕೆ ಟೆಂಡರ್ ಸ್ಯೂರ್ (TenderSURE) ರಸ್ತೆಗಳು ಅತ್ಯುತ್ತಮ ಉದಾಹರಣೆಗಳಾಗಿವೆ. ಇದನ್ನು ಹೇಗೆ ಅನುಷ್ಠಾನ ಮಾಡಬಹುದು ಎನ್ನುವುದರ ಅರಿವು ನಮಗಿದೆ, ಅದನ್ನ ಅನುಷ್ಟಾನಕ್ಕೆ ತರಬೇಕಿದೆ.

5.1) ಮೊದಲಿಗೆ ಪ್ರತ್ಯೇಕ ಬಸ್ ರಸ್ತೆಗಳನ್ನು ವಸತಿ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಗಳ ಮೇಲೆ ನಡೆದುಕೊಂಡು ಹೋಗುವ ಅನುಭವ ಆನಂದಕರವಾಗಿರುವಂತೆ ಮಾಡಬೇಕು.

5.2) ರಸ್ತೆಗಳಲ್ಲಿರುವ ಕಸದ ರಾಶಿಗಳು, ಕಟ್ಟಡಗಳ ಅವಶೇಷಗಳು ಮತ್ತು ಮಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು.

5.3) ಫುಟ್ ಪಾತ್ಗಳಲ್ಲಿ ಅತಿಕ್ರಮಣ ಮತ್ತು ಅಕ್ರಮ ವ್ಯಾಪಾರಿಗಳನ್ನು ತೆರವುಗೊಳಿಸಬೇಕು.

ಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್‌ಗೆ ಚೆಂದದ ಹೆಸರು

ಸಾರ್ವಜನಿಕ ಯೋಜನೆಗಳು ಪಾರದರ್ಶಕವಾಗಿರಬೇಕು

ಸಾರ್ವಜನಿಕ ಯೋಜನೆಗಳು ಪಾರದರ್ಶಕವಾಗಿರಬೇಕು

6) ತಂತ್ರಜ್ಞಾನ, ಪಾರದರ್ಶಕತೆ ಮತ್ತು ಏಕೀಕರಣವು ನಿಮ್ಮ ಸ್ನೇಹಿತರು, ನೀವು ಅವುಗಳಿಂದ ದೂರ ಉಳಿಯಬಾರದು. ನಾವು ರೂಪಿಸುವ ಸಾರ್ವಜನಿಕ ಯೋಜನೆಗಳು ಪಾರದರ್ಶಕವಾಗಿರಬೇಕು ಮತ್ತು ತಂತ್ರಜ್ಞಾನಗಳನ್ನು ಅವುಗಳ ಉತ್ತಮ ನಿರ್ವಹಣೆಗೆ ಅಳವಡಿಸಿಕೊಳ್ಳಬೇಕು. ಜನರ ಸಹಭಾಗಿತ್ವದಿಂದ ನಿರ್ಮಾಣವಾಗುವ ಅಪ್ಲಿಕೇಷನ್ಗಳಿಂದ ಅದ್ಭುತವಾಗಿ ಕೆಲಸ ಮಾಡಬಹುದು.

6.1) ಪ್ರತ್ಯೇಕ ಪಥದ ಬಸ್ಸುಗಳು ಮತ್ತು ಫೀಡರ್ ಬಸ್ಸುಗಳಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಆ ಮಾಹಿತಿ ಮುಕ್ತವಾಗಿ ಲಭ್ಯವಿರಬೇಕು. ಇದು ಪ್ರಯಾಣಿಕ ಸ್ನೇಹಿ ಅಪ್ಲಿಕೇಶನ್ಗಳನ್ನು, ಇತರ ಪ್ರಯಾಣೀಕರ ಅಪ್ಲಿಕೇಶನ್ಗಳೊಂದಿಗೆ ಸಂಯೋಜಿಸಲು ಮತ್ತು ಯಾರು ಬೇಕಾದರೂ ಅಪ್ಲಿಕೇಶನ್ಗಳನ್ನು ಮಾಡುವುದಕ್ಕೆ ಸಹಾಯ ಮಾಡುತ್ತದೆ.

6.2) BMRCL ಮತ್ತು BMTC ತಂತ್ರಜ್ಞಾನಗಳನ್ನು ಬಳಸಿಕೊಂಡು ಒಂದೇ ಪ್ರಯಾಣಿಕ ಕಾರ್ಡ್ ಗಳನ್ನು ಅಭಿವೃದ್ಧಿಪಡಿಸುಲು ಮುಂದಾಗಬೇಕು. ನವೀನ ಮತ್ತು ಅನುಕೂಲಕರ ವಿಧಾನಗಳನ್ನು ಬಳಿಸಿಕೊಂಡು ಪಾವತಿ ಮಾಡುವಂತಹ ಅಪ್ಲಿಕೇಷನ್ ಗಳನ್ನು ರೂಪಿಸಲು ಅವಕಾಶ ಮಾಡಿಕೊಡಬೇಕು.

6.3) ಆಟೋಗಳು, ಕ್ಯಾಬ್ ಗಳು ಮತ್ತು ಶೇರಿಂಗ್ ರೈಡ್ಗಳಿಗೆ ಅದೇ ಕಾರ್ಡ್ ನಿಂದ ಪಾವತಿ ಮಾಡುವಂತಹ ಅನುಕೂಲವನ್ನು ಬಿಬಿಎಂಪಿ ಮತ್ತು RTO ಕಲ್ಪಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aam Aadmi Party(AAP) suggests 6 Things BBMP commissioner should implement immediately to make dedicated bus lane a success. Provide transit hubs at major interchanges and entry and exits on these dedicated lanes, so people can switch over from other modes of transport with convenience and ease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more