ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಬೇಕು: ಎಎಪಿ ಮನವಿ

|
Google Oneindia Kannada News

ಬೆಂಗಳೂರು, ಮೇ 14: ಕೊರೊನಾದಿಂದ ಜನರು ಪಡಬಾರದ ಕಷ್ಟ ಪಡುತ್ತಿರುವಾಗ ಸರಕಾರ ಮಾತ್ರ ವಿದ್ಯುತ್ ದರವನ್ನು ಹೆಚ್ಚಿಸಿ ಜನರನ್ನು ಸಮಸ್ಯೆಗಳ ಕೂಪಕ್ಕೆ ತಳ್ಳುತ್ತಿದೆ. ಸರಕಾರಕ್ಕೆ ಜನರ ಕಷ್ಟಕ್ಕೆ ಸ್ಪಂದಿಸುವ ಅಂತಃಕರಣವಿಲ್ಲವೇ? ಜನರಿಗಲ್ಲದ ಸರಕಾರ ಮತ್ತೆ ಯಾರಿಗೆ? ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.

ಲಾಕ್‌ಡೌನ್‌ನಿಂದ ಜನರು ಮನೆಯಲ್ಲಿ ಇದ್ದಾರೆ. ಆದರೆ ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನಕ್ಕೆ ಜನರು ಮನೆಬಿಟ್ಟು ಹೊರಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಕರ್ನಾಟಕ ರಾಜ್ಯದ ಸರಾಸರಿ ತಾಪಮಾನ 32' ಸೆಲ್ಸಿಯಸ್ ದಾಟುತ್ತಿದೆ. ಬಿಸಿಲಿನ ಬೇಗೆಗೆ ಮನೆಯಲ್ಲಿ ಇರುವುದು ದೊಡ್ಡ ಸಮಸ್ಯೆಯಾಗಿದೆ. ಮನೆಯ ಒಳಗಡೆ ದಿನವಿಡೀ ಫ್ಯಾನ್ ಹಾಕಿಕೊಂಡು ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯ ಮಧ್ಯೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಪವರ್ ಕಟ್ ನಿಂದಾಗಿ ಫ್ಯಾನ್ ಗಾಳಿಗೆ ಮನೆಯೊಳಗಡೆ ಕೂರಲೂ ಸಾಧ್ಯವಾಗುತ್ತಿಲ್ಲ. ಎಂದು ಹೇಳಿರುವ ಎಎಪಿ ವಿದ್ಯುತ್ ದರವನ್ನು ಹೆಚ್ಚಿಸಿರುವ ಕ್ರಮವನ್ನು ವಿರೋಧ ಮಾಡಿದೆ.

ಕೋವಿಡ್ 19 ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ- ಎಎಪಿ ಆಕ್ರೋಶ ಕೋವಿಡ್ 19 ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ- ಎಎಪಿ ಆಕ್ರೋಶ

ವಿದ್ಯುತ್ ಶುಲ್ಕ ಪಾವತಿ ಅಸಾಧ್ಯವಾಗಿದೆ.

ವಿದ್ಯುತ್ ಶುಲ್ಕ ಪಾವತಿ ಅಸಾಧ್ಯವಾಗಿದೆ.

ಜನರು ಲಾಕ್ ಡೌನ್ ನಿಯಮಗಳಿಗೆ ಅನುಸಾರವಾಗಿ ಮನೆಯ ಒಳಗಡೆ ಇದ್ದಾರೆ. ಕನಿಷ್ಟ ನೆಮ್ಮದಿಯಿಂದ ದಿನ ಕಳೆಯಲು ದಿನವಿಡೀ ವಿದ್ಯುತ್ ಪೂರೈಕೆ ಮಾಡಬೇಕು. ಅಲ್ಲದೇ ದಿನವಿಡೀ ಫ್ಯಾನ್ ಬಳಕೆ ಮಾಡುವುದರಿಂದ ಗೃಹ ಬಳಕೆಯ ವಿದ್ಯುತ್ ನ ಪ್ರಮಾಣ ಏರಿಕೆಯಾಗುತ್ತದೆ. ಸದ್ಯ ಯಾವುದೇ ಕೆಲಸವಿಲ್ಲದೇ ಆದಾಯ ರಹಿತವಾಗಿ ಬದುಕುತ್ತಿರುವ ಜನರಿಗೆ ವಿದ್ಯುತ್ ಶುಲ್ಕ ಪಾವತಿ ಮಾಡುವುದು ಅಸಾಧ್ಯವಾಗಿದೆ. ಎಂದು ಎಎಪಿ ಹೇಳಿದೆ.

ದೆಹಲಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್

ದೆಹಲಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್

ದೆಹಲಿ ಸರಕಾರವು ದೆಹಲಿಯಲ್ಲಿ ಖಾಸಗಿಯಿಂದ ವಿದ್ಯುತ್ತನ್ನು ಖರೀದಿಸುತ್ತಿದ್ದರೂ, 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದೆ. ಅಂತೆಯೇ 201 ರಿಂದ 400 ಯೂನಿಟ್ ವಿದ್ಯುತ್ ಬಳಸಿದಲ್ಲಿ 50% ಸಬ್ಸಿಡಿಯನ್ನು ಅಲ್ಲಿನ ಸರಕಾರ ನೀಡುತ್ತಿದೆ. ಕರ್ನಾಟಕ ರಾಜ್ಯದ ವಿದ್ಯುತ್ ದರಕ್ಕೂ ದೆಹಲಿಯ ವಿದ್ಯುತ್ ದರಕ್ಕೂ ಇರುವ ವ್ಯತ್ಯಾಸವನ್ನು ಈ ಕೋಷ್ಟಕದಲ್ಲಿ ವಿವರಿಸಲಾಗಿದೆ.


ಯೂನಿಟ್ - ದೆಹಲಿ - ಕರ್ನಾಟಕ
200 - ಉಚಿತ - ರೂ.1560
201-400 - ರೂ. 1075 - ರೂ. 3120

ಆರೋಗ್ಯ ಸಮೀಕ್ಷೆ ಹೆಸರಲ್ಲಿ ಮತದಾರರ ಮಾಹಿತಿ: ಬಿಜೆಪಿ ಮೇಲೆ ಆರೋಪಆರೋಗ್ಯ ಸಮೀಕ್ಷೆ ಹೆಸರಲ್ಲಿ ಮತದಾರರ ಮಾಹಿತಿ: ಬಿಜೆಪಿ ಮೇಲೆ ಆರೋಪ

ರಾಜ್ಯ ಸರ್ಕಾರ ಕೂಡ 200 ಯೂನಿಟ್ ನೀಡಬೇಕು

ರಾಜ್ಯ ಸರ್ಕಾರ ಕೂಡ 200 ಯೂನಿಟ್ ನೀಡಬೇಕು

ಆದರೆ ಸ್ವತಃ ವಿದ್ಯುತ್ ಉತ್ಪತ್ತಿ ಮಾಡುತ್ತಿರುವ ಕರ್ನಾಟಕದಲ್ಲಿ ಮಾತ್ರ ಜನರಿಗೆ ಅಳತೆ ಮೀರಿದ ದರವನ್ನು ವಿಧಿಸಲಾಗುತ್ತಿದೆ. ಸರಕಾರ ತಕ್ಷಣ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಬೇಕು. ಇದರಿಂದ ಸರಕಾರದ ಬೊಕ್ಕಸಕ್ಕೆ ಅಂತಹ ನಷ್ಟವೇನೂ ಇಲ್ಲ. ಇದನ್ನು ಶಾಶ್ವತವಾಗಿ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಟ ಆರು ತಿಂಗಳ ತನಕ ಇದನ್ನು ಜಾರಿಗೊಳಿಸಬೇಕು. ಎಂದು ಆಮ್ ಆದ್ಮಿ ಪಕ್ಷ ಮನವಿ ಮಾಡಿದೆ.

ಸರ್ಕಾರಕ್ಕೆ ಎಎಪಿ ಮನವಿ

ಸರ್ಕಾರಕ್ಕೆ ಎಎಪಿ ಮನವಿ

ರಾಜ್ಯ ನಡೆಸುವುದು ಹವಾನಿಯಂತ್ರಿತ ಕೋಣೆಗಳ ಒಳಗಡೆಯಲ್ಲ, ಬಡ ಜನರ ಸಮಸ್ಯೆಗಳ ಮಧ್ಯೆ ಕೂಡ. ಸರಕಾರಕ್ಕೆ ಅವರ ಕಷ್ಟಗಳನ್ನು ಅರಿಯುವ ಅಂತಃಕರಣ ಬೇಕು. ಇದಕ್ಕಾಗಿ ತಕ್ಷಣ 200 ಯೂನಿಟ್ ತನಕ ಉಚಿತ 24 ಗಂಟೆಗಳ ಕಾಲ ವಿದ್ಯುತ್ತನ್ನು ರಾಜ್ಯದಲ್ಲಿ ಪೂರೈಸಬೇಕು ಎಂದು ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಈ ವಿಷಯದ ಬಗ್ಗೆ ಹಿಂದೆಯೂ ಸರ್ಕಾರದ ಗಮನ ಸೆಳೆದಿದ್ದು, ಈಗ ಪತ್ರ ಮುಖೇನ ಮಾನ್ಯ ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಮನವಿ ಮಾಡಿದ್ದಾರೆ.

English summary
Aam Aadmi Party requested state government to give 200 unit electricity free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X