• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ಎಎಪಿ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಘಟಕವು ವಿಡಂಬನಾತ್ಮಕ ವಿಡಿಯೋ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಫೇಸ್ ಬುಕ್‌ನಲ್ಲಿ ಪೇ ಸಿಎಂ 40%ಗೆ ಪೇ Xcm 20% ಎಂದು ಕಾಂಗ್ರೆಸ್ ಪಕ್ಷದ ಗುರುತನ್ನು ಹಾಕಿ ಪೋಸ್ಟ್ ಮಾಡಿದೆ.

ಆಮ್‌ ಆದ್ಮಿ ಪಾರ್ಟಿಯ ಡಿ.ಎಸ್.ಸಚಿನ್‌ ನೇತೃತ್ವದ ಸಾಮಾಜಿಕ ಜಾಲತಾಣ ನಿರ್ವಹಣಾ ತಂಡವು ಈ ವಿಡಿಯೋ ಮಾಡಿದ್ದು, ಜೆಸಿಬಿ (ಜೆಡಿಎಸ್. ಕಾಂಗ್ರೆಸ್‌, ಬಿಜೆಪಿ) ಪಕ್ಷಗಳ ವಿರುದ್ಧ ಹಾಡು ರಚಿಸಿ ಟೀಕಿಸಲಾಗಿದೆ. ವಿಡಿಯೋಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕೇವಲ ಫೇಸ್‌ಬುಕ್‌ನಲ್ಲೇ ನೂರಕ್ಕೂ ಹೆಚ್ಚು ಜನರು ಶೇರ್‌ ಮಾಡಿದ್ದಾರೆ.

"ಬೊಮ್ಮಾಯಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಇದಕ್ಕೆ ಸಿದ್ದಣ್ಣ ಕುಮಾರಣ್ಣನ ಸಹಕಾರ" ಎಂಬಂತಹ ಪ್ರಾಸಬದ್ಧ ಸಾಲುಗಳು ಹಾಡಿನಲ್ಲಿದೆ. ಜಾತಿ ಧರ್ಮಗಳ ಹೆಸರನಲ್ಲಿ ಜನರನ್ನು ಒಡೆಯಲಾಗುತ್ತಿದ್ದು, ಇದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂಬರ್ಥದ ಸಾಲುಗಳಿವೆ. ವಿಡಿಯೋ ನೋಡಿದ ಜನರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ವಿರುದ್ಧ ಕಮೆಂಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

AAP released a video about BJP Congress JDS Corruption

English summary
The state unit of Aam Aadmi Party has made a satirical video against the corruption of BJP, Congress and JDS parties and shared it on social media. Pay CM 40% and Pay Xcm 20% posted on Facebook with the identity of the Congress party, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X