ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಸಮೀಕ್ಷೆ ಹೆಸರಲ್ಲಿ ಮತದಾರರ ಮಾಹಿತಿ: ಬಿಜೆಪಿ ಮೇಲೆ ಆರೋಪ

|
Google Oneindia Kannada News

ಬೆಂಗಳೂರು, ಮೇ 11: ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಬಿಎಲ್‌ಒಗಳ ಮಾರ್ಗದರ್ಶನದಲ್ಲಿ ಶಿಕ್ಷಕರನ್ನು ಬಳಸಿಕೊಂಡು 'ಸಾರ್ವತ್ರಿಕ ಆರೋಗ್ಯ ಸಮೀಕ್ಷೆ' ನಡೆಸಲಾಗುತ್ತಿದೆ. ಇಡೀ ದೇಶದಲ್ಲೆ ಸಮೀಕ್ಷೆಯನ್ನು ರಾಜ್ಯದಲ್ಲಿಯೇ ಮೊದಲು ಮಾಡುತ್ತಿರುವುದು ಎನ್ನುವುದು ಸಂತೋಷದ ವಿಷಯ. ಆದರೆ, ಈ ಸಮೀಕ್ಷೆಯನ್ನು ಬಿಜೆಪಿ ದುರುಪಯೋಗ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.

Recommended Video

ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ | Oneindia Kannada

ಸಮೀಕ್ಷೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರು ಮತದಾರರ ಪಟ್ಟಿಯ ಆಧಾರದ ಮೇಲೆ ಮನೆ ಮನೆಗೆ ತೆರಳಿ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಕೊರೊನಾ ಮತ್ತೆ ತೀವ್ರವಾಗಿ ಹರಡುತ್ತಿರುವ ವೇಳೆ ಶಿಕ್ಷಕರಿಗೆ ಯಾವುದೇ ರೀತಿಯ ಆರೋಗ್ಯ ಸೌಲಭ್ಯಗಳನ್ನು ನೀಡದೆ ಮನೆ, ಮನೆಗೆ ಕಳುಹಿಸುತ್ತಿರುವುದು ಸರ್ಕಾರದ ಬೇಜವಾಬ್ದಾರಿ ನಡೆ ಎಂದು ಎಎಪಿ ಆರೋಪಿಸಿದೆ.

ಬಿಲ್ಡರ್‌ಗಳ ಲಾಭಿಗೆ ಸರ್ಕಾರ ಮಣಿದಿದೆ: ಎಎಪಿ ಅಸಮಾಧಾನಬಿಲ್ಡರ್‌ಗಳ ಲಾಭಿಗೆ ಸರ್ಕಾರ ಮಣಿದಿದೆ: ಎಎಪಿ ಅಸಮಾಧಾನ

ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ 50 ವರ್ಷ ಮೀರಿದ ಮಹಿಳಾ ಶಿಕ್ಷಕರು ಹಾಗೂ 55 ವರ್ಷ ಪುರುಷ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಲ್ಲಿ ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಿದ್ದರೂ ಸಹ ಬೆಂಗಳೂರು ನಗರ ಒಂದರಲ್ಲೆ ಒಂದಷ್ಟು ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಎಂದು ಬಿಜೆಪಿ ವಿರುದ್ಧ ಎಎಪಿ ಆಕ್ರೋಶ ವ್ಯಕ್ತಪಡಿಸಿದೆ.

ಸರಿಯಾದ ವಾಹನ ವ್ಯವಸ್ಥೆ ಇಲ್ಲ

ಸರಿಯಾದ ವಾಹನ ವ್ಯವಸ್ಥೆ ಇಲ್ಲ

ಶಿಕ್ಷಕರು ಕಾರ್ಯ ನಿರ್ವಹಿಸುವ ವಲಯದಲ್ಲೆ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದ್ದು, ಶಿಕ್ಷಕರು ಸರಿಯಾದ ವಾಹನ ವ್ಯವಸ್ಥೆ ಇಲ್ಲದೆ, ಆಟೋಗಳಿಗೆ ದುಪ್ಪಟ್ಟು ಹಣ ನೀಡಿ, ಕೆಲಸ ಮಾಡುತ್ತಿರುವ ಸ್ಥಳಗಳಿಗೆ ತೆರಳಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ಒಬ್ಬ ಶಿಕ್ಷಕ ಸುಮಾರು 1 ಸಾವಿರ ಜನರ ಮಾಹಿತಿ ಸಂಗ್ರಹಿಸಬೇಕಾದ ಪರಿಸ್ಥಿತಿ ಎದುರಾಗಿದೆ‌. ಕೆಲವೊಂದು ಕಡೆ ಕಳೆದ ಎರಡು, ಮೂರು ದಿನಗಳಿಂದ ಎಡತಾಕುತ್ತಿದ್ದರೂ, ಜನರು ಭಯಭೀತರಾಗಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಎಂದು ಎಎಪಿ ತಿಳಿಸಿದೆ.

ಎಎಪಿ ಆರೋಪಗಳು

ಎಎಪಿ ಆರೋಪಗಳು

* ಆಧಾರ್‌ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆಯ ಸಮೇತ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಸಂಗ್ರಹ ಮಾಡಲಾಗುತ್ತಿದೆ.

* ಚುನಾವಣೆ ವೇಳೆ ಈ ಮಾಹಿತಿ ದುರುಪಯೋಗ ಆಗುವುದಿಲ್ಲ ಎನ್ನುವುದಕ್ಕೆ ಸರ್ಕಾರ ಯಾವ ಭರವಸೆ ನೀಡುತ್ತದೆ?

* ಸಮೀಕ್ಷೆಗೆ ಕೇವಲ 5 ದಿನಗಳ ಗಡುವು ನೀಡಿ ತರಾತುರಿಯಲ್ಲಿ ಮುಗಿಸುತ್ತಿರುವುದು ಏಕೆ?.

* ಮುಂದಿನ ದಿನಗಳಲ್ಲಿ ಇದರಿಂದ ಚುನಾವಣಾ ಅಕ್ರಮ ನಡೆದರೆ ಯಾರು ಹೊಣೆ.

ಸರ್ಕಾರಿ ಬಸ್‌ನಲ್ಲಿ ಮೂರು ಪಟ್ಟು ದರ: ಖಂಡಿಸಿದ ಎಎಪಿಸರ್ಕಾರಿ ಬಸ್‌ನಲ್ಲಿ ಮೂರು ಪಟ್ಟು ದರ: ಖಂಡಿಸಿದ ಎಎಪಿ

ಇದು ಎಷ್ಟರ ಮಟ್ಟಿಗೆ ಸುರಕ್ಷಿತ

ಇದು ಎಷ್ಟರ ಮಟ್ಟಿಗೆ ಸುರಕ್ಷಿತ

* ಸಮೀಕ್ಷೆ ನಡೆದ ನಂತರ ಮಾಹಿತಿಯನ್ನು ಅಪ್‌ಲೋಡ್ ಮಾಡಲು ರಾಜ್ಯ ಸರಕಾರ ‘ಹೆಲ್ತ್‌ ವಾಚ್‌' ಎಂಬ ಮೊಬೈಲ್‌ ಆಪ್ ಅನ್ನು ಅಭಿವೃದ್ಧಿಪಡಿಸಿದೆ. ಮತಗಟ್ಟೆ ಅಧಿಕಾರಿಗಳು ತಮ್ಮ ಮೊಬೈಲ್‌ ಫೋನ್‌ಗೆ ಈ ಆಪ್ ಡೌನ್‌ಲೋಡ್ ಮಾಡಿಕೊಂಡು ನೇರವಾಗಿ ಮತದಾರರ ಆರೋಗ್ಯ ಮಾಹಿತಿಗಳನ್ನು ತುಂಬಬಹುದು. ನಂತರ ಈ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುವ ಗಣಕಯಂತ್ರ ಅಥವಾ ಲ್ಯಾಪ್‌ಟಾಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ ಇದು ಎಷ್ಟರ ಮಟ್ಟಿಗೆ ಸುರಕ್ಷಿತ.

ಪ್ರಶ್ನೆಗಳಿಗೆ ಉತ್ತರ ನೀಡಬೇಕು

ಪ್ರಶ್ನೆಗಳಿಗೆ ಉತ್ತರ ನೀಡಬೇಕು

* ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರ, ವಲಸೆ ಕಾರ್ಮಿಕರ ಆರೋಗ್ಯದ ಮಾಹಿತಿ ನಿಮಗೆ ಅಗತ್ಯವಿಲ್ಲವೆ.

* ಹಾಗಾದರೆ ಕೇವಲ ಮತದಾನ ಮಾಡುವವರ ಆರೋಗ್ಯ ಮಾತ್ರ ನಿಮಗೆ ಮುಖ್ಯವೇ ಆರೋಗ್ಯ ಸಚಿವರೇ.

* ಆಡಳಿತ ಪಕ್ಷದ ಸದಸ್ಯರು ಈ ಮಾಹಿತಿಯ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ನೀಡುತ್ತೀರಿ ಆರೋಗ್ಯ ಸಚಿವರೆ.

English summary
AAP questioned BJP about covid19 health survey. state government doing a health survey in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X