ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಚಾರದ ವೇಳೆ ಅಮಿತ್ ಶಾ ಗೆ ಪೊರಕೆ-ಆಪ್‌ಗೆ ಚಪ್ಪಲಿ ಪ್ರದರ್ಶನ

By Manjunatha
|
Google Oneindia Kannada News

ಬೆಂಗಳೂರು, ಮೇ 09: ನಗರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರೋಡ್‌ ಶೋ ನಡೆಸುತ್ತದ್ದ ವೇಳೆ ಎದುರಿಗೆ ಬಂದ ಆಪ್‌ ಕಾರ್ಯಕರ್ತರು ತಮ್ಮ ಪಕ್ಷದ ಗುರುತು ಪೊರಕೆಯನ್ನು ಪ್ರದರ್ಶಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಅವರಿಗೆ ಚಪ್ಪಲಿ ಪ್ರದರ್ಶಿಸಿದ್ದಾರೆ.

ಪಲಾಯನವಾದಿ ಸಿದ್ದರಾಮಯ್ಯನಿಂದ ಕಾಂಗ್ರೆಸ್‌ ಗೆಲ್ಲಿಸೋಕಾಗಲ್ಲ:ಶಾ ಟೀಕೆಪಲಾಯನವಾದಿ ಸಿದ್ದರಾಮಯ್ಯನಿಂದ ಕಾಂಗ್ರೆಸ್‌ ಗೆಲ್ಲಿಸೋಕಾಗಲ್ಲ:ಶಾ ಟೀಕೆ

ಆಪ್ ಕಾರ್ಯಕರ್ತೆಯರು ಮಾಮೂಲಿನಂತೆ ತಮ್ಮ ಪಕ್ಷದ ಗುರುತಾದ ಪೊರಕೆಯನ್ನು ಹಿಡಿದು ಪ್ರಚಾರ ಮಾಡುತ್ತಿದ್ದರು ಆಗ ಅದೇ ಸಮಯಕ್ಕೆ ಎದುರಿನಿಂದ ಅಮಿತ್ ಶಾ ರೋಡ್‌ ಶೊ ಬಂತು, ಬಿಜೆಪಿ ಕಾರ್ಯಕರ್ತರು ಜೋರಾಗಿ ಮೋದಿ, ಮೋದಿ ಎಂದು ಘೋಷಣೆ ಕೂಗಿದರು.

ಮೋದಿ ಮತ್ತು ಅಮಿತ್ ಶಾ ಸುಳ್ಳಿನ ಸರದಾರರು: ಖರ್ಗೆ ವಾಗ್ದಾಳಿ ಮೋದಿ ಮತ್ತು ಅಮಿತ್ ಶಾ ಸುಳ್ಳಿನ ಸರದಾರರು: ಖರ್ಗೆ ವಾಗ್ದಾಳಿ

ಇದಕ್ಕೆ ಪ್ರತಿಯಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಆಪ್ ಕಾರ್ಯಕರ್ತರು ತಮ್ಮ ಪಕ್ಷದ ಗುರುತು ಪೊರಕೆಯನ್ನು ಹಿಡಿದುಕೊಂಡು ಆಪ್‌ಪರ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಚಪ್ಪಲಿಗಳನ್ನು ತೋರಿಸಿದರು.

AAP party workers show broom stick BJP workers show Slippers

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗುವ ಸಾಧ್ಯತೆ ಇತ್ತು ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಯಾವುದೇ ಅಹಿತಕರ ಘಟನೆ ತಡೆಯದಂತೆ ತಡೆದರು. ಅಲ್ಲದೆ ಅಮಿತ್ ಶಾ ಸ್ವತಃ ಮೈಕ್ ಪಡೆದುಕೊಂಡು ಕಾರ್ಯಕರ್ತರನ್ನು ಬೇಗೆ ಬೇಗ ಮುಂದೆ ಹೋಗುವಂತೆ ಸೂಚನೆ ನೀಡಿದರು.

English summary
AAP Party workers show their party symbol broom stick to BJP leader Amit Shah while they campaign in Bengaluru. In return BJP party workers show Slippers to the AAP party workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X