ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ಚಾಲಕರಿಗೆ 5000 ರೂ ಸಹಾಯಧನಕ್ಕೆ ಆಪ್ ಆಗ್ರಹ

|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಕೊರೊನಾ ದುರಂತದಿಂದ ಸಂಕಷ್ಟಕ್ಕೆ ತುತ್ತಾಗಿರುವ ರಾಜ್ಯದಲ್ಲಿ ವಾಣಿಜ್ಯ ವಾಹನಗಳನ್ನು ಚಲಾಯಿಸುವ ಚಾಲಕರಿಗೆ ಸರ್ಕಾರ 5000 ರುಪಾಯಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರದ ಮುಖೇನ ಸರ್ಕಾರಕ್ಕೆ ಒತ್ತಾಯಿಸಿರುವ ಅವರು, ಚಾಲಕ ವರ್ಗಗಳು ಅಸಂಘಟಿತ ಕಾರ್ಮಿಕರಾಗಿದ್ದು ಸರಕಾರದಿಂದ ಕೊಡಮಾಡುವ ಸವಲತ್ತುಗಳಿಂದ ಬಹುತೇಕ ವಂಚಿತರಾಗಿರುತ್ತಾರೆ ಎಂದಿದ್ದಾರೆ.

ಜನರಿಗೆ ಆರೋಗ್ಯ ಒದಗಿಸುವಲ್ಲಿ ಹಿಂದುಳಿದ ರಾಜ್ಯ ಸರ್ಕಾರ: ಎಎಪಿಜನರಿಗೆ ಆರೋಗ್ಯ ಒದಗಿಸುವಲ್ಲಿ ಹಿಂದುಳಿದ ರಾಜ್ಯ ಸರ್ಕಾರ: ಎಎಪಿ

ತಮ್ಮ ಜೀವಿತಾವಧಿಯ ಪೂರ್ಣ ಚಾಲನಾ ಕಾರ್ಯದಲ್ಲಿ ಮಗ್ನರಾಗಿದ್ದು ಇದೀಗ ಲಾಕ್ ಡೌನ್ ಪರಿಣಾಮವಾಗಿ ಅವರುಗಳ ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳುವ ಸಾಧ್ಯತೆಗಳು ಇವೆ. ಆಟೊ,ಲಗೇಜ್ ಆಟೋ ಚಾಲಕರುಗಳು , ಓಲಾ- ಉಬೆರ್ ಕಾರು ಚಾಲಕರುಗಳು ,ಖಾಸಗಿ ಟ್ರಕ್-ಬಸ್ ಚಾಲಕರುಗಳು ಇನ್ನು ಮುಂತಾದ ವಾಣಿಜ್ಯ ವಾಹನಗಳನ್ನು ಓಡಿಸುವ ಚಾಲಕರುಗಳು ಹಾಗೂ ಅವರ ಕುಟುಂಬ ಸದಸ್ಯರುಗಳು ಅಚಾನಕ್ಕಾಗಿ ಬಂದೊದಗಿದ ಈ ಮಹಾಮಾರಿಯ ಲಾಕ್ ಡೌನ್ ಪರಿಣಾಮವಾಗಿ ಅತ್ಯಂತ ಹೀನಾಯ ಪರಿಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಹೇಳಿದ್ದಾರೆ.

AAP Party Demand To Government About 5000 Rupees For Commercial Vehicle Drivers Ahead Of Coronavirus Outbreak

ಮಾನಸಿಕ ಕ್ಷೋಭೆಗೂ ಸಹ ಗುರಿಯಾಗುವ ಸಂಭವವಿರುವುದರಿಂದ ಈ ಚಾಲಕ ವರ್ಗಗಳಿಗೆ ಸರ್ಕಾರವು ಈ ಕೂಡಲೇ ತಕ್ಷಣದಿಂದ 5000 ರೂ.ಗಳ ಸಹಾಯಧನವನ್ನು ಅವರುಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ ಎಂದಿದ್ದಾರೆ.

English summary
AAP Party Demand To Government About 5000 Rupees For Commercial Vehicle Drivers Ahead Of Coronavirus Outbreak, AAP Karnataka State Convincer Pruthvi Reddy Said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X