ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗೆ ಉಚಿತ ಬಸ್‌ಪಾಸ್ ಯೋಜನೆ ಘೋಷಿಸಿ: ಎಎಪಿ

|
Google Oneindia Kannada News

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ತರಬೇಕು, ಮಹಿಳಾ ದಿನಾಚರಣೆ ಹೊತ್ತಿನಲ್ಲಿ ಉಡುಗೊರೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಆಗ್ರಹಿಸಿದರು.

ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯ ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಹಿಳೆಯರಿಗೆ ಎಲ್ಲಾ ಪ್ರಕಾರಗಳ ಸಾರಿಗೆ ವ್ಯವಸ್ಥೆಯಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿತು. ಇದೇ ಮಾದರಿಯನ್ನು ಬೆಂಗಳೂರು ನಗರದ ಮಹಿಳೆಯರಿಗೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಕಳೆದ ವರ್ಷ ಮಾರ್ಚ್ 5 ರಂದು ಪಕ್ಷದ ನಿಯೋಗ ಭೇಟಿ ಮಾಡಿ ಈ ಯೋಜನೆ ಜಾರಿಗೆ ತರುವಂತೆ ಮನವಿ ಸಲ್ಲಿಸಿತ್ತು.

ಕರ್ನಾಟಕ ರಾಜ್ಯ ಬಜೆಟ್ 2021: ಆಮ್ ಆದ್ಮಿ ಪಕ್ಷ ಬೇಡಿಕೆಗಳೇನು? ಕರ್ನಾಟಕ ರಾಜ್ಯ ಬಜೆಟ್ 2021: ಆಮ್ ಆದ್ಮಿ ಪಕ್ಷ ಬೇಡಿಕೆಗಳೇನು?

ಆದರೆ ಇದನ್ನು ತಪ್ಪು ತಪ್ಪಾಗಿ ನಕಲು ಮಾಡಿದ ಯಡಿಯೂರಪ್ಪ ಅವರು ಕಳೆದ ಬಜೆಟ್ ವೇಳೆ ಕೇವಲ ಗಾರ್ಮೆಂಟ್ಸ್ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ ಯೋಜನೆ ಘೋಷಣೆ ಮಾಡಿದರೆ ಹೊರತು ಕೊರೋನಾ ನೆಪವೊಡ್ಡಿ ನಯಾ ಪೈಸೆ ಹಣ ಬಿಡುಗಡೆ ಮಾಡಲಿಲ್ಲ. ಈ ಬಾರಿಯಾದರೂ ನಂಬಿಕೆ ದ್ರೋಹ ಮಾಡದೆ ಆಮ್ ಆದ್ಮಿ ಪಕ್ಷದ ಮನವಿಗೆ ಸ್ಪಂದಿಸಬೇಕು ಎಂದರು.

AAP Karnataka demands Free Bus Pass to all Women

ನಗರ ಭಾಗದಲ್ಲಿ ಜೀವನ ನಡೆಸಲು ಗಂಡ-ಹೆಂಡತಿ ಇಬ್ಬರು ದುಡಿಯಬೇಕಾದ ಪರಿಸ್ಥಿತಿ ಇದೆ. ಇದನ್ನು ಸರಿದೂಗಿಸಬೇಕಾದರೆ ದುಡಿಮೆಗೆ ಹೋಗುವ ಮಹಿಳೆಯರಿಗೆ ಉಚಿತ ಸಾರಿಗೆ ನೀಡಬೇಕು.
ನಮ್ಮ ದೇಶದಲ್ಲಿ ದುಡಿಯುತ್ತಿರುವ ಗಂಡ ಹೆಂಡತಿಯರ ಸರಾಸರಿ ಶೇ 21 ರಷ್ಟಿದೆ.

ತೃತಿಯ ಜಗತ್ತಿನ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಲ್ಲಿ ಈ ಪ್ರಮಾಣ ಶೇ 46 ರಷ್ಟಿದೆ. ಇದನ್ನು ಹೆಚ್ಚಳ ಮಾಡಲು ಯೋಜನೆ ರೂಪಿಸಬೇಕು.
ದೆಹಲಿಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಿದ್ದೇ ಮಹಿಳೆಯರಿಗೆ ಉಚಿತ ಸಾರಿಗೆ ಯೋಜನೆ. ಆದ ಕಾರಣ ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಮಹಿಳಾಪರವಾದ ಉಚಿತ ಬಸ್‌ಪಾಸ್ ಯೋಜನೆ ಸರಿಯಾದ ರೀತಿಯಲ್ಲಿ ಘೋಷಣೆ ಮಾಡದಿದ್ದರೆ ಆಮ್ ಆದ್ಮಿ ಪಕ್ಷ ಸುಮ್ಮನೆ ಕೂರುವುದಿಲ್ಲ, ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಹಿಳಾ ಘಟಕದ ಸುಧಾ‌ಮಣಿ, ಯುವ ಘಟಕದ ಉಪಾಧ್ಯಕ್ಷೆ ಸಿಂಧು ಮಳವಳ್ಳಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Recommended Video

100ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ | Farmers Protest | Oneinda Kannada

English summary
Karnataka Budget 2021: AAP Karnataka demands CM BS Yediyurappa to announce Free Bus Pass to all Women travellers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X