ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಾಂಗ್ರೆಸ್ಸಿನ ಮತ ಬ್ಯಾಂಕ್ ಒಡೆಯಲಿದೆ ಈ ಪಕ್ಷ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 14: ಐದು ವರ್ಷಗಳ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ಸಿಗೆ ಈ ಬಾರಿಯ ಚುನಾವಣೆ ಭಾರಿ ಪ್ರತಿಷ್ಠೆಯ ವಿಷಯವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಮಟ್ಟ ಹಾಕಲು, ಬಿಜೆಪಿ ಹಾಗೂ ಜೆಡಿಎಸ್ ಅಲ್ಲದೆ ಈಗ ಆಮ್ ಆದ್ಮಿ ಪಕ್ಷ ಕೂಡಾ ಸಜ್ಜಾಗುತ್ತಿದೆ.

ಮುಂದಿನ ವಾರ 30 ರಿಂದ 40 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಪಾರಂಪರಿಕ ರಾಜಕಾರಣ ಬಿಟ್ಟು ಜನಪರ ಕೆಲಸ ಮಾಡುವ ಅಭ್ಯರ್ಥಿಗಳನ್ನು ಹುಡುಕಿ, ಕಣಕ್ಕಿಳಿಸಲಾಗುತ್ತಿದೆ.

ಸಂದರ್ಶನ : ಕೆ.ಜೆ.ಜಾರ್ಜ್ ವಿರುದ್ಧ ಸ್ಪರ್ಧಿಸುವುದು ದೊಡ್ಡ ಸವಾಲು ಅಲ್ಲ!ಸಂದರ್ಶನ : ಕೆ.ಜೆ.ಜಾರ್ಜ್ ವಿರುದ್ಧ ಸ್ಪರ್ಧಿಸುವುದು ದೊಡ್ಡ ಸವಾಲು ಅಲ್ಲ!

ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಿ ನಿಲ್ಲುವ ವ್ಯಕ್ತಿಗಳ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇರಬಾರದು. ಆದ್ದರಿಂದ, ಅಭ್ಯರ್ಥಿಗಳ ಆಯ್ಕೆಯಾದರೂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹೆಸರನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಎಎಪಿ ಕರ್ನಾಟಕ ಸಂಚಾಲಕ ಪೃಥ್ವಿರೆಡ್ಡಿ ಅವರು ಒನ್ಇಂಡಿಯಾಕ್ಕೆ ನೀಡಿದ ಸಂದರ್ಶನದ ವೇಳೆ ಹೇಳಿದರು.

AAP entering Election fray may hurt Congress Vote Share

'ಬೆಂಗಳೂರಿನ 28 ಕ್ಷೇತ್ರಗಳಲ್ಲಿಯೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರಾಜ್ಯದ 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇವೆ. 30 ಶಾಸಕರನ್ನು ವಿಧಾನಸಭೆ ಆರಿಸಿ ಕಳಿಸುವುದು ನಮ್ಮ ಗುರಿ' ಎಂದು ಸಹ ಸಂಚಾಲಕ ಶಿವಕುಮಾರ್ ಹೇಳಿದ್ದಾರೆ.

ಎಲ್ಲ ಪಕ್ಷಗಳಿಗೆ ಮರ್ಮಾಘಾತ : ಕರ್ನಾಟಕ ಆಪ್ ಶಪಥಎಲ್ಲ ಪಕ್ಷಗಳಿಗೆ ಮರ್ಮಾಘಾತ : ಕರ್ನಾಟಕ ಆಪ್ ಶಪಥ

ಆದರೆ, ಬಿಜೆಪಿ, ಜೆಡಿಎಸ್ ಗಿಂತ ಕಾಂಗ್ರೆಸ್ ಪಕ್ಷಕ್ಕೆ ಎಎಪಿ ಭಾರಿ ಹೊಡೆತ ನೀಡುವ ಮುನ್ಸೂಚನೆ ಸಿಕ್ಕಿದೆ. ಎಎಪಿ ಗೆಲುವಿನ ಬಗ್ಗೆ ಯಾರೂ ಸ್ಪಷ್ಟವಾಗಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಆದರೆ, ಮತ ಬ್ಯಾಂಕ್ ಒಡೆಯುವಲ್ಲಿ ಎಎಪಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

5 ವರ್ಷದ ಹಿಂದೆ ನಾವು ಪ್ರಾಮಾಣಿಕ ರಾಜಕಾರಣದ ಬಗ್ಗೆ ಮಾತನಾಡಿದ್ದು ಕನಸಾಗಿತ್ತು. ಆದರೆ, ಈಗ ಜನರು ಬೆಂಬಲ ಕೊಟ್ಟು ಅದನ್ನು ನನಸು ಮಾಡಿದ್ದಾರೆ. ಮೂರು ವರ್ಷದಿಂದ ನಾವು ದೆಹಲಿಯಲ್ಲಿ ಆಡಳಿತ ಮಾಡುತ್ತಿದ್ದೇವೆ. ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೇವೆ. ಪ್ರಾಮಾಣಿಕರಿಗೆ ಅಧಿಕಾರ ಕೊಟ್ಟರೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಜನರಿಗೆ ಬಂದಿದೆ. ಕರ್ನಾಟಕದ ಜನರೂ ಇದೇ ನಂಬಿಕೆ ಮೇಲೆ ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಆಶಯ ನಮ್ಮದು ಎಂದು ಎಎಪಿ ಹೇಳಿಕೊಂಡಿದೆ.

English summary
With AAP taking the plunge in all 28 Bengaluru seats, which party would it hurt? AAP will eat into Congress’ vote share. It will not dent any party’s prospects says Political experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X