ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ ಮಾದರಿಯಲ್ಲಿ ಬಿಬಿಎಂಪಿಯಲ್ಲಿ ವಾರ್ಡ್ ನಿರ್ವಹಣೆಗೆ ಕೈಪಿಡಿ

|
Google Oneindia Kannada News

ಬೆಂಗಳೂರು, ಸೆ. 16: ದೆಹಲಿಯಲ್ಲಿ ಕಳೆದ 4.5 ವರ್ಷಗಳ‌ ಕಾಲ ಆಮ್ ಆದ್ಮಿ ಪಾರ್ಟಿ ಸರ್ಕಾರವಿದ್ದು, ಸಾಮಾನ್ಯ ಜನರು ಸರ್ಕಾರದ ಜೊತೆ ಕೈ ಜೋಡಿಸಿದರೆ ಎಷ್ಟೆಲ್ಲಾ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಅಂತ ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ. ಈ ತರಹದ ಮಾದರಿ ನಮ್ಮ ಬೆಂಗಳೂರಿಗೂ ತರುವ ನಿಟ್ಟಿನಲ್ಲಿ ಆಮ್ ಆದ್ಮಿ ಪಾರ್ಟಿ ಕರ್ನಾಟಕ ಪ್ರತೀ ಬೆಂಗಳೂರಿಗರನ್ನು ಸದೃಢಗೊಳಿಸುವ ಸಲುವಾಗಿ ವಾರ್ಡ ನಿರ್ವಹಣಾ ಮಾಹಿತಿ ಕೈಪಿಡಿಯನ್ನು ರೂಪಿಸಿದೆ, ಇದರಿಂದ ಬೆಂಗಳೂರಿಗರು ಬಿಬಿಎಂಪಿಯನ್ನು ಸ್ಥಳೀಯ ಸಮಸ್ಯೆಗಳಿಗೆ ಜವಾಬ್ದಾರಿ ಗಳನ್ನಾಗಿ ಮಾಡಬಹುದು.

ಕರ್ನಾಟಕದ ಪಾರಂಪಾರಿಕ ರಾಜಕೀಯ ಪಕ್ಷಗಳು, ಅಧಿಕಾರದಾಹ ಮತ್ತು ಬೇಜವಾಬ್ದಾರಿಯಿಂದ ತುಂಬಿದ್ದು, ವಾರ್ಡ್ ಸಮಿತಿ ಸದಸ್ಯತ್ವಕ್ಕಾಗಿ ಬಂದ 500ಕ್ಕೂ ಹೆಚ್ಚು ಅರ್ಜಿಗಳನ್ನು ತಡೆಗಟ್ಟಿ, ಸರಿಯಾದ ಸಮಿತಿ ರಚನೆಯಾಗದಂತೆ, ಸಕಲ ಪ್ರಯತ್ನ ನಡೆಸಿದವು. ಆದರೆ ಆಮ್ ಆದ್ಮಿ ಪಾರ್ಟಿ ಜನಸಾಮಾನ್ಯರ ಬೆಂಬಲಕ್ಕೆ ನಿಂತಿದೆ. ವಾರ್ಡ್ ಮಟ್ಟದ ಎಲ್ಲಾ ನಿರ್ವಹಣೆಯ ಕೆಲಸದ ಪರದೆಯನ್ನು ಸರಿಸಿ ಅದನ್ನು ಪಾರದರ್ಶಕವಾಗುವಂತೆ ಮಾಡಿದೆ.

ಎಎಪಿಯಿಂದ ಬಿಬಿಎಂಪಿ ಚುನಾವಣೆಗೆ ದೆಹಲಿ ಮಾದರಿ ರಣತಂತ್ರಎಎಪಿಯಿಂದ ಬಿಬಿಎಂಪಿ ಚುನಾವಣೆಗೆ ದೆಹಲಿ ಮಾದರಿ ರಣತಂತ್ರ

ಆಮ್ ಆದ್ಮಿ ಪಾರ್ಟಿಯ ನಡೆ ಕೇವಲ ಜನರ ಪೌರ ಸಮಸ್ಯೆಗಳ ಪರಿಹಾರವಷ್ಟೇ ಅಲ್ಲ, ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಸ್ತರದ ನಗರವನ್ನಾಗಿ ಮಾಡುವ ಕನಸನ್ನೂ ಹೊಂದಿದೆ. ಇದಕ್ಕಾಗಿ ದೆಹಲಿ ಮಾದರಿಯಲ್ಲಿ, ಸಮಗ್ರ ಮುನ್ನೋಟ ಮತ್ತು ನವೀನ ಚಿಂತನೆಯುಳ್ಳ ಸ್ವಯಂಸೇವಕರ ತಂಡ, ನಿವೃತ್ತ ಹಿರಿಯ ಐ.ಎ.ಎಸ್. ಅಧಿಕಾರಿ ಶ್ರೀಮತಿ ರೇಣುಕಾ ವಿಶ್ವನಾಥನ್ ಅವರ ಮಾರ್ಗದರ್ಶನದಲ್ಲಿ, ವಿಸ್ತೃತವಾದ ವಾರ್ಡ್ ನಿರ್ವಹಣಾ ಕೈಪಿಡಿ ಹೊರತಂದಿದೆ.

AAP Empowers Citizens with Ward Management Manual

ತಂಡವು ಸತತವಾಗಿ ಕೆಲವು ತಿಂಗಳಿಂದ ಶ್ರಮ ಪಟ್ಟು ವಾರ್ಡ್-82 (ದೊಡ್ಡಾನೆಕುಂಡಿ)ರ ವಿವಿದ ವಿಭಾಗಗಳ ಸಕಲ ಮಾಹಿತಿಯನ್ನು ಸಂಗ್ರಹಿಸಿ, ಅಲ್ಲಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಂದ ವಾರ್ಡಿನ ಸಮಗ್ರ ಅಭಿವೃಧಿಗೆ ಬೇಕಾದ ಕೆಲಸ ತೆಗೆಸಲು, ಅವರನ್ನು ಜವಾಬ್ದಾರಿಯುತವಾಗಿ ಮಾಡಲು, ಈ ಕೈಪಿಡಿ ಹೊರತಂದಿದೆ. ಮುಂಬರುವ ದಿನಗಳಲ್ಲಿ ಮಿಕ್ಕ ವಾರ್ಡುಗಳ ಮಾಹಿತಿ ಕೈಪಿಡಿಗಳನ್ನೂ ಹೊರತರಲಾಗುವುದು. ಇದರಿಂದ ಜನಸಾಮಾನ್ಯರಿಗೆ ಬಿಬಿಎಂಪಿಯಿಂದ ತಮ್ಮ ತಮ್ಮ ವಾರ್ಡಿನ ಕೆಳಕಂಡ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ.

ಸಮಸ್ಯೆಗಳ ಆಗರವಾಗುತ್ತಿರುವ ಬೆಂಗಳೂರು, ಬಿಬಿಎಂಪಿ ನಿಜಕ್ಕೂ ಅಸ್ತಿತ್ವದಲ್ಲಿದೆಯೇ?ಸಮಸ್ಯೆಗಳ ಆಗರವಾಗುತ್ತಿರುವ ಬೆಂಗಳೂರು, ಬಿಬಿಎಂಪಿ ನಿಜಕ್ಕೂ ಅಸ್ತಿತ್ವದಲ್ಲಿದೆಯೇ?

• ವಾರ್ಡ್ ನಿರ್ವಹಣೆ
• ವಾರ್ಡಿನ ಮುಂಗಡ ಪತ್ರ ತಯಾರಿಕೆ
• ವಾರ್ಡಿನ ಸಮಗ್ರ ಅಭಿವೃದ್ಧಿಯ ನಕ್ಷೆ ತಯಾರಿಸುವುದು
• ವಾರ್ಡಿನ ಪೌರ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸುವುದು.

ಈ ಕೈಪಿಡಿಯಿಂದ ಅನೇಕ ಸ್ವಯಂಸೇವಿ ಸಂಸ್ಥೆಗಳು ಇದುವರೆಗೆ ಮಾಡಿರುವ ಉತ್ತಮ ಕೆಲಸಕ್ಕೆ ಬಲ ಬಂದು, ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಜನರ ಸಹಭಾಗಿತ್ವಕ್ಕೆ ಅವಕಾಶ ಸಿಗುತ್ತದೆ. ಮುಂದುವರೆದು, ಈ ಕೈಪಿಡಿಯನ್ನು ಸ್ವಯಂಸೇವಾ ಸಂಸ್ಥೆಗಳು ಅವಲೋಕಿಸುವಂತೆ ತಿಳಿಸಿ, ಅವರಿಂದ ಸಲಹೆ/ಸೂಚನೆ ಬಂದ ನಂತರ, ಶೀಘ್ರದಲ್ಲಿ ಒಂದು ಕಾರ್ಯಾಗಾರ ಏರ್ಪಡಿಸಿ, ಈ ಕೈಪಿಡಿಯನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು ಮತ್ತು ಬಿಬಿಎಂಪಿಯ ಆಡಳಿತದಲ್ಲಿ ಜನರ ಸಹಭಾಗಿತ್ವಕ್ಕೆ ಈಗಿರುವ ಅಡೆ-ತಡೆಗಳನ್ನು ಹೋಗಲಾಡಿಸಲಾಗುವುದು. ಆಮ್ ಆದ್ಮಿ ಪಾರ್ಟಿ ನಾಗರಿಕರಿಗೆ ಈ ಕೈಪಿಡಿಯ ಬಳಸಿಕೊಂಡು, ಬೆಂಗಳೂರಿನ ಆಡಳಿತದಲ್ಲಿ ಸಹಭಾಗಿಯಾಗಲು ಕರೆ ನೀಡುತ್ತಿದೆ. ತಮ್ಮ ಅಮೂಲ್ಯವಾದ ಅನಿಸಿಕೆಯನ್ನು ಅವರು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

English summary
In an effort to bring Delhi model of governance to Namma Bengaluru, AAP Karnataka, wishes to empower every Bengalurean with information which will enable them to hold the local government accountable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X