ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ನೀಡಲು 24 X7 ಆಸ್ಪತ್ರೆ ಓಪನ್ ಮಾಡಿ: ಎಎಪಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 7: ಕೋವಿಡ್ 19 ಎರಡನೇ ಅಲೆ ಭೀತಿ ಈಗಾಗಲೇ ವ್ಯಾಪಕವಾಗಿದ್ದು, 4 ವಾರಗಳ ಕಾಲ ತೀರಾ ಎಚ್ಚರಿಕೆಯಿಂದ ಇರಬೇಕು ಎಂದು ಸರಕಾರವು ಹೇಳಿದೆ. ಈಗಾಗಲೇ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿಯೂ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಈ ಪ್ರಮಾಣ ಅತ್ಯಂತ ಕಡಿಮೆ ಯಾಗಿದ್ದು ತಿಳಿದಿರುವ ವಿಷಯವೇ ಆಗಿದೆ.

ಈ ಕೂಡಲೇ ಸಾರ್ವಜನಿಕರು ದಿನದ 24 ಗಂಟೆಗಳಲ್ಲೂ ಆಸ್ಪತ್ರೆಗೆ ತೆರಳಿ ಲಸಿಕೆಯನ್ನು ಹಾಕಿಸಿಕೊಳ್ಳಲು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಹಗಲು ರಾತ್ರಿ ತೆರೆದಿಡಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.

ಲಸಿಕೆಯೇ ಇಲ್ಲ: ಒಡಿಶಾದಲ್ಲಿ 600 ಕೊರೊನಾ ಲಸಿಕಾ ಕೇಂದ್ರಗಳು ಬಂದ್!ಲಸಿಕೆಯೇ ಇಲ್ಲ: ಒಡಿಶಾದಲ್ಲಿ 600 ಕೊರೊನಾ ಲಸಿಕಾ ಕೇಂದ್ರಗಳು ಬಂದ್!

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಈ ಬಗ್ಗೆ ಈಗಾಗಲೇ ಕ್ರಮವನ್ನು ತೆಗೆದುಕೊಂಡಿದೆ. ಇದೇ ರೀತಿ ದೆಹಲಿ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಲಸಿಕೆ ಹಾಕಿಸಿಕೊಳ್ಳುವ ಲಸಿಕೆ ಹಾಕಿಸಿಕೊಳ್ಳುವ 45 ವರ್ಷದ ಮಿತಿಯನ್ನು ತೆಗೆಯಬೇಕೆಂದು ಹೇಳಿದೆ.

AAP demands dedicated round the clock Hospital for Corona Vaccine drive

ಈಗಾಗಲೇ ಆರೋಗ್ಯ ಸಚಿವರು ಯುವಕರು ಮತ್ತು ಮಧ್ಯವಯಸ್ಕರೇ ಸಾಕಷ್ಟು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಸಾವಿನ ಲೆಕ್ಕ ಗಣತಿಯನ್ನು ಸಹ ಮಾಡಲಾಗುವುದೆಂದು ತಿಳಿಸಿದ್ದಾರೆ.

ಈ ವರ್ಗಗಳ ಸಾವುನೋವುಗಳನ್ನು ತಪ್ಪಿಸಲು ಎಲ್ಲಾ ವಯೋಮಾನದವರಿಗೂ ಲಸಿಕೆಯನ್ನು ಹಾಕಿಸಿಕೊಳ್ಳಲು ರಾಜ್ಯ ಸರ್ಕಾರವು ಸಹ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ. ರಾಜ್ಯದ ಎಲ್ಲಾ ಹಳ್ಳಿ - ನಗರಗಳಲ್ಲಿ ಲಸಿಕೆ ನೀಡುವ ಸಂಚಾರಿ ವಾಹನಗಳನ್ನು ಸಜ್ಜುಗೊಳಿಸಬೇಕೆಂದು ಎಎಪಿ ವೈದ್ಯ ಘಟಕದ ಡಾ. ಬಿ .ಎಲ್. ವಿಶ್ವನಾಥ್ ಹೇಳಿದ್ದಾರೆ.

Recommended Video

#Covid19Updates: ರಾಜ್ಯದಲ್ಲಿ ಮತ್ತೆ ಕೋವಿಡ್ ಅಬ್ಬರ.. ಬರೋಬ್ಬರಿ 6976 ಜನರಿಗೆ ಸೋಂಕು | Oneindia Kannada

English summary
AAP demands dedicated round the clock Hospital for making Corona Vaccine drive across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X