• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಗರದ 50 ವಾರ್ಡ್‌ಗಳಲ್ಲಿ ಆಪ್ ಕೇರ್ ಕಾರ್ಯಕ್ರಮಕ್ಕೆ ಚಾಲನೆ

|

ಬೆಂಗಳೂರು, ಆ.9: ಕೊರೊನಾ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಸರ್ಕಾರ ತನ್ನೆಲ್ಲ ಜವಾಬ್ದಾರಿ ಮರೆರು ಕುಳಿತಿದೆ. ಸೋಂಕು ಹೆಚ್ಚಿರುವ ಕಡೆ ಮನೆ ಮನೆಗೆ ಹೋಗಿ ಪರೀಕ್ಷೆ ನಡೆಸಬೇಕು ಎನ್ನುವ ಸಾಮಾನ್ಯ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಆದ ಕಾರಣ ಈ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಮಾಜಿಕ ಕಳಕಳಿಯೊಂದಿಗೆ ಆಮ್ ಆದ್ಮಿ ಪಕ್ಷವು ಬೆಂಗಳೂರಿನಾದ್ಯಂತ "ಆಪ್ ಕೇರ್" ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಬೆಂಗಳೂರು ನಗರದ 50 ವಾರ್ಡ್‌ಗಳಲ್ಲಿ ಮೊದಲ ಹಂತವಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಆಪ್ ಕೇರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಎಎಪಿ

ಪಕ್ಷದ ಕಾರ್ಯಕರ್ತರು PPE ಕಿಟ್ ಗಳನ್ನು ಧರಿಸಿ ಸೋಂಕಿನ ಲಕ್ಷಣಗಳು ಇರುವ ನಾಗರಿಕರ ಮನೆಗಳಿಗೆ ಬೇಟಿ ನೀಡಿ ಅವರ ದೇಹದ ತಾಪಮಾನ, ಆಮ್ಲಜನಕದ ಮಟ್ಟ ಪರೀಕ್ಷಿಸಲಾಯಿತು ಹಾಗೂ ಮನೆಗಳನ್ನು ಸ್ಯಾನಿಟೈಸೇಶನ್ ಮಾಡಲಾಯಿತು. ಸೋಂಕಿನ ಬಗ್ಗೆ ಮಾಹಿತಿ ನೀಡಿ ಸುರಕ್ಷತಾ ಮಾರ್ಗಗಳ ಬಗ್ಗೆ ಅರಿವು ಮೂಡಿಸಿ, ಬಿಬಿಎಂಪಿ ಆರೋಗ್ಯ ಅಧಿಕಾರಿಗಳ, ಆಸ್ಪತ್ರೆಗಳ ಸಂಪರ್ಕ ವಿವರಗಳನ್ನು ನೀಡುವ ಕೆಲಸ ಮಾಡಲಾಯಿತು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಪುಲಕೇಶಿ ನಗರ , ಮುನೇಶ್ವರ ಲೇಔಟ್, ಸಗಾಯ್ ಪುರ, ಬಸವೇಶ್ವರ ನಗರ, ಜೀವನ್ ಭೀಮಾ ನಗರ, ನೀಲಸಂದ್ರ, ವನ್ನಾರ್ ಪೇಟೆ, ಶಾಂತಿ ನಗರ, ಅರಕೆರೆ, ಬೇಗೂರು, ಕಾಳೇನ ಅಗ್ರಹಾರ, ಸುಬ್ರಮಣ್ಯ ನಗರ, ಚಾಮರಾಜಪೇಟೆಯಲ್ಲಿ ಆಪ್ ಕೇರ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಕೊವಿಡ್ 19 ಹಗರಣ: ಆರೋಗ್ಯ ಸಚಿವರ ರಾಜೀನಾಮೆಗೆ ಎಎಪಿ ಆಗ್ರಹ

ಸಾರದವಜನಿಕರಿಂದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು ಮತ್ತು ದೆಹಲಿ ಮಾದರಿಯಂತೆ ನಮ್ಮ ರಾಜ್ಯದಲ್ಲೂ ಸೋಂಕು ನಿಯಂತ್ರಣ ಮಾಡುವಂತೆ ಸರ್ಕಾರಕ್ಕೆ ಕಿವಿಮಾತು ಹೇಳುವಂತೆ ಸಾರ್ವಜನಿಕರು ಸಲಹೆ ನೀಡಿದರು.

English summary
AAP Karnataka launches AAP Cares initiative to assist General Public across Karnataka. Now this initiative launched in 50 wards in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X