ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದಕ್ಷಿಣ ಅಭ್ಯರ್ಥಿ ನೀನಾ ನಾಯಕ್

By Mahesh
|
Google Oneindia Kannada News

ಬೆಂಗಳೂರು, ಮಾ.25: ಪ್ರತಿಷ್ಠಿತ ಲೋಕಸಭಾ ಕ್ಷೇತ್ರವಾದ ಬೆಂಗಳೂರಿನ ದಕ್ಷಿಣದಿಂದ ಆಮ್ ಆದ್ಮಿ ಪಕ್ಷ ನೀನಾ ನಾಯಕ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯ ಅನಂತ್ ಕುಮಾರ್, ಕಾಂಗ್ರೆಸ್ಸಿನ ನಂದನ್ ನಿಲೇಕಣಿ ಅವರ ವಿರುದ್ಧ ಜನ ಸಾಮಾನ್ಯರ ಪ್ರತಿನಿಧಿಯಾಗಿ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನೀನಾ ಅವರು ಸಂಸತ್ ಪ್ರವೇಶ ಬಯಸಿದ್ದಾರೆ.

ನೀನಾ ನಾಯಕ್ ರಂತಹ ಸಮಾಜ ಸೇವಕಿಯಿ೦ದ ಬೆಂಗಳೂರಿನ ನಾಗರಿಕರಿಗೆ ಬೇಕಾದ ಸುಧಾರಣೆಗಳನ್ನು ಮಾಡಬಹುದು ಎಂದು ಆಮ್ ಆದ್ಮಿ ಪಕ್ಷ ಬಲವಾಗಿ ನಂಬಿದೆ. ನೀನಾ ನಾಯಕ್ ಅವರು ಸೋಮವಾರ(ಮಾ.24) ಜಯನಗರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮುಂಜಾನೆ 6 ಗಂಟೆಗೆ ಮತ ಪ್ರಚಾರ ಮೆರವಣಿಗೆ ಆರಂಭಿಸುವ ನೀನಾ ಅವರು ರಾತ್ರಿ 9 ಗಂಟೆವರೆಗೂ ನಿರಂತರವಾಗಿ ತಾವು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಸಂಚರಿಸಿ ಜನರ ಗಮನ ಸೆಳೆಯುತ್ತಿದ್ದಾರೆ. ಮಧ್ಯಾಹ್ನ ಮೂರು ಗಂಟೆ ಅವಧಿ ವಿಶ್ರಾಂತಿ ತೆಗೆದುಕೊಳ್ಳುವ ನೀನಾ ಅವರು ಈಗಾಗಲೇ ಜಯ ನಗರ, ಬನಶಂಕರಿ ಬಡಾವಣೆಯ ಅನೇಕ ಕಡೆ ಪಾದಯಾತ್ರೆ, ಪ್ರಚಾರ ಸಭೆ ನಡೆಸಿದ್ದಾರೆ. ಬಸವನಗುಡಿಯ ಪ್ರಮುಖ ವೃತ್ತಗಳಲ್ಲಿ 'ವೋಟ್ ಫಾರ್ ನೀನಾ' ಎಂಬ ಫಲಕ ಹಿಡಿದು ನಿಂತ ಜನ ಸಾಮಾನ್ಯರ ಪಕ್ಷದ ಸದಸ್ಯರನ್ನು ಕಾಣಬಹುದಾಗಿದೆ. ನೀನಾ ನಾಯಕ್ ಅವರ ನಾಮಪತ್ರ ಸಲ್ಲಿಕೆ ಚಿತ್ರಗಳು ಹಾಗೂ ಇನ್ನಷ್ಟು ವಿವರ ಮುಂದಿದೆ.

ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆ ಕ್ಷೇತ್ರದಲ್ಲಿ ಅನುಭವ

ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆ ಕ್ಷೇತ್ರದಲ್ಲಿ ಅನುಭವ

* ಮುವ್ವತ್ತು ವರ್ಷದ ವೃತ್ತಿಯಲ್ಲಿ ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಯ ಕ್ಷೇತ್ರದಲ್ಲಿ ಅಪಾರ ಕೊಡುಗೆ.
* ಗವರ್ನಿಂಗ್ ಕೌನ್ಸಿಲ್, ಇಂಡಿಯ ಲಾ ಇನ್ಸ್ಟಿಟ್ಯೂಟ್ (ನ್ಯೂಡೆಲ್ಲಿ) ನಲ್ಲಿ ಗೌರವಾನ್ವಿತ ಸದಸ್ಯ.

ಅನೇಕ ಜವಾಬ್ದಾರಿಯುತ ಹುದ್ದೆಗಳಲ್ಲಿ ನೀನಾ

ಅನೇಕ ಜವಾಬ್ದಾರಿಯುತ ಹುದ್ದೆಗಳಲ್ಲಿ ನೀನಾ

* ಚರಿತ್ರೆ - ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗದ ಅಧ್ಯಕ್ಷೆ
* ಭಾರತೀಯ ಮಕ್ಕಳ ಕಲ್ಯಾಣ ಸ೦ಸ್ಥೆ (ನ್ಯೂಡೆಲ್ಲಿ) ಯ ಗೌರವಾನ್ವಿತ ಉಪಾಧ್ಯಕ್ಷರು ಇತ್ಯಾದಿ.
* ಮಕ್ಕಳ ಹಕ್ಕುಗಳು - ರಕ್ಷಣೆ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆ
* ಹರೆಯದ ಮಕ್ಕಳ ನ್ಯಾಯಾಂಗ ವ್ಯವಸ್ಠೆ, ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳ ಪುನರ್ವಸತಿ ಮತ್ತು ಸಾಮಾಜಿಕ ಸಂಯೋಜನೆ ವಿಷಯಗಳ ತಜ್ಞೆ
* ಸಮಾಜ ಸೇವೆಗಾಗಿ ಸದ್ಗುರು ಜ್ಞಾನಾನಂದ ನ್ಯಾಷನಲ್ ಅವಾರ್ಡ್ ಮತ್ತು ಬೋಳಾರ್ ಎಜುಕೇಶನ್ ಟ್ರಸ್ಟ್ ನಿ೦ದ ಪ್ರಶಸ್ತಿಗಳು

ನೀನಾ ನಾಯಕ್ ನಾಮಪತ್ರ ಸಲ್ಲಿಕೆ

ನೀನಾ ನಾಯಕ್ ನಾಮಪತ್ರ ಸಲ್ಲಿಕೆ

ಜಯನಗರದಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಎಪಿ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಉಪಸ್ಥಿತರಿದ್ದರು.

ಜನ ಸಾಮಾನ್ಯರಿಂದ ಬೆಂಬಲ

ಜನ ಸಾಮಾನ್ಯರಿಂದ ಬೆಂಬಲ

ಚುನಾವಣೆ ಪ್ರಚಾರದ ವೇಳೆ ಜನ ಸಾಮಾನ್ಯರು ಸ್ವಯಂ ಪ್ರೇರಿತರಾಗಿ ಎಎಪಿ ಜತೆ ಕೈ ಜೋಡಿಸುತ್ತಿದ್ದಾರೆ. ಅನಂತ್ ಹಾಗೂ ನಿಲೇಕಣಿ ಅವರು ಭ್ರಷ್ಟ ಪಕ್ಷಗಳ ಪ್ರತಿನಿಧಿಯಾಗಿದ್ದಾರೆ. ಜನತೆ ಭ್ರಷ್ಟಾಚಾರ ರಹಿತ ಆಡಳಿತ ಬಯಸಿದ್ದಾರೆ ಎಂದು ನೀನಾ ನಾಯಕ್ ಹೇಳಿದ್ದಾರೆ.

English summary
Nina Nayak a child rights activist from Dakshina Kannada, author of several articles and book is contesting from Bangalore South Lok Sabha constituency from AAP ticket. She is a former Chairperson for Karnataka State Commission for Protection of Child Rights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X