ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

25 ಲಕ್ಷ ಜನರನ್ನು ತಲುಪಿದ ಆಪ್ ನ 'ಹೊಸ ಬೆಂಗಳೂರಿಗಾಗಿ ನಿರ್ಮಾಣ' ಪಾದಯಾತ್ರೆ

|
Google Oneindia Kannada News

ಬೆಂಗಳೂರು, ಫೆಬ್ರವರಿ.16: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸಿನ ಬೆನ್ನಲ್ಲೇ ಬೆಂಗಳೂರಿನಲ್ಲೂ ಆಪ್ ಕಾರ್ಯಕರ್ತರು ಹೊಸ ಚಳವಳಿಯನ್ನು ಆರಂಭಿಸಿದ್ದಾರೆ. ಹೊಸ ಬೆಂಗಳೂರು ನಿರ್ಮಾಣಕ್ಕಾಗಿ ಕಳೆದ ಐದು ದಿನಗಳಿಂದ ನಗರದಾದ್ಯಂತ 108 ಕಿಲೋ ಮೀಟರ್ ನಡೆಸಿದ ಪಾದಯಾತ್ರೆ ಯಶಸ್ವಿಯಾಗಿದೆ.
ಕಳೆದ ಐದು ದಿನಗಳಿಂದ ನಡೆಯುತ್ತಿರುವ ಆಪ್ ಪಾದಯಾತ್ರೆಯು ನಗರದ ಬೀದಿ ಬೀದಿಗಳಲ್ಲೂ ಸಂಚರಿಸಿದ್ದು, ಇದುವರೆಗೂ 25 ಲಕ್ಷಕ್ಕೂ ಅಧಿಕ ಮಂದಿಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ತಲುಪುವಲ್ಲಿ ಯಶಸ್ಸು ಕಂಡಿದೆ.

ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ
ರಾಷ್ಟ್ರ ರಾಜಧಾನಿ ನಗರದಾದ್ಯಂತ ಸಂಚರಿಸಿದ ಆಪ್ ಪಾದಾಯಾತ್ರೆಯು ಭಾನುವಾರ ಮಯೂರು ಸರ್ಕಲ್ ನಲ್ಲಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮುಕ್ತಾಯಗೊಂಡಿತು. ಆಪ್ ಬೆಂಗಳೂರು ಘಟಕದ ಅಧ್ಯಕ್ಷ ಮಾತನಾಡಿದ ಮೋಹನ್ ದಾಸರಿ, ಬೆಂಗಳೂರು ಶಾಸಕರ ವಿರುದ್ಧ ಹರಿಹಾಯ್ದರು.

Aam Admi Party Padayatre The Build a New Bengaluru Reached 25 Lakh Peoples

ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳೇ ಕುಂಠಿತ:
ಕಳೆದ 15 ವರ್ಷಗಳಿಂದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ರಾಜಾಜಿ ನಗರ, ಮಲ್ಲೇಶ್ವರಂ ಸೇರಿದಂತೆ ವಿಧಾನಸಭಾ ಕ್ಷೇತ್ರಗಳಲ್ಲಿ ಪದೇ ಪದೆ ಗೆದ್ದ ಶಾಸಕರೇ ಗೆಲುವು ಸಾಧಿಸುತ್ತಿದ್ದಾರೆ. ಆದರೆ, ಈ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಾತ್ರ ಅಷ್ಟಕಷ್ಟೇ. ನಗರದಲ್ಲಿ ಸರಿಯಾದ ರಸ್ತೆಗಳಿಲ್ಲ, ಬಿಬಿಎಂಪಿ ವ್ಯಾಪ್ತಿಯ ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯರಿಲ್ಲ, ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಿಲ್ಲ ಎಂದು ಆರೋಪಿಸಿದರು.
ದೆಹಲಿ ಮಾದರಿಯಲ್ಲೇ ಹೊಸ ಬೆಂಗಳೂರು ನಿರ್ಮಾಣದ ಕನಸನ್ನು ಆಪ್ ಹೊತ್ತುಕೊಂಡಿದೆ. ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳು, ಮೊಹಲ್ಲಾ ಕ್ಲಿನಿಕ್ ಗಳನ್ನು ತೆರೆಯುವ ನಿಟ್ಟಿನಲ್ಲಿ ಆಪ್ ಕಾರ್ಯನಿರ್ವಹಿಸಲಿದೆ ಎಂದು ಮೋಹನ್ ದಾಸರಿ ಭರವಸೆ ನೀಡಿದರು.

English summary
Aam Admi Party Padayatre The Build A New Bengaluru Reached 25 Lakh Peoples Across City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X