ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆಗೆ ಎಎಪಿಯಿಂದ ಬೃಹತ್ ಜನಸಂಪರ್ಕ ಅಭಿಯಾನ

|
Google Oneindia Kannada News

ಬೆಂಗಳೂರು, ಸೆ.26: ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು ಅಕ್ಟೋಬರ್ 2ರಿಂದ ನಗರದಾದ್ಯಂತ ಬೃಹತ್ ಜನಸಂಪರ್ಕ ಅಭಿಯಾನ ಆರಂಭವಾಗಲಿದೆ. ನವೀನ ವಿಧಾನಗಳನ್ನು ಅಳವಡಿಸಿಕೊಂಡು, ಹೊಸ ಬೆಂಗಳೂರನ್ನು ನಿರ್ಮಿಸಲು ಸಂಕಲ್ಪತೊಟ್ಟಿರುವ ಆಮ್ ಆದ್ಮಿ ಪಕ್ಷವು 2020ರ ಬಿಬಿಎಂಪಿ ಚುನಾವಣೆಗೆ ವ್ಯಾಪಕ ಕಾರ್ಯಯೋಜನೆ ರೂಪಿಸಿಕೊಂಡಿದೆ.

ಎಲ್ಲಾ ವಾರ್ಡ್ ಗಳಲ್ಲಿಯೂ ಜನಸಂಪರ್ಕ ಅಭಿಯಾನದ ಮೂಲಕ ನಗರದ ಸಮಸ್ಯೆಗಳ ಪರಿಹಾರಕ್ಕೆ ನಾವೀನ್ಯ ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಜನಸಂಪರ್ಕ ಅಭಿಯಾನದೊಂದಿಗೆ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವವನ್ನು ನೀಡುವ ಅಭಿಯಾನ ಶೀಘ್ರದಲ್ಲೇ ಆರಂಭವಾಗಲಿದೆ. ಜೊತೆಗೆ, ಸಮರ್ಥ, ಸೇವಾ ಮನೋಭಾವವುಳ್ಳ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾದ ಅಭ್ಯರ್ಥಿಗಳನ್ನು ಜನರ ಅಭಿಮತದೊಂದಿಗೆ ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸುವ ಪ್ರಕ್ರಿಯೆಯೂ ನಡೆಯಲಿದೆ.

2020 ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷ ತಾಲೀಮು ಚುರುಕು2020 ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷ ತಾಲೀಮು ಚುರುಕು

ಅಕ್ಟೋಬರ್ 02 ರಿಂದ ಆರಂಭವಾಗಲಿರುವ 50 ದಿನಗಳ ಬೃಹತ್ ಜನ ಸಂಪರ್ಕ ಮತ್ತು ಸದಸ್ಯತ್ವ ಅಭಿಯಾನದ ಮುಖ್ಯಾಂಶಗಳು ಹೀಗಿರುತ್ತವೆ:

Aam Aadmi Party to Launch Public Reach Out Campaign for BBMP elections

• ಸೆಪ್ಟೆಂಬರ್ 29ರಂದು ವಿಜಯನಗರ ವಲಯದಲ್ಲಿ ಪಾದಯಾತ್ರೆ ಮೂಲಕ ಜನಸಂಪರ್ಕ ಅಭಿಯಾನಕ್ಕೆ ಚಾಲನೆ.

• ಮನೆ-ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡುವ ತಂಡಗಳ ರಚನೆ.

• ರಾಜಕೀಯ ಸೇರ್ಪಡೆ ಅಭಿಯಾನ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ

• ವಿಜಯನಗರ, ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ ಸೇರಿದಂತೆ ನಗರದಾದ್ಯಂತ ವಾರ್ಡ್ಗಳಿಗೆ ಸಮರ್ಥ ಮತ್ತು ಸೇವ-ಮನೋಭಾವವುಳ್ಳ ಅಭ್ಯರ್ಥಿಗಳ ಆಯ್ಕೆ.

ನಮ್ಮೆಲ್ಲರ ಕನಸಿನ ಹೊಸ ಬೆಂಗಳೂರಿನ ನಿರ್ಮಾಣದಲ್ಲಿ ಭಾಗಿಯಾಗಿ, ಪಕ್ಷದ ಸದಸ್ಯತ್ವ ಪಡೆಯಲು ಆಸಕ್ತರು 7412 042 042 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು. ಎಂದು ಆಮ್ ಆದ್ಮಿ ಪಕ್ಷ ಕರ್ನಾಟಕ ಪಕ್ಷದ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಮತ್ತು ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

English summary
Aam Aadmi Party will start its mass public reach out campaign on 2 October, throughout the city for BBMP elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X