• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೃಥ್ವಿ ರೆಡ್ಡಿಗೆ ಕರ್ನಾಟಕದ ಎಎಪಿ ಸಂಘಟನೆಯ ಹೊಣೆ

By Mahesh
|

ಬೆಂಗಳೂರು, ನ.03: ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಕೆಳಹಂತದಿಂದ ಬಲಿಷ್ಠಗೊಳಿಸುತ್ತಾ, ಬೂತ್ ಮಟ್ಟದಲ್ಲಿ ಸಂಘಟಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ ಅವರಿಗೆ ವಹಿಸಲಾಗಿದೆ ಎಂದು ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತ ಅವರು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಭೂತಪೂರ್ವ ಜಯ ದಾಖಲಿಸಿದ ಬಳಿಕ ದೇಶದೆಲ್ಲೆಡೆ ಹೊಸ ಸಂಚಲನ ಮೂಡಿದೆ. ಭ್ರಷ್ಟಾಚಾರವನ್ನು ಬುಡದಿಂದಲೂ ಕಿತ್ತೆಸೆಯಬಹುದೆಂಬ ಆತ್ಮಸೈರ್ಯ ಜನರಲ್ಲಿ ಮೂಡುತ್ತಿದೆ ಎಂದರು.

ಕರ್ನಾಟಕದ ಜನತೆ ಈಗಿನ ರಾಜಕೀಯ ಪಕ್ಷಗಳ ಕಾರ್ಯವೈಖರಿಯಿಂದ ಬೇಸತ್ತು, ಪರ್ಯಾಯ ಪಕ್ಷಕ್ಕೆ ಕಾಯುತ್ತಿದ್ದಾರೆ ಎಂದು ತಿಳಿಸಿದರು. ಹೀಗಾಗಿ ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಂದಿನ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷವು ಸ್ಪರ್ಧಿಸಲಿದೆ ಎಂದು ತಿಳಿಸಿದರು.

ಆಡಳಿತಾತ್ಮಕವಾಗಿ ಕರ್ನಾಟಕವನ್ನು 2-4 ನಾಲ್ಕು ಜಿಲ್ಲೆಗಳ ವಿವಿಧ ಪ್ರದೇಶಗಳಾಗಿ ವಿಂಗಡಿಸಿದ್ದು, ಪ್ರತಿಯೊಬ್ಬ ಉಪ ಸಂಚಾಲಕರಿಗೂ ಒಂದೊಂದು ಪ್ರದೇಶದ ನಿರ್ವಹಣಾ ಜವಾಬ್ದಾರಿ ನೀಡಲಾಗಿದೆ. ಹೆಚ್ಚುವರಿಯಾಗಿ, ರವಿಕೃಷ್ಣಾ ರೆಡ್ಡಿ ಹಾಗೂ ಸಿದ್ಧಾರ್ಥ ಶರ್ಮರಿಗೆ ರಾಜಕೀಯ ವ್ಯವಹಾರಗಳ ಜವಾಬ್ದಾರಿ ನೀಡಲಾಗಿದ್ದು, ಶಿವ ಕುಮಾರ್ ಚೆಂಗಲರಾಯರಿಗೆ ಮಾಧ್ಯಮ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.

ನಾವು ಕರ್ನಾಟಕದ ಜನತೆಗೆ, ದೆಹಲಿ ಸರ್ಕಾರದ ಕಾರ್ಯವೈಖರಿಯನ್ನು ಕಂಡು ಜನತೆಯಲ್ಲಿ ಮೂಡಿರುವ ವಿಶ್ವಾಸ ಹಾಗೂ ನಿರೀಕ್ಷೆಯನ್ನು ಯಶಸ್ವಿಯಾಗಿ ಕಾಯ್ದುಕೊಂಡು, ರಾಜ್ಯದಲ್ಲಿ ಕಾರ್ಯಸಾಧುವಾದ ಪರ್ಯಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತೇವೆಂದು ಭರವಸೆ ನೀಡುತ್ತೇವೆ.

ರಾಜ್ಯ ತಂಡದ ಸದಸ್ಯರು:

ರಾಜ್ಯ ಖಜಾಂಚಿ : ಹರಿಹರನ್ ಜಯಚಂದ್ರನ್

ರಾಜ್ಯ ಕಾರ್ಯದರ್ಶಿ : ಬಾಲಸುಬ್ಯಮಣ್ಯಂ ಆರ್

ರಾಜ್ಯ ಜಂಟಿ ಕಾರ್ಯದರ್ಶಿ : ಸಂಚಿತ್ ಸಾವ್ನಿ

ರಾಜ್ಯ ಉಪ-ಸಂಚಾಕಲರು

* ರವಿಕೃಷ್ಣಾ ರೆಡ್ಡಿ

* ಸಿದ್ಧಾರ್ಥ ಶರ್ಮ

* ಶಾಂತಲಾ ದಾಮ್ಲೆ

* ವಿಜಯ್ ಶರ್ಮ

* ಶಿವಕುಮಾರ್ ಚೆಂಗಲರಾಯ

* ಕುಂದನ್ ಸಿಂಗ್

* ವಿಕಾಸ್ ಶುಕ್ಲ

* ಬಿ ಕೆ ಮಾನಸ್

* ಮೊಹಮ್ಮದ್ ಸಲಾಹುದ್ದೀನ್

* ಮೋಹನ್ ದಾಸರಿ

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aam Aadmi Party in Karnataka will be led by our National Executive member Prithvi Reddy. Realizing the need to enthuse the party with new energy, he has been asked to take charge of the Party in Karnataka and along with his team, build the party up to the booth level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more