• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲ

|

ಬೆಂಗಳೂರು, ನವೆಂಬರ್ 03: ಕಬ್ಬನ್ ಪಾರ್ಕ್ ಉಳಿವಿಗಾಗಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ನವೆಂಬರ್ 03ರ ಭಾನುವಾರ Cubbon Park Walkers Association(CPWA) ಸಂಘಟನೆಯು ನಡೆಸುತ್ತಿರುವ ಕಬ್ಬನ್ ಪಾರ್ಕ್ ಉಳಿವಿಗಾಗಿ ಪ್ರತಿಭಟನೆ ನಡೆಸಿದೆ.

'ಪ್ರತ್ಯೇಕ ಬಸ್ ಪಥ' ಯೋಜನೆ ಯಶಸ್ಸಿಗೆ 6 ಸೂತ್ರಗಳನ್ನು ನೀಡಿದ ಎಎಪಿ

ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್‍ ಸಹಾನೀ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಮತ್ತು ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದಾರೆ. ಸರ್ಕಾರವು ತನ್ನ ನಿರ್ಧಾರವನ್ನು ಕೈಬಿಡುವವರೆಗೂ ಆಮ್ ಆದ್ಮಿ ಪಕ್ಷವು ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟದಲ್ಲಿ ಮುನ್ನಡೆಯಲಿದೆ.

ದೆಹಲಿಯಲ್ಲಿ ಎಎಪಿ ಸರ್ಕಾರವು ಕಳೆದ 5 ವರ್ಷಗಳಲ್ಲಿ ಪರಿಸರ ರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ 19% ಹಸಿರು ಹೊದಿಕೆ(ಗ್ರೀನ್ ಕವರ್)ಯನ್ನು ಹೆಚ್ಚಿಸಿದೆ. ಅಲ್ಲದೆ ಮುಂಬೈನ ಆರೇ ಕಾಲೊನಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಮೆಟ್ರೋ ಡಿಪೋ ನಿರ್ಮಾಣಕ್ಕಾಗಿ 2141 ಮರಗಳನ್ನು ಕಡಿಯಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸ್ಥಳೀಯ ನಾಗರಿಕರ ಜೊತೆಗೂಡಿ ಹೋರಾಟ ನಡೆಸಿ, ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಮುಂಚೂಣಿ ಪಾತ್ರವಹಿಸಿದೆ.

ಪರಿಸರ ಸಂರಕ್ಷಣೆಯ ವಿಷಯದಲ್ಲಿ ರಾಜಿಯಿಲ್ಲದೆ ನೆಲ-ಜಲ ಸಂರಕ್ಷಣೆಗೆ ಆಮ್ ಆದ್ಮಿ ಪಕ್ಷವು ಕಠಿಬದ್ದವಾಗಿದೆ. ದೇಶದ ಯಾವುದೇ ಮೂಲೆಯಲ್ಲೂ ಅನವಶ್ಯಕವಾಗಿ ಪರಿಸರವನ್ನು ನಾಶ ಮಾಡುವುದರ ವಿರುದ್ಧ ಪರಿಸರ ರಕ್ಷಣೆಯ ಹೋರಾಟ ನಡೆಸಲು ಪಕ್ಷವು ಸಿದ್ಧವಾಗಿದೆ.

ಬಿಬಿಎಂಪಿಗೆ ಸರ್ಕಾರಿ ಶಾಲೆ ನಿರ್ವಹಣೆ ಪಾಠ ಮಾಡಲು ಎಎಪಿ ಸಜ್ಜು

ಬೆಂಗಳೂರಿನಲ್ಲೂ ಕಗ್ಗದಾಸಪುರ, ಗೊಟ್ಟಿಗೆರೆ, ಬೊಮ್ಮಸಂದ್ರ ಕೆರೆ ಉಳಿಸಿ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿ ಹೋರಾಟ ನಡೆಸಿದೆ. ಈಗ ಅಂತಹದ್ದೇ ಹೋರಾಟಕ್ಕೆ ಸಜ್ಜಾಗುವಂತಹ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಬೆಂಗಳೂರಿನ ಶ್ವಾಸಕೋಶಕ್ಕೆ ಸರ್ಕಾರ ಕೊಡಲಿ ಹಾಕಲು ಮುಂದಾಗಿದೆ. ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಕಬ್ಬನ್ ಪಾರ್ಕ್ ಗಳ ಸುತ್ತಮುತ್ತ ಯಾವುದೇ ಹೊಸ ಕಟ್ಟಡಗಳನ್ನು ಕಟ್ಟುವಂತಿಲ್ಲವೆಂದು ನಿಮಯಗಳಿವೆ. ಆದರೆ ಆ ನಿಯಮಗಳನ್ನೇ ಗಾಳಿಗೆ ತೂರಿ 'ವಕೀಲರ ಪರಿಷತ್ ಕಟ್ಟಡವನ್ನು' ಕೆಡವಿ, ಬಹು ಅಂತಸ್ಥಿನ ಹೊಸ ಕಟ್ಟಡವನ್ನು ಕಟ್ಟಲು ಅನುಮತಿ ನೀಡಲಾಗಿದೆ. ಹಾಗಾಗಿ ಪಾರಂಪರಿಕ ಕಟ್ಟಡ ಮತ್ತು ಬೆಂಗಳೂರಿನ ಬಹುಭಾಗಕ್ಕೆ ಜೀವವಾಯುವಾಗಿರುವ ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟ ನಡೆಸಲು ನಾಗರಿಕರು ಮುಂದಾಗಿದ್ದಾರೆ.

English summary
CPWA (Cubbon Park Walkers Association) is holding a protest to save Cubbon Park. AAP fully supports this protest and will be part of this movement till govt withdraws this order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X