ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 6 ವರ್ಷದ ನಂತರ ತಾಯಿಗೆ ಮೂಕ ಮಗನನ್ನು ದಕ್ಕಿಸಿಕೊಟ್ಟ ಆಧಾರ್ ಕಾರ್ಡ್

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 12: ಯಲಹಂಕದ ಸಂತೆಯಲ್ಲಿ ಕಳೆದುಹೋಗಿದ್ದ ಮೂಕ ಮಗ ಆರು ವರ್ಷಗಳ ಪತ್ತೆಯಾಗಿದ್ದು, ಮಗನನ್ನು ನೋಡಿದ ತಾಯಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬೆಂಗಳೂರಿನ ಯಲಹಂಕ ನಿವಾಸಿ ಪಾರ್ವತಮ್ಮ ಅವರಿಗೆ ಆರು ವರ್ಷಗಳ ಬಳಿಕ ಸಿಕ್ಕಿದ್ದಾನೆ. ಮಗನನನ್ನು ನೋಡಿದಾಗ ತಾಯಿಗಾದ ಸಂತೋಷವನ್ನು ವರ್ಣಿಸಲು ಪದಗಳೇ ಸಿಗದಂತಾಗಿತ್ತು.

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ತರಕಾರಿ ವ್ಯಾಪಾರಿ ಪಾರ್ವತಮ್ಮ ಮಗನ ಜೊತೆ ವಾಸವಿದ್ದರು. ಪತಿ ಇಲ್ಲದ ಪಾರ್ವತಮ್ಮನಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮೂಕ ಮಗ ಇದ್ದಾರೆ. 6 ವರ್ಷಗಳ ಹಿಂದೆ ಭರತ್ ಯಲಹಂಕ ರೈತರ ಸಂತೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ತಾಯಿ ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ಮಗನಿಗಾಗಿ ದೇಶದ ಎಲ್ಲಾ ದೇವಸ್ಥಾನಗಳಿಗೆ ಸುತ್ತಿ ಹರಕೆ ಹೊತ್ತು, ಮಗ ಭರತ್‌ಗಾಗಿ ಎಲ್ಲೆಡೆ ಹುಡುಕಾಡಿ ತಾಯಿ ಸೋತಿದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ; ದೊಡ್ಡಬಳ್ಳಾಪುರದ ಸ್ವಾಭಿಮಾನಿ ಆಟೋ ಚಾಲಕಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ; ದೊಡ್ಡಬಳ್ಳಾಪುರದ ಸ್ವಾಭಿಮಾನಿ ಆಟೋ ಚಾಲಕಿ

ಯಲಹಂಕದಿಂದ ತಪ್ಪಿಸಿಕೊಂಡು ಮಹಾರಾಷ್ಟ್ರದ ನಾಗಪುರ ರೈಲ್ವೆ ನಿಲ್ದಾಣ ಸೇರಿದ್ದ ಭರತ್‌ನನ್ನು ರಕ್ಷಿಸಿ ಅಲ್ಲಿನ ಪುನರ್‌ವಸತಿ ಕೇಂದ್ರಕ್ಕೆ ಅಧಿಕಾರಿಗಳು ಸೇರಿಸಿದ್ದರು. 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‌ಗೆ ಆಧಾರ್ ಕಾರ್ಡ್ ಮಾಡಿಸಲು 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್‌ನನ್ನು ಮಹೇಶ್ ಎಂಬ ಅಧಿಕಾರಿ ಕರೆದೊಯ್ದಿದ್ದರು. ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತವಾದ ಬಗ್ಗೆ ಆಧಾರ್ ಸೇವಾಕೇಂದ್ರ ಅಧಿಕಾರಿಗಳು ಮಾಹಿತಿ ನೀಡಿದರು.

Bengaluru: Aadhaar Card Reunites Speech Impaired Boy With Mom 6 Years After He Went Missing

ಈಗಾಗಲೇ ಬೆಂಗಳೂರಿನಲ್ಲಿ ಬಿ. ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ತಿಳಿದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ಅಧಿಕಾರಿ ಮಹೇಶ್ ವಿನಂತಿಸಿದ್ದರು.

ಪುನರ್‌ವಸತಿ ಕೇಂದ್ರದ ಅಧಿಕಾರಿ ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಸೇವಾ ಕೇಂದ್ರ, ಬಿ. ಭರತ್ ಕುಮಾರ್ ಹೆಸರಿನಲ್ಲಿದ್ದ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡೂ ಮ್ಯಾಚ್ ಆಗಿತ್ತು. ಆಧಾರ್ ಮೂಲಕ ಭರತ್‌ನ ತಾಯಿ ಪಾರ್ವತಮ್ಮನ ಮೊಬೈಲ್ ನಂಬರ್ ಸಿಕ್ಕಿತ್ತು.

Bengaluru: Aadhaar Card Reunites Speech Impaired Boy With Mom 6 Years After He Went Missing


ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದ ಪುನರ್‌ವಸತಿ ಕೇಂದ್ರ, ಕೊನೆಗೂ ನಾಗ್ಪುರದ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸಿದರು. ಭರತ್ ತಾಯಿನ ಪತ್ತೆ ಹಚ್ಚಿದ್ದ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್, ಪಾರ್ವತಮ್ಮರನ್ನು ಪೊಲೀಸರ ಜೊತೆ ನಾಗ್ಪುರಕ್ಕೆ ಕಳುಹಿಸಿದ್ದರು.

Bengaluru: Aadhaar Card Reunites Speech Impaired Boy With Mom 6 Years After He Went Missing

ಮಾರ್ಚ್ 7ರಂದು ಕುಟುಂಬದ ಜೊತೆ ನಾಗ್ಪುರಕ್ಕೆ ತೆರಳಿ ಮಗನನ್ನು ಕಂಡು ತಾಯಿ ಪಾರ್ವತಮ್ಮ ಭಾವುಕರಾಗಿ ತಬ್ಬಿ ಮುದ್ದಾಡಿದರು. ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಮಗ ಭರತ್‌ನನ್ನು ತಾಯಿ ಪಾರ್ವತಮ್ಮ ಮನೆಗೆ ಕರೆ ತಂದಿದ್ದಾರೆ. ನಾಗಪುರ ಪುನರ್‌ವಸತಿ ಕೇಂದ್ರದ ಅಧಿಕಾರಿಗಳು ಮತ್ತು ಆಧಾರ್ ಸೇವಾ ಕೇಂದ್ರದ ಅಧಿಕಾರಿಗಳ ಕಾರ್ಯಕ್ಕೆ ದೊಡ್ಡ ನಮನ ಸಲ್ಲಿಸಿದ್ದಾರೆ.

English summary
Bengaluru; Aadhaar card help reunites speech impaired boy Bharath kumar with mom 6 years after he went missing from Yalahanka Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X