ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಶವ ಸಂಸ್ಕಾರಕ್ಕೆ ಮೃತರ ಆಧಾರ್ ಕಡ್ಡಾಯವಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಶವ ಸಂಸ್ಕಾರಕ್ಕೆ ಇನ್ನುಮುಂದೆ ಮೃತ ವ್ಯಕ್ತಿಯ ಆಧಾರ್ ಕಡ್ಡಾಯವಾಗಿರುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.

ಬಿಬಿಎಂಪಿಯ ವಿದ್ಯುತ್ ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಗುರುತಿನ ಚೀಟಿ ಕಡ್ಡಾಯವಾಗಿರುವುದಿಲ್ಲ.

ಆನ್​ಲೈನ್ ನಲ್ಲಿ ಆಧಾರ್ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?ಆನ್​ಲೈನ್ ನಲ್ಲಿ ಆಧಾರ್ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

ಈ ಕುರಿತು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್ ಸುರಪುರ ಸುತ್ತೋಲೆ ಹೊರಡಿಸಿದ್ದು, ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್ ಗುರುತಿನ ಚೀಟಿ ಕಡ್ಡಾಯವಲ್ಲ, ಪಾಲಿಕೆಯ ವಿವಿಧ ಚಿತಾಗಾರ ಹಾಗೂ ರುದ್ರಭೂಮಿಲ್ಲಿನ ಸಿಬ್ಬಂದಿ, ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಆಧಾರ್ ಕಾರ್ಡ್ ಕೇಳುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

Aadhaar Card Is Not Mandatory For Cremation

ಆಧಾರ್ ಕಾರ್ಡ್ ಪಡೆಯುವಂತೆ ಯಾವುದೇ ಸೂಚನೆ ನೀಡಿಲ್ಲ, ಸೂಚನೆ ನೀಡಿರುವ ದಾಖಲೆಗಳನ್ನು ಹೊರತುಪಡಿಸಿ, ಬೇರೆ ದಾಖಲೆಗಳನ್ನು ಕೇಳಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ವ್ಯಕ್ತಿ ಮರಣ ಹೊಂದಿರುವ ಬಗ್ಗೆ ವೈದ್ಯ ಅಥವಾ ಆಸ್ಪತ್ರೆಯಿಂದ ದೃಢೀಕರಣ ಪತ್ರ, ಶವ ಸಂಸ್ಕಾರಕ್ಕೆ ತಂದಿರುವ ದೇಹವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮೃತ ವ್ಯಕ್ತಿ ಭಾವಚಿತ್ರ ಹೊಂದಿರುವ ಯಾವುದಾದರೂ ಗುರುತಿನ ಚೀಟಿ, ಸೂಕ್ತ ದಾಖಲೆ ಇಲ್ಲದ ಸಂದರ್ಭದಲ್ಲಿ ಪಾರ್ಥಿವ ಶರೀರದೊಂದಿಗೆ ಬರುವ ನಿಕಟವರ್ತಿಯಿಂದ , ವೈದ್ಯರಿಂದ ಅಥವಾ ಆಸ್ಪತ್ರೆಯಿಂದ ಶವ ಸಂಸ್ಕಾರಕ್ಕೆ ತಂದಿರುವ ಮೃತದೇಹದ ಬಗ್ಗೆ ಸ್ವಯಂ ಮುಚ್ಚಳಿಕೆ ಪತ್ರ ಹಾಗೂ ಯಾವುದಾದರೂ ಚೀಟಿ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

English summary
The BBMP has made it clear that the dead person's Aadhaar is no longer mandatory for the funeral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X