ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಪಡೆದ ಮಹಿಳೆ ಸಾವು!

|
Google Oneindia Kannada News

ಬೆಂಗಳೂರು, ಅ. 22: ಕೊರೊನಾವೈರಸ್ ಸೋಂಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಮಹಿಳೆ ತಲೆಸುತ್ತು ಬಂದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಮಾಕ್ಷಿಪಾಳ್ಯದ ಲಕ್ಷ್ಮಣ ನಗರ ನಿವಾಸಿ ಮಂಗಳಾ (36) ಮೃತಪಟ್ಟ ಮಹಿಳೆ. ಕಾಮಾಕ್ಷಿಪಾಳ್ಯದಲ್ಲಿ ಪತ್ನಿ ದಿನೇಶ್ ಅವರೊಂದಿಗೆ ವಾಸವಾಗಿದ್ದರು. ಕೊರೊನಾ ಸೋಂಕಿಗೆ ಲಸಿಕೆ ಹಾಕಿಸಿಕೊಳ್ಳಲೆಂದು ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಳು. ಸುಮಾರು 11.20 ರ ಸುಮಾರಿಗೆ ಲಸಿಕೆ ಪಡೆದು ಮನೆಗೆ ವಾಪಸ್ ಆಗಿದ್ದರು. ಮನೆ ಸಮೀಪದ ಮಾರ್ಕೆಟ್ ಬಳಿ ಬರುವಾಗ ಕೆಳಗೆ ಕುಸಿದು ಬಿದ್ದಿದ್ದಾರೆ. ಮಂಗಳಾ ಅವರು ಕುಸಿದು ಬಿದ್ದಿದ್ದನ್ನು ನೋಡಿದ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಮಂಗಳಾ ಸಾವನ್ನಪ್ಪಿರುವುದನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಸತ್ಯ: ಲಸಿಕೆ ಹಾಕಿಸಿಕೊಂಡ ಕಾರಣದಿಂದ ಮಂಗಳಾ ಸಾವನ್ನಪ್ಪಿದರೇ? ಅಥವಾ ಅನ್ಯ ಕಾರಣದಿಂದ ಮೃತಪಟ್ಟರೇ ಎಂಬುದು ವೈದ್ಯಕೀಯ ಪರೀಕ್ಷೆಯ ಬಳಿಕ ನಿಖರ ಕಾರಣ ಗೊತ್ತಾಗಲಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಮೃತರ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 A woman who has been vaccinated for coronavirus has collapsed and died in Bengaluru

ಲಸಿಕೆ ಕಾರಣವೇ?: ಮಂಗಳಾ ಅವರು ಕೊರೊನಾಗೆ ಲಸಿಕೆ ಪಡೆದು ಸಾವನ್ನಪ್ಪಿರುವ ಸಂಗತಿ ಲಸಿಕೆ ಪಡೆಯುವರಲ್ಲಿ ಆತಂಕ ಸೃಷ್ಟಿಸಿದೆ. ಅವಧಿ ಮುಗಿದ ಲಸಿಕೆ ಪಡೆದು ಜೀವಕ್ಕೆ ಆಪತ್ತು ತಂದುಕೊಂಡರೇ? ಲಸಿಕೆ ಕಾರಣದಿಂದ ಸಾವನ್ನಪ್ಪಿದರೇ? ಅಥವಾ ಬೇರೆ ಕಾರಣದಿಂದ ಸಾವನ್ನಪ್ಪಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ಸತ್ಯ ಬಯಲಿಗೆ ಬರಬೇಕಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

''ಕೊರೊನಾ ಲಸಿಕೆಯಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ನಾವು ಹೇಳಲಿಕ್ಕೆ ಸಾಧ್ಯವೇ ಈಲ್ಲ. ಈಗಾಗಲೇ ದೇಶದಲ್ಲಿ ಒಂದು ಕೋಟಿ ಜನರು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದು ಯಾರೂ ಸಾವನ್ನಪ್ಪಿಲ್ಲ. ಮಹಿಳೆ ಅನ್ಯ ಕಾರಣದಿಂದ ಸಾವನ್ನಪ್ಪಿದ್ದರು. ಲಸಿಕೆ ಪಡೆದ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ಹೇಳಲಿಕ್ಕೆ ಸಾಧ್ಯವೇ ಇಲ್ಲ. ಹಾಗೆ ಲಸಿಕೆ ಪಡೆದು ಸಾವನ್ನಪ್ಪಿದ್ದರೆ ಸಾಮೂಹಿಕ ಸಾವುಗಳು ಸಂಭವಿಸಬೇಕಿತ್ತು. ಯಾವುದೋ ಬೇರೆ ಕಾರಣದಿಂದ ಸಾವನ್ನಪ್ಪಿರಬಹುದು. ಇಲ್ಲವೆ ಕೊರೊನಾ ಲಸಿಕೆಯನ್ನು ನಿಯಮಗಳ ಪ್ರಕಾರ ಸಂರಕ್ಷಣೆ ಮಾಡದೇ ಇರುವ ಕಾರಣಕ್ಕೆ ಮೃತಪಟ್ಟಿರಲೂಬಹುದು. ಈ ಕುರಿತು ವೈದ್ಯಕೀಯ ಪರೀಕ್ಷೆ ನಡೆದ ಬಳಿಕವೇ ಸತ್ಯ ಹೊರ ಬರಲಿದೆ,'' ಎಂದು ವೈದ್ಯರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಕೊವಿಡ್-19 ಲಸಿಕೆ ಅಂಕಿ ಅಂಶ:
ರಾಜ್ಯದಲ್ಲಿ ಈವರೆಗೂ ಶೇ.83ರಷ್ಟು ಅಂದರೆ 4.15 ಕೋಟಿ ಜನರಿಗೆ ಕೊವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 2.05 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ

ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಶ್ರಮ ಹಾಗೂ ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಲಸಿಕೆ ಡೋಸ್ ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶಗಳಲ್ಲಿ ಶೇ.20ರಷ್ಟು ಲಸಿಕೆ ನೀಡುವುದಲ್ಲೂ ಸಾಧ್ಯವಾಗಿಲ್ಲ. ಇದು ಜನರು ನರೇಂದ್ರ ಮೋದಿಯವರ ನಾಯಕತ್ವ ಮತ್ತು ಜನಪರ ಕಾರ್ಯಕ್ರಮಗಳ ಬಗ್ಗೆ ನಂಬಿಕೆ, ವಿಶ್ವಾಸ ಮತ್ತು ಭರವಸೆ ಹೊಂದಿರುವುದರ ಸಂಕೇತವಾಗಿದೆ. ಸುಮಾರು 30 ಕೋಟಿ ಜನರಿಗೆ ಎರಡೂ ಲಸಿಕೆ ಕೊಡಲಾಗಿದೆ. 34,515 ಕೋಟಿ ರೂಪಾಯಿ ಒಟ್ಟು ವೆಚ್ಚವಾಗಿದೆ ಎಂದು ಇಲಾಖೆ ತಿಳಿಸಿದೆ.

2021ರ ಜನವರಿ 16ರಂದು ಪ್ರಧಾನಿಯವರು ಲಸಿಕೆ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಆರಂಭದಲ್ಲಿ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಲಸಿಕೆ ಕೊಡಲಾಯಿತು. ನಂತರ ಮುಂಚೂಣಿ ಕಾರ್ಯಕರ್ತರು, ಮಾರ್ಚ್‍ನಲ್ಲಿ 60ರಿಂದ ಮೇಲ್ಪಟ್ಟ ವಯಸ್ಕರಿಗೆ, ಏಪ್ರಿಲ್ ತಿಂಗಳಿನಿಂದ 45 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ, ಮೂರನೇ ಹಂತದಲ್ಲಿ ಮೇ 2021ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗಿದೆ.

Recommended Video

Narendra Modi ಲಸಿಕೆಯ ವಿಚಾರವಾಗಿ ಹೇಳಿದ್ದೇನು | Oneindia Kannada

ಜನವರಿ 2021ರಲ್ಲಿ 2.15 ಕೋಟಿ ಲಸಿಕೆ ನೀಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ 23.51 ಕೋಟಿ, ಅಕ್ಟೋಬರ್ ತಿಂಗಳ ಈವರೆಗೆ ಸುಮಾರು 26.61 ಕೋಟಿ ಲಸಿಕೆ ಕೊಡಲಾಗಿದೆ. ಮುಂದಿನ ತಿಂಗಳು ಇನ್ನೂ ಹೆಚ್ಚು ಲಸಿಕೆ ಕೊಡಲಾಗುವುದು. ಎಲ್ಲಿಯೂ ಲಸಿಕೆ ಕೊರತೆ ಇಲ್ಲ ಎಂದು ಇಲಾಖೆ ಅಂಕಿ ಅಂಶ ತಿಳಿಸಿದೆ.

English summary
A woman who has been vaccinated for coronavirus has collapsed and died in Bengaluru know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X