ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿ. ಅಶ್ವಥ್ 75 ಹೆಸರಿನಲ್ಲಿ ಮತ್ತೆ 'ಕನ್ನಡವೇ ಸತ್ಯ'

By Mahesh
|
Google Oneindia Kannada News

ಬೆಂಗಳೂರು, ಡಿ.14: ಗಾನ ಗಾರುಡಿಗ ದಿವಂಗತ ಡಾ. ಸಿ. ಅಶ್ವಥ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಡಿ.29 ರಂದು 'ಕನ್ನಡವೇ ಸತ್ಯ' ಹೆಸರಿನಲ್ಲಿ ಭಾವ ರೂಪಕ ಪ್ರತಿಷ್ಠಾನ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಭಾವ ರೂಪಕ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಮಾತನಾಡಿ, 'ಕನ್ನಡವೇ ಸತ್ಯ' ಎಂದು ಹಾಡಿದ ನಂತರ ಅಶ್ವಥ್ ಅವರು ಸಂಗೀತ ಲೋಕಕ್ಕೆ ಬಹಳ ಹತ್ತಿರವಾದರು, ಅವರು ಗಾಯನ ಲೋಕವನ್ನು ಬಿಟ್ಟು ಹೋದರು ಸಹ ಅವರ ನೆನಪು, ಒಡನಾಟ ಇನ್ನೂ ಎಲ್ಲರೊಂದಿಗೆ ಉಳಿದಿದೆ ಎಂದು ತಿಳಿಸಿದರು.

'ಕನ್ನಡವೇ ಸತ್ಯ' ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದ್ದು, ನಾಡಿನ ಅನೇಕ ಗಾಯಕರು, ರಂಗ ಕಲಾವಿದರು, ರಾಜಕೀಯ ರಂಗದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಂದು ಅಶ್ವಥ್ ಹಾಡಿದ ಹಲವಾರು ಗೀತೆಗಳನ್ನು ಹಾಡಲಾಗುವುದು ಹಾಗೂ ಅವರು ಬಳಸಿದ ಸಂಗೀತ ವಾದ್ಯಗಳನ್ನು ಪ್ರದರ್ಶಿಸಲಾಗುತ್ತದೆ.

A Tribute to Late C Ashwath on his Birthday Kannadave Satya musical event
ಮುಂದಿನ ದಿನಗಳಲ್ಲಿ ಡಾ.ಸಿ.ಅಶ್ವಥ್ ಅವರು ಸಂಗೀತದಲ್ಲಿ ನಿರ್ದೇಶಿಸಿದ ಗೀತೆಗಳನ್ನು ಆಸಕ್ತ ವಿದ್ಯಾರ್ಥಿಗಳಿಗೆ ಖ್ಯಾತ ಗಾಯಕರಿಂದ ಉಚಿತವಾಗಿ ತರಬೇತಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಹ ಉಚಿತ ಪಾಸುಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೊಬೈಲ್ ಸಂಖ್ಯೆ 87119 67615 ನ್ನು ಸಂಪರ್ಕಿಸಿ ಪಡೆಯಬಹುದು.

ಗ್ಲೋಬಲ್ ಇವೆಂಟ್ ಸಂಸ್ಥೆ ಈ ಹಿಂದೆ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕನ್ನಡವೇ ಸತ್ಯ ಕಾರ್ಯಕ್ರಮ ಭಾರಿ ಯಶಸ್ವಿಯಾಗಿತ್ತು. ಸಿ. ಅಶ್ವಥ್ ಅವರು ಈ ಕಾರ್ಯಕ್ರಮಗಳ ಮೂಲಕ ಭಾವಗೀತೆ, ಸುಗಮ ಸಂಗೀತದ ಜನಪ್ರಿಯತೆಯನ್ನು ಮನೆ ಮನೆಗೆ ಕೊಂಡೊಯ್ದಿದ್ದರು.

English summary
In order to give tribute to late C Ashwath on his 75th Birthday Kannadave Satya musical event has been organised by his fans and disciples. Kannadave Satya was a musical event by C. Ashwath to create cultural and musical awareness locally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X