ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ನೃತ್ಯ ದಿನ: ಕೊರೋನಾ ಕಾಲದಲ್ಲೊಂದು ಕುಣಿತ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಇಡೀ ಜಗತ್ತೇ ಕೊರೋನಾ ವೈರಾಣು ಹಾವಳಿಯಿಂದ ನಲುಗಿಹೋಗಿರುವ ಈ ಸಂದರ್ಭದಲ್ಲಿ ಕೊರೋನಾ ನಿರ್ಮೂಲನೆಗಾಗಿ ಸಾಮಾಜಿಕ ಅಂತರ, ಲಾಕ್ ಡೌನ್ ಪಾಲನೆ ಕುರಿತಂತೆ ಜಾಗೃತಿ ಮೂಡಿಸುವ ಹಲವು ಕಿರುಚಿತ್ರಗಳನ್ನು ಸೃಜನಶೀಲ ಮನಸ್ಸುಗಳು ತಯಾರಿಸುತ್ತಿವೆ.

ಈ ಸರಣಿಯಲ್ಲಿ ಮುಖ್ಯವಾದುದು 'DANCE IN THE TIME OF LOCKDOWN... ಕೊರೋನಾ ಕಾಲದಲ್ಲೊಂದು ಕುಣಿತ'. ಲಾಕ್ ಡೌನ್ ಅವಧಿಯಲ್ಲಿ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ತೆರಳುವ ನೃತ್ಯಪಟು ಯುವಕನೊಬ್ಬನ ಕಥಾವಸ್ತುವನ್ನು ಕಿರುಚಿತ್ರ ಒಳಗೊಂಡಿದೆ. ಕೊರೋನಾದಿಂದಾಗಿ ಮಾನಸಿಕ ಆತಂಕ, ಖಿನ್ನತೆ ಮುಂತಾದವುಗಳಿಗೆ 'ಯೋಗ' ಉತ್ತಮ ಪರಿಹಾರ ಎಂಬ ಸಂದೇಶವೂ ಚಿತ್ರದಲ್ಲಿದೆ.

'ಮೆಣಸಿನಕಾಯ್ ಮೂವೀಸ್' ಸಂಸ್ಥೆ ನಿರ್ಮಿಸಿರುವ 12 ನಿಮಿಷ ಅವಧಿಯ ಈ ಕಿರುಚಿತ್ರದಲ್ಲಿ ಮೂವರು ಪಾತ್ರಧಾರಿಗಳಿದ್ದು, ಇವರೂ ಸೇರಿದಂತೆ ನಿರ್ದೇಶನ ತಂಡದ ಸದಸ್ಯರೆಲ್ಲಾ ಪ್ರತ್ಯೇಕವಾಗಿ ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೇ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಮನೆಯ ಕಾಂಪೌಂಡ್ ದಾಟಿಲ್ಲ. ಪಾತ್ರಧಾರಿಗಳ ಕುಟುಂಬ ಸದಸ್ಯರು ಮೊಬೈಲ್‍ ಫೋನ್ ಕ್ಯಾಮರಾದಲ್ಲೇ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

A special short film for World Dance Day

ಏಪ್ರಿಲ್ 29ರ ವಿಶ್ವ ನೃತ್ಯ ದಿನದ ಅಂಗವಾಗಿ ಈ ಚಿತ್ರ ತಯಾರಿಸಿರುವುದು ಮತ್ತೊಂದು ವಿಶೇಷ. ಚಿತ್ರಕಥೆ, ಸಂಕಲನ ಜತೆಗೆ ನಿರ್ದೇಶನ ವೀರನಾರಾಯಣ ಅವರದ್ದು. ಸಹಾಯಕ ನಿರ್ದೇಶನ ರಮ್ಯ ಜಿ.ಎಸ್. ಮತ್ತು ಇಂಗ್ಲಿಷ್ ಉಪಶೀರ್ಷಿಕೆ ವೆಂಕಟೇಶ ಬೆಳಗುಲಿ. ನಟವರ್ಗದಲ್ಲಿ ಧನಂಜಯ ಟಿ.ಆರ್., ಕೃಪಾಶ್ರೀ ವಿ ಮತ್ತು ರಘುನಾಥ್ ಎಂ.ಎಸ್. ಇದ್ದಾರೆ. ಚಿತ್ರದ ಲಿಂಕ್ ಇಲ್ಲಿದೆ

English summary
A special short film for World Dance Day, dance in the time of Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X