• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಹೆಡ್ ಕಾನ್ಸ್‌ಟೇಬಲ್ ಮೇಲೆ ಡ್ಯಾಗರ್‌ನಿಂದ ಹಲ್ಲೆಗೈದ ರೌಡಿಶೀಟರ್

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಬೆಂಗಳೂರಿನಲ್ಲಿ ಮಹಿಳಾ ಪೊಲೀಸ್ ಹೆಡ್ ಕಾನ್ಸ್ ಟೇಬಲ್‌ಗೆ ರೌಡಿಯೊಬ್ಬ ಹಲ್ಲೆಗೈದ ಘಟನೆ ನಡೆದಿದೆ. ಎಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿನ ಜ್ಯೋತಿನಗರದಲ್ಲಿ ರೌಡಿಶೀಟರ್‌ನನ್ನು ಠಾಣೆಗೆ ಕರೆದುಕೊಂಡು ಬರಲು ತೆರಳಿದ್ದ ವೇಳೆ ಡ್ಯಾಗರ್‌ನಿಂದ ಹಲ್ಲೆ ಮಾಡಿದ್ದಾನೆ. ಮಹಿಳಾ ಹೆಡ್ ಕಾನ್ಸ್‌ಟೇಬಲ್ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೌಡಿಶೀಟರ್‌ಗಳ ಮನಸ್ಥಿತಿಯೇ ವಿಚಿತ್ರವಾಗಿರುತ್ತದೆ. ರೌಡಿ ಆಸಾಮಿಗಳನ್ನು ಬಂಧಿಸಲೋ ಅಥವಾ ಕರೆತರಲೋ ಹೋಗಬೇಕಾದರೇ ಪೊಲೀಸರು ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಎಚ್‌ಎಎಲ್ ಪೊಲೀಸರು ಈ ನಿಟ್ಟಿನಲ್ಲಿ ಸ್ವಲ್ಪ ಯಾಮಾರಿದ್ದರಿಂದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಚಾಕುವನ್ನು ಇರಿಯಲಾಗಿದೆ.

ವಿನುತಾ ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ. ರೌಡಿ ಶೀಟರ್ ಶೇಕ್ ಶರೀಫ್@ಶರೀಫ್ ನಿಂದ ಆಗಸ್ಟ್ 6_ರಂದು ಘಟನೆ ನಡೆದಿದ್ದು ಚಿಕಿತ್ಸೆ ಪಡೆದು ಮೂರು ದಿನಗಳ ಬಳಿಕ ಮಹಿಳಾ ಹೆಡ್ ಕಾನ್ಸ್‌ಟೇಬಲ್ ದೂರು ದಾಖಲಿಸಿದ್ದಾರೆ. ಆರೋಪಿ ಮೇಲೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಿದ್ದೂ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ ಎನ್ನಲಾಗುತ್ತಿದೆ.

A Rowdy Sheeter attacks Female head constable by Dagger in Jyoti Nagar

Recommended Video

   ಮೆಟ್ರೋ ರೈಲಿನಲ್ಲಿ ಸೀಟ್ ಬಿಡ್ಲಿಲ್ಲ ಅಂತ ಮಹಿಳೆಯರ ಕಿತ್ತಾಟದ ವಿಡಿಯೋ ವೈರಲ್ | Oneindia Kannada

   ಜಾಮೀನಿನ ಮೇಲೆ ಹೊರ ಬಂದಿದ್ದ ಶೇಖ್ ಷರೀಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆಸಾಮಿ ಮತ್ತೊಂದು ಕೊಲೆ ಮಾಡಲು ಸಂಚು ರೂಪಿಸಿರೋದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನಲೆ ಆತನನ್ನು ಠಾಣೆಗೆ ಕರೆತರಲು ಹೋಗಿದ್ದ WHC ವಿನುತಾ ಮತ್ತು ತಂಡ ಶೇಕ್ ಬೆನ್ನು ಹತ್ತಿದ್ದರು. ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳಿರುವ ವೇಳೆ ರಾತ್ರಿ 9.30 ಕ್ಕೆ ಆತನನ್ನು ಹಿಡಿದು ಕರೆದುಕೊಂಡು ಮುಂದಾದಾಗ ಮಹಿಳಾ ಪೊಲೀಸ್ ವಿನುತಾಗೆ ಡ್ಯಾಗರ್‌ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ‌. ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಠಾಣೆಗೆ ಕರೆತಂದ ಪೊಲೀಸರು, ಗಾಯಾಳು ವಿನುತಾಗೆ ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಿದ್ದರು. ಘಟನೆ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

   English summary
   A rowdy sheeter attacked female head constable by dagger in Jyotinagar under HAL police station limits, Know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X