ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕಿನಲ್ಲಿ ಭಾನುವಾರ 'ಬಸವ ಬಯಲು'

By Prasad
|
Google Oneindia Kannada News

ಬೆಂಗಳೂರು, ಮೇ 06 : ಕ್ರಾಂತಿಯೋಗಿ ಬಸವಣ್ಣನ ತತ್ತ್ವಗಳು, ಆತನ ಆಚಾರವಿಚಾರಗಳು, ಇಂದಿಗೂ ಪ್ರಸ್ತುತವಾಗಿರುವ ವಚನಗಳನ್ನು ಮೆಲುಕು ಹಾಕುವ ಉದ್ದೇಶದಿಂದ 'ಬಸವ ಬಯಲು' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಕಬ್ಬನ್ ಪಾರ್ಕ್ ನಲ್ಲಿ ಮೇ 7, ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ.

ಸಮಾನ ಮನಸ್ಕ ಸಾಮಾಜಿಕ ಜಾಲತಾಣ ತಂಡ ಮತ್ತು ಬಸವಣ್ಣ ಫೇಸ್ಬುಕ್ ಅಡ್ಮಿನ್ ತಂಡ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ವಚನ ಕಮ್ಮಟ, ಬಸವಣ್ಣನ ತತ್ತ್ವಗಳ ಕುರಿತು ಚರ್ಚೆ, ಕಲ್ಯಾಣ ಕ್ರಾಂತಿ, ವಚನ ಗಾಯನ... ಹೀಗೆ ಹಲವು ಕಾರ್ಯಕ್ರಮಗಳು ಜರುಗಲಿವೆ.[ಕ್ರಾಂತಿಯೋಗಿ ಅಣ್ಣ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ?]

A program in the memory of Basavanna at Cubbon Park

ಹನ್ನೆರಡನೇ ಶತಮಾನದಲ್ಲಿ ಇದ್ದ ಸಾಮಾಜಿಕ ಅಸಮಾನತೆ, ಶೋಷಣೆ, ಧಾರ್ಮಿಕ ಮೌಢ್ಯತನ, ಸ್ತ್ರೀ ಸ್ವಾತಂತ್ರ್ಯ ಹರಣದ ವಿರುದ್ಧ ಕ್ರಾಂತಿಯನ್ನು ಮಾಡಿ, ಕಾಯಕ, ದಾಸೋಹ, ನಂಬಿಕೆ, ಸಮಾನತೆ, ಸಹೋದರತೆಯನ್ನ ದೇಶದ ಉದ್ದಗಲಕ್ಕೂ ಬಿತ್ತಿ, ಮಾನವೀಯ ಮೌಲ್ಯಗಳ ತತ್ವಗಳನ್ನ ಹರಡಿದ್ದ ಬಸವಾದಿ ಶರಣರ ಸ್ಮರಣೆ ಇಂದಿಗೆ ಅತ್ಯವಶ್ಯ.[ಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿ]

ಈ ಕಾರ್ಯಕ್ರಮಕ್ಕೆ ನಾವು ನೀವೆಲ್ಲ ಜೊತೆಯಾಗೋಣ ಬನ್ನಿ. ಶರಣರ ತತ್ತ್ವಗಳನ್ನ ಅರಿಯೋಣ, ಮರೆಯಾಗುತ್ತಿರುವ ಮೌಲ್ಯಗಳನ್ನು ಮರದ ನೆರಳಲಿ ಕುಳಿತು ಮರುಪಠಿಸೋಣ ಬನ್ನಿ. ನೀವೂ ಬನ್ನಿ, ಬಸವಣ್ಣನ ತತ್ತ್ವಗಳಲ್ಲಿ ನಂಬಿಕೆಯಿರುವ ಸಮಾನ ಮನಸ್ಕರನ್ನೂ ಕರೆತನ್ನಿ.

ಸ್ಥಳ : ಕಬ್ಬನ್ ಪಾರ್ಕ, ಸೆಂಟ್ರಲ್ ಲೈಬ್ರರಿ ಹಿಂಭಾಗ, ಬೆಂಗಳೂರು.
ದಿನಾಂಕ, ಸಮಯ : ಮೇ 7, ಬೆಳಿಗ್ಗೆ 10 ಗಂಟೆಗೆ

English summary
A program in the memory of Basavanna at Cubbon Park has been organized by Basavanna Facebook team on 7th May, Sunday. All are welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X