• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತಗಟ್ಟೆಯ ಅವಾಂತರಗಳು: ಪೋಲಿಂಗ್ ಆಫೀಸರ್ ಬಿಚ್ಚಿಟ್ಟ ಕಹಿಸತ್ಯ!

|

ಬೆಂಗಳೂರು, ಏಪ್ರಿಲ್ 19: "ಮತದಾನ ಪವಿತ್ರ ಕೆಲಸ ಎಂದೇ ನಂಬಿ ಕರ್ತವ್ಯ ನಿರ್ವಹಿಸಲು ಹೋದವರು ನಾವು. ಆದರೆ ನಮ್ಮ ಮತವನ್ನೂ ಚಲಾಯಿಸಲಾಗದೆ, ಸರಿಯಾದ ಯಾವ ವ್ಯವಸ್ಥೆಯೂ ಇಲ್ಲದೆ ನಾವು ಪಟ್ಟ ಪಾಡು ನೆನಪಾದರೆ ಭ್ರಮನಿರಸನವಾಗುತ್ತದೆ" ಇದು ಮತಗಟ್ಟೆಯ ಅವಾಂತರಗಳ ಬಗ್ಗೆ ತಮ್ಮ (ಕಹಿ) ಅನುಭವವನ್ನು ಹಂಚಿಕೊಂಡ ಶೋಭಾ ಶಾಂತಾರಾಂ ಅವರ ಮಾತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರದ ಗರುಡಾಚಾರ್ ಪಾಳ್ಯದ ಮತಗಟ್ಟೆಯೊಂದರ ಕತೆ ಇದು. ಆಕ್ಸ್ ಫರ್ಡ್ ಇಂಗ್ಲಿಷ್ ಶಾಲೆಯ ಮತಗಟ್ಟೆ ಸಂಖ್ಯೆ 191 ಮತ್ತು192 ಕೇವಲ 10/10 ಅಳತೆಯ ಕೋಣೆ! ಶಾಲೆ ದೊಡ್ಡದಾಗಿ ಚೆನ್ನಾಗಿಯೇ ಇದ್ದರೂ, ಉಪಯೋಗಿಸದೆ, ಪಾಳುಬಿದ್ದ ಎರಡು ರೂಮುಗಳನ್ನು ಮತಗಟ್ಟೆಯನ್ನಾಗಿ ಮಾಡಲಾಗಿತ್ತು! ಅಂದರೆ ಆ ರೂಮಿನ ಸ್ಥಿತಿ ಹೇಗಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ!

2ನೇ ಹಂತ: 90 ಲೋಕಸಭಾ ಕ್ಷೇತ್ರಗಳಲ್ಲಿ ಶೂನ್ಯ ಮತದಾನ

ಚುನಾವಣೆ ಕರ್ತವ್ಯದ ಮೇರೆಗೆ ನಾವೆಲ್ಲ ಏಪ್ರಿಲ್ 17 ರ ಸಾಯಂಕಾಲವೇ ಮತಗಟ್ಟೆಯ ಬಳಿ ತೆರಳಿದ್ದೆವು. ಮಳೆ ಸುರಿದು ಅಲ್ಲೆಲ್ಲ ರಾಡಿ ರಾಡಿಯಾಗಿದ್ದರಿಂದ ಕಾಲಿಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಮೂರು ಮಾರು ದೂರದಲ್ಲಿ ಇಟ್ಟಿಗೆಗಳನ್ನು ಹಾಕಿಕೊಂಡು, ಸಾಹಸದಿಂದ ಅದಗ್ಹೇಗೋ ಮತಗಟ್ಟೆಯ ಒಳಗೆ ತಲುಪಿದ್ದೆವು!"

ಮತಗಟ್ಟೆ ಪ್ರವೇಶಿಸುವುದೇ ಹರಸಾಹಸ

ಮತಗಟ್ಟೆ ಪ್ರವೇಶಿಸುವುದೇ ಹರಸಾಹಸ

"ಮತಗಟ್ಟೆಯೊಳಗೆ ತೆರಳುವುದಕ್ಕೆ ಜಾರುಬಂಡೆಯ ರೀತಿಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದರಲ್ಲಿ ಯುವಕರು ಮಾತ್ರವೇ ತೆರಳಬಹುದಿತ್ತೇ ವಿನಃ, ವಯಸ್ಸಾದವರೆಲ್ಲ ಮತ್ತೊಬ್ಬರ ಸಹಾಯವಿಲ್ಲದೆ ತೆರಳುವುದಕ್ಕೆ ಸಾಧ್ಯವೇ ಇರಲಿಲ್ಲ. ಮತದಾನಕ್ಕೆ ಬರುವ ಪ್ರತಿಯೊಬ್ಬರೂ ಅದನ್ನು ಶಪಿಸಿಕೊಂಡೇ ಹೋಗುತ್ತಿದ್ದರು! ಇಂಥ ಮತಗಟ್ಟೆಗೆ ಬಂದು ಮತಚಲಾಯಿಸುವುದಕ್ಕೆ ಯಾರಿಗೆ ಮನಸ್ಸಾಗಬೇಕು?"

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಮತ ಹಾಕುವುದು ಹೇಗೆ ಎಂಬುದೇ ಗೊತ್ತಿಲ್ಲ!

ಮತ ಹಾಕುವುದು ಹೇಗೆ ಎಂಬುದೇ ಗೊತ್ತಿಲ್ಲ!

"ಇದೊಂದು ಕತೆಯಾದರೆ, ಇನ್ನು ಕೆಲವರಿಗೆ ಮತ ಚಲಾಯಿಸುವದಕ್ಕೇ ಬರುತ್ತಿರಲಿಲ್ಲ. ವಿವಿಪ್ಯಾಟ್ ಮಶಿನ್ ಅನ್ನೇ ಇವಿಎಂ ಎಂದುಕೊಳ್ಳುತ್ತಿದ್ದರು. ನಂತರ ನಾವೇ ಅವರಿಗೆ ತಿಳಿ ಹೇಳಬೇಕಿತ್ತು. ಇವಿಎಂ ಮುಂದೆ ಹೋಗಿ ಎಷ್ಟೋ ಜನ ಏನು ಮಾಡಬೇಕೆಂದೇ ತಿಳಿಯದೆ ನಿಂತಿರುತ್ತಿದ್ದರು. ಆದರೆ ನಾವು ಅವರ ಬಳಿ ಹೋಗಿ ಹೇಳಿಕೊಡುವಂತಿರಲಿಲ್ಲ! ಈ ಕಹಿ ಅನುಭವದ ನಡುವೆ ದಾಖಲಾದ ಒಂದೇ ಸಿಹಿಘಟನೆ ಎಂದರೆ ತೀರಾ ವಯಸ್ಸಾದ ಅಜ್ಜಿಯೊಬ್ಬರು ಬಂದು, ಯಾರ ಸಹಾಯವೂ ಇಲ್ಲದೆ ಆತ್ಮವಿಶ್ವಾಸದಿಂದ ಮತಹಾಕಿ ಹೋಗಿದ್ದು! ಆದರೆ ಎಷ್ಟೋ ಯುವಕರೇ ಮತ ಚಲಾಯಿಸುವುದು ಹೇಗೆಂದು ತಿಳಿಯದೆ, ನೀಲಿ ಬಟನ್ ಒಟ್ತುವ ಬದಲು ಕೆಂಪು ದೀಪವನ್ನು ಒತ್ತಿದ್ದು ಕಂಡುಬಂತು!

ಪ್ರತಿಯೊಬ್ಬ ಮತದಾರರಿಗೂ ಮತದಾನ ಹೇಗೆ ಮಾಡಬೇಕು ಎಂಬ ಬಗ್ಗೆ ಇನ್ನೂ ಪರಿಣಾಮಕಾರಿಯಾಗಿ ತಿಳಿವಳಿಕೆ ನೀಡುವ ಅಗತ್ಯವಿದ್ದೇ ಇದೆ. ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಮತಗಟ್ಟೆಗಳಲ್ಲಿ ಇಂಥ ಪರಿಸ್ಥಿತಿ ಇದ್ದರೆ ಮತಚಲಾವಣೆಯ ಪ್ರಮಾಣ ಹೆಚ್ಚಾಗಬೇಕೆಂದರೆ ಹೇಗಾಗುತ್ತದೆ?"

ನಮಗೇ ಮತಹಾಕುವ ಅದೃಷ್ಟ ಇರಲಿಲ್ಲ!

ನಮಗೇ ಮತಹಾಕುವ ಅದೃಷ್ಟ ಇರಲಿಲ್ಲ!

"ಇನ್ನು ನಮ್ಮ ಕತೆ ಹೇಳುವುದಕ್ಕೆ ಹೋದರೆ ಅದು ಮತ್ತೊಂದು ಅಧ್ಯಾಯ. "ನಾವು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಬೇಕು ಎಂದು ಗಂಟೆಗಟ್ಟಲೆ ಕಾದು ಫಾರ್ಮ್ 12 ಅನ್ನು ತೆಗೆದುಕೊಂಡು ಹೋದರೆ, 'ವೋಟರ್ ಐಡಿ ಇಲ್ಲದೆ ಈ ಫಾರ್ಮ್ ತಗೊಳೋಲ್ಲ, ನಿಮ್ಮ ಗುರುತಿನ ಚೀಟೀ ಕೊಡಿ' ಎಂದು ನಮ್ಮ ಅಂಚೆ ಮತವನ್ನೇ ಸ್ವೀಕರಿಸಲಿಲ್ಲ! ಫಾರ್ಮ್ 12 ನಲ್ಲೇ ಕಳಗೆ, 'ನಿಮ್ಮ ಮತದಾರರ ಚೀಟಿಯನ್ನು ಅಥವಾ ಯಾವುದೇ ಗುರುತಿನ ಚೀಟಿಯನ್ನು ತಪ್ಪದೇ ತನ್ನಿ' ಎಂಬ ಸೂಚನೆಯನ್ನು ಮುದ್ರಿಸಿದ್ದರೆ ನಾವು ತೆಗೆದುಕೊಂಡು ಹೋಗುತ್ತಿದ್ದೆವು. ಅದ್ಯಾವುದರ ಮಾಹಿತಿಯನ್ನೂ ನೀಡಿದೆ, ನಾವು ಮತದಾನ ಮಾಡುವ ಅವಕಾಶವನ್ನೇ ಕಳೆದುಕೊಳ್ಳುವಂತಾಯ್ತು. ಮತದಾನ ಪವಿತ್ರ ಕೆಲಸ ಎನ್ನುತ್ತ, ಆ ಪವಿತ್ರ ಕೆಲಸ ಮಾಡುವುದಕ್ಕೆಂದು ಪೊಲಿಂಗ್ ಆಫಿಸರ್ ಆಗಿ ಹೋದ ನಮಗೇ ಮತದಾನ ಅವಕಾಶ ಸಿಗಲಿಲ್ಲ ಎಂಬುದು ದುರಂತವಲ್ಲದೆ ಇನ್ನೇನು?"

ಎರಡೇ ಟಾಯ್ಲೆಟ್! ಒಂದಕ್ಕೆ ಬಾಗಿಲಿಲ್ಲ, ಇನ್ನೊಂದಕ್ಕೆ ಚೀಲಕವಿಲ್ಲ!

ಎರಡೇ ಟಾಯ್ಲೆಟ್! ಒಂದಕ್ಕೆ ಬಾಗಿಲಿಲ್ಲ, ಇನ್ನೊಂದಕ್ಕೆ ಚೀಲಕವಿಲ್ಲ!

"ಅಷ್ಟೇ ಅಲ್ಲ, ನಮಗೆ ವಾಸದ ವ್ಯವಸ್ಥೆ ಹೇಗಿತ್ತು ಎಂದರೆ ಆ ರೂಮಿನಲ್ಲುದ್ದ ಎರಡೇ ಎರಡು ಟಾಯ್ಲೆಟ್ ರೂಮಿನಲ್ಲಿ ಒಂದಕ್ಕೆ ಬಾಗಿಲೇ ಇರಲಿಲ್ಲ, ಇನ್ನೊಂದಕ್ಕೆ ಚೀಲಕವೇ ಇರಲಿಲ್ಲ! ನಾವು ಪೊಲೀಂಗ್ ಆಫೀಸರ್ ಗಳಾಗಿ ಕೆಲಸ ಮಾಡುವವರು ಮನುಷ್ಯರಲ್ಲವಾ?

ಇವೆಲ್ಲ ಹಣದ ಕೊರತೆಯಿಂದ ಉಂಟಾಗುವ ಸಮಸ್ಯೆ ಎಂದು ನನಗನ್ನಿಸುವುದಿಲ್ಲ, ಇಲ್ಲಿ ಕೊರತೆ ಇರುವುದು ಹಣವಲ್ಲ, ಆಲೋಚನೆ! ಇಡೀ ದೇಶವೂ ಶೌಚಾಲಯ ನಿರ್ಮಾಣ ಎನ್ನುತ್ತ ಕ್ರಾಂತಿ ಮಾಡುವುದಕ್ಕೆ ಹೊರಟಿದ್ದರೆ, ಸರ್ಕಾರದ ಕೆಲಸವನ್ನೇ ಮಾಡಲು ಹೊರಟ ನಾವು ಇಂಥ ಶೌಚಾಲಯ ನೋಡಬೇಕಾದ್ದು ದುರ್ದೈವವೇ ತಾನೇ?

ಮತದಾರರಿಗೆ ಅನುಕೂಲವಾಗುವಂಥ ಮತಗಟ್ಟೆಯ ನಿರ್ಮಾಣ, ಮತದಾರರಿಗೆ ಮತದಾನದ ಅರಿವು ಮೂಡಿಸುವಂಥ ಕೆಲಸವಾದರೆ ಚುನಾವಣೆ, ಮತದಾನದ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂಬುದು ನನ್ನ ಭಾವನೆ."

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha elections 2019: Shobha Shantharam, who worked as polling officer for a booth in Bangalore central constiteuncy on April 18, shares her horrible experience in polling booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more