ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೆ ಸಲ್ಲಿಕೆಯಾಗಿದ್ದ ನಾಮಪತ್ರವೂ ಪರಿಗಣನೆಗೆ: ಸಂಜೀವ್ ಕುಮಾರ್

|
Google Oneindia Kannada News

ಬೆಂಗಳೂರು, ನವೆಂಬರ್ 10: ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಕಾರಣ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಅಥಣಿ, ಕಾಗವಾಡ, ಗೋಕಾಕ್, ಎಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯ್ ನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 13ರಂದೇ ಹೊರ ಬೀಳುತ್ತೆ ಅನರ್ಹ ಶಾಸಕರ ಭವಿಷ್ಯನವೆಂಬರ್ 13ರಂದೇ ಹೊರ ಬೀಳುತ್ತೆ ಅನರ್ಹ ಶಾಸಕರ ಭವಿಷ್ಯ

ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ ಆಗಲಿದೆ. ಹಿಂದೆ ಕೂಡ ನಾಮಪತ್ರ ಸಲ್ಲಿಕೆ ಆಗಿತ್ತು. ಅವೂ ಪರಿಗಣನೆ ಆಗುತ್ತವೆ. ಚುನಾವಣೆ ಆಯೋಗದ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿಕೆ ನೀಡಿದ್ದಾರೆ.

 A Nomination That Was Previously Submitted For Consideration

15 ಮತ ಕ್ಷೇತ್ರಗಳಲ್ಲಿ ಒಟ್ಟು 4185 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ.22598 ಚುನಾವಣೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಈ 15 ಕ್ಷೇತ್ರಗಳಲ್ಲಿ ಒಟ್ಟು 37,50565 ಮತದಾರರಿದ್ದಾರೆ.

ಅದರಲ್ಲಿ 19,1791 ಪುರುಷ ಮತದಾರರು, 18,37375 ಮಹಿಳಾ ಮತದಾರರು. 399 ಇತರೆ ಮತದಾರರಿದ್ದಾರೆ.18 ರಿಂದ 19 ವರ್ಷದ 71,613 ಯುವ ಮತದಾರರು ಇದ್ದಾರೆ. ಯಾವುದೇ ಭಯ, ಆತಂಕ ಇಲ್ಲದೆ ಎಲ್ಲರೂ ಬಂದು ಮತದಾನ ಮಾಡಬಹುದು.ಮತದಾನಕ್ಕೆ ಬೇಕಾದ ಎಲ್ಲ ಭದ್ರತೆಯನ್ನು ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
-ನಾಮಪತ್ರ ಸಲ್ಲಿಕೆ ಆರಂಭ - 11-11-2019
-ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ - 18-11-2019
-ನಾಮಪತ್ರ ಪರಿಶೀಲನೆ - 19-11-2019
-ನಾಮಪತ್ರ ವಾಪಸ್ ಪಡೆಯಲು 21-11-2019 ಕೊನೆಯ ದಿನಾಂಕ.
-15 ಕ್ಷೇತ್ರಗಳಲ್ಲಿ ಮತದಾನ 05-12-2019 ರಂದು ನಡೆಯಲಿದೆ.
-ಮತಗಳ ಎಣಿಕೆ - 09-12-2019

English summary
Chief Election Officer Sanjeev Kumar has informed the that the By elections will be held in 15 assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X