ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ದೇಶಿತ ಲಿಂಕ್ ರಸ್ತೆಯಿಂದ 140 ಮರ, ಶಾಲೆ, ಕೆರೆ, ಅನಾಥಾಲಯ ನಿರ್ನಾಮ?

|
Google Oneindia Kannada News

ಬೆಂಗಳೂರು, ಜುಲೈ 29: ವೈಟ್ ಫೀಲ್ಡ್ ನಲ್ಲಿ ಹೊಸತಾಗಿ ಲಿಂಕ್ ರಸ್ತೆಯೊಂದನ್ನು ನಿರ್ಮಿಸಲು ಹೊರಟಿರುವ ಬಿಬಿಎಂಪಿ ಯೋಜನೆಯಿಂದಾಗಿ, ಒಂದು ಶಾಲೆ, ಒಂದು ಅನಾಥಾಲಯ, ಒಂದು ಗುಪ್ತ ಕೆರೆ ಸೇರಿದಂತೆ 140 ಮರಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಹೇಳಲಾಗಿದೆ.

ಸ್ಮಾರ್ಟ್ ಸಿಟಿಗೆ ಬಲಿಯಾಗಲಿದೆಯೆ ಶಿವಾಜಿನಗರದ ರಸೆಲ್ ಮಾರ್ಕೆಟ್ಸ್ಮಾರ್ಟ್ ಸಿಟಿಗೆ ಬಲಿಯಾಗಲಿದೆಯೆ ಶಿವಾಜಿನಗರದ ರಸೆಲ್ ಮಾರ್ಕೆಟ್

ವರ್ತೂರು ಮುಖ್ಯ ರಸ್ತೆಯಿಂದ ಐಟಿಪಿಎಲ್ ನ 80 ಅಡಿ ರಸ್ತೆಗೆ ಲಿಂಕ್ ಕೊಡುವ ರಸ್ತೆ ನಿರ್ಮಾಣ ಯೋಜನೆ ಇದಾಗಿದೆ. ತನ್ನ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಬಿಬಿಎಂಪಿ, ವೈಟ್ ಫೀಲ್ಡ್ ಪ್ರಾಂತ್ಯದಲ್ಲಿನ ಸಂಚಾರ ದಟ್ಟಣೆ ನಿವಾರಿಸಲು ಈ ರಸ್ತೆ ನಿರ್ಮಾಣ ಅವಶ್ಯಕತೆಯಿದೆ ಎಂದು ಹೇಳಿದೆ.

ಆದರೆ, ಬಿಬಿಎಂಪಿ ವಾದವನ್ನು ಒಪ್ಪದ ಈ ಪ್ರಾಂತ್ಯದ ನಾಗರಿಕರು, ಈ ಯೋಜನೆ ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಅನುಕೂಲ ಕಲ್ಪಿಸಲೆಂದೇ ತಯಾರು ಮಾಡಲಾಗಿದೆ. ಹಲವಾರು ಮರಗಳು, ಶಾಲೆ, ಅನಾಥಾಲಯಗಳು ಇದಕ್ಕೆ ಬಲಿಯಾಗುವುದರಿಂದ ಈ ಯೋಜನೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ.

ಇಂದಿರಾ ಕ್ಯಾಂಟೀನ್‌ ಮಾರ್ಗ, ಮೆನು ತಿಳಿಸಲಿದೆ ಬಿಬಿಎಂಪಿಯ ಹೊಸ ಆ್ಯಪ್‌ ಇಂದಿರಾ ಕ್ಯಾಂಟೀನ್‌ ಮಾರ್ಗ, ಮೆನು ತಿಳಿಸಲಿದೆ ಬಿಬಿಎಂಪಿಯ ಹೊಸ ಆ್ಯಪ್‌

ಯೋಜನೆಯ ಮೊದಲ ಹಂತದಲ್ಲಿ ವೈಟ್ ಫೀಲ್ಡ್ ಮುಖ್ಯರಸ್ತೆಯಿಂದ ಶುರುವಾಗಿ, ಇಸಿಸಿ ರಸ್ತೆಗೆ ಸೇರಿಕೊಳ್ಳುವ ಲಿಂಕ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಆದರೆ, ಈ ಯೋಜನೆಯಲ್ಲಿಯೇ ಒಂದು ಶಾಲೆ, ಅನಾಥಾಲಯವು ಯೋಜನೆಯಿಂದ ಜಾಗ ಕಳೆದುಕೊಳ್ಳುತ್ತವೆ. ಆದರೆ, ವೈಟ್ ಫೀಲ್ಡ್ ಮುಖ್ಯ ರಸ್ತೆಯಿಂದ ಇಸಿಸಿ ರಸ್ತೆಯನ್ನು ಸಂಪರ್ಕಿಸಲು ಅನೇಕ ಅಡ್ಡ ರಸ್ತೆಗಳಿರುವಾಗ ಈ ಹೊಸ ಯೋಜನೆಯ ಅಗತ್ಯವಿತ್ತೇ ಎಂಬುದು ಜನರ ಪ್ರಶ್ನೆ.

English summary
Anew link road proposed to cut across Whitefield has created a flutter in the tech corridor. Residents rubbish the argument saying it would not only massacre hundreds of trees but will also prove profitable for powerful builders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X