ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕೊರೊನಾ' ಮೂಲಕ ಜೀವನ ಸತ್ಯ ಹೇಳಿದ 'ಅನಾಮಿಕ'

|
Google Oneindia Kannada News

ಬೆಂಗಳೂರು, ಮಾರ್ಚ್ 11: ಕೊರೊನಾ ಇಡೀ ಪ್ರಪಂಚದ ಜನರಿಗೆ ಭಯ ಹುಟ್ಟಿಸಿದೆ. ಎಲ್ಲಿ ನೋಡಿದರೂ ಸಾವು, ಸಂಕಟ, ಕಣ್ಣೀರು ಮೂಡಿದೆ. ಕೊರೊನಾ ಪರಿಣಾಮ ಹೇಗಿದೆ ಎನ್ನುವುದನ್ನು ಯಾರೋ ಒಬ್ಬರು ತಮ್ಮ ಸಾಲುಗಳಲ್ಲಿ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೊರೊನಾ ಬಗ್ಗೆಯ ಸುಂದರ ಸಾಲುಗಳು ವೈರಲ್ ಆಗುತ್ತಿದೆ.

''ಕಣ್ಣಿಗೆ ಕಾಣದ ಒಂದು ವೈರಸ್ ವಿಶ್ವದ ಎಲ್ಲಾ ಬಲಿಷ್ಠ ರಾಷ್ಟ್ರಗಳ ನಾಯಕರ ಅಹಂಕಾರ, ದೌಲತ್ತು, ಕಪಟ ರಾಜಕಾರಣ, ರಕ್ತ ರಾಜಕಾರಣ, ಗಡಿಗಳೆಂಬ ಮೌಡ್ಯ, ಅಭಿವೃದ್ಧಿ ಎನ್ನುವ ಮಿಥ್ಯೆ ಎಲ್ಲವನ್ನೂ ನಿವಾಳಿಸಿ ಬಿಸಾಡಿದೆ.

ಕೊರೊನಾ ಶಂಕಿತ ವೃದ್ಧ ಬಲಿ: ಕರ್ನಾಟಕದ ಮೊದಲ ಸಾವುಕೊರೊನಾ ಶಂಕಿತ ವೃದ್ಧ ಬಲಿ: ಕರ್ನಾಟಕದ ಮೊದಲ ಸಾವು

ಇಡೀ ವಿಶ್ವವನ್ನು ನೂರಾರು ಬಾರಿ ನಾಶ ಮಾಡಬಹುದಾದಷ್ಟು ಬಾಂಬ್, ಬಂಕರ್ ಗಳನ್ನು ಶೇಖರಿಸಿ ಇಟ್ಟುಕೊಂಡಿರುವ ಎಲ್ಲಾ ದೇಶಗಳನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ಹೈರಾಣಾಗಿಸಿದೆ.ವಿಶ್ವದ ಮುಕ್ತಿ ನಮ್ಮದೇ ಕೈಯಲ್ಲಿ ಇದೆ ಎಂದು ತಾವು ನಂಬಿಕೊಂಡು, ತಮ್ಮ ಭಕ್ತರನ್ನೂ ನಂಬಿಸಿದ್ದ ಎಲ್ಲಾ ಧರ್ಮ ಗುರುಗಳೂ ತಮ್ಮ ಪಾದಪೂಜೆಗಳನ್ನು ರದ್ದುಗೊಳಿಸಿದ್ದಾರೆ. ಕೆಮ್ಮು ಜ್ವರ ಇರುವವರಿಗೆ ದೇವರ ದರ್ಶನವನ್ನು ದೇವಸ್ಥಾನಗಳು ನಿಷೇಧಿಸಿ ಫಲಕಗಳನ್ನು ಲಗತ್ತಿಸುತ್ತಿವೆ.

A Message About Coronavirus Becoming Viral In Whatsapp

ಜೀವಮಾನ ಇಡೀ ವಿಜ್ಞಾನದ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳು ಜಗತ್ತಿನಾದ್ಯಂತ ಭಯ ಬೀತಗೊಂಡು ಮೌನಕ್ಕೆ ಶರಣಾಗಿದ್ದಾರೆ. ದೇಶ ದೇಶಗಳನ್ನೇ ಖರೀದಿಸುವಷ್ಟು ಸಂಪತ್ತನ್ನು ತನ್ನದೇ ದೇಶದ ಜನರಿಂದ ಸುಲಿಗೆ ಮಾಡಿದ ಅತೀ ಶ್ರೀಮಂತರ ಹಣ ಷೇರು ಮಾರುಕಟ್ಟೆಯಲ್ಲಿ ತುಕ್ಕು ಹಿಡಿಯುತ್ತಿದೆ.

ಮನುಷ್ಯ ನಿರ್ಮಾಣದ ಬಾಂಬು, ಬಂಕರ್, ಧರ್ಮ, ಜಾತಿ, ಯುದ್ದ, ಯುದ್ದೋನ್ಮಾದ, ಗಡಿ, ವ್ಯಾಪ್ತಿ, ಬೇಲಿ, ಪೌರತ್ವ, ಅಧಿಕಾರ, ವಿಶ್ವ ನಾಯಕ, ವಿಶ್ವ ಗುರು, ಶ್ರೀಮಂತಿಕೆ...ಇತ್ಯಾದಿ ಎಲ್ಲಾ ಅಹಂ ಮತ್ತು ದೌಲತ್ತನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ನಿವಾಳಿಸಿ ಬಿಸಾಡಿದೆ.''

ಭಾರತೀಯನನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್‌ಭಾರತೀಯನನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್‌

ಈ ಸಾಲುಗಳನ್ನು ಆದ್ಯಾರು ಬರೆದರೋ ತಿಳಿದಿಲ್ಲ. ಆದರೆ, ಜೀವನದ ಬಗ್ಗೆ ಇರುವ ಈ ಸಾಲುಗಳು ಅನೇಕರ ಮನ ಗೆದ್ದಿದೆ. ವಾಟ್ಸ್ ಅಪ್ ನಲ್ಲಿ ಈ ಸಂದೇಶ ವೈರಲ್ ಆಗುತ್ತಿದೆ.

English summary
Coronavirus In India: A Message about Coronavirus becoming viral in whatsapp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X