ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಂಡ್ತಿಗಾಗಿ ಏನೋ ಮಾಡೋಕೆ ಹೋಗಿ ಹೊಯ್ಸಳ ಪೊಲೀಸರಿಗೆ ಸಿಕ್ಕಿ ಬಿದ್ದ ಪಾಪ !

|
Google Oneindia Kannada News

ಬೆಂಗಳೂರು, ಮಾರ್ಚ್ 05: ಹೆಂಡತಿಗೆ ಒಳ್ಳೆಯ ಗಂಡ ಅನ್ನಿಸಿಕೊಳ್ಳೋಕೆ ಏನೇನೋ ಸಾಹಸ ಮಾಡಬೇಕು. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯ ಸೋಷಿಯಲ್ ಮೀಡಿಯಾ ಹುಚ್ಚಿನ ಹೆಬ್ಬಯಕೆ ತೀರಿಸೋಕೆ ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತ ಮಾಡಿದ ಕೆಲಸ ನೋಡಿ ಪೊಲೀಸರು ಕೂಡ ಬೇಸ್ತು ಬಿದ್ದಿದ್ದಾರೆ. ಆತ ಮಾಡಿದ ಕೆಲಸ ನೋಡಿದ್ರೆ ಇಂತಹವರು ಸಮಾಜದಲ್ಲಿ ಇರುತ್ತಾರಾ ಎಂದು ಅಚ್ಚರಿಯಾಗುತ್ತದೆ !

ಆತನ ಹೆಸರು. ರವಿ. ಮುದ್ದಾದ ಪತ್ನಿ. ಆದರೆ ಆಕೆಗೆ ಯಾವಾಗ್ಲೂ ಫೇಸ್ ಬುಕ್ ಮತ್ತು ಇನ್‌ಸ್ಟಾ ಜಾಲ ತಾಣದಲ್ಲಿ ಬ್ಯುಸಿಯಾಗಿರುತ್ತಾಳೆ. ಮೊಬೈಲ್ ನಲ್ಲಿ ನೋಡಿ ಕಣ್ಣಿಗೆ ತುಂಬಾ ಸಮಸ್ಯೆ ಆಗಿತ್ತಂತೆ. ಅದಕ್ಕಾಗಿ, ನನಗೆ ಏನಾದ್ರೂ ಮಾಡಿ ಲ್ಯಾಪ್‌ಟಾಪ್ ಮತ್ತು ಇಂಟರ್ ನೆಟ್ ಕೊಡಿಸು ಅಂತ ದಂಬಾಲು ಬಿದ್ದಿದ್ದಳು. ಮೊಬೈಲ್ ನೋಡಿ ನೋಡಿ ಕಣ್ಣು ನೋವು ಬಂದಿದೆ ಎಂದು ಬೇಡಿಕೆ ಇಟ್ಟಿದ್ದಾಳೆ. ಗಂಡ ರವಿ ಬಳಿ ಹಣ ಇರಲಿಲ್ಲ. ಹೀಗಾಗಿ ಪತ್ನಿ ದಿನಾ ಕಿರಕ್ ಮಾಡುತ್ತಿದ್ದಳಂತೆ. ಹೆಂಡತಿ ಆಸೆ ತೀರಿಸದ ಕಾರಣ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಹೀಗಾಗಿ ರವಿ ಹೊಸ ಉಪಾಯ ಹೂಡಿದ. ಅದರಂತೆ ಕಳ್ಳತನ ಮಾಡಲು ಹೋಗಿ ಹೊಯ್ಸಳ ಪೊಲೀಸರಿಗೆ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾನೆ.

A man was arrested by police who was stealing at a supermarket for satisfy his wife demand

Recommended Video

ಕೋವಿನ್‌ ಆಪ್‌ನಲ್ಲಿ ನೋಂದಣಿ ಹೇಗೆ ? ಏನೆಲ್ಲಾ ವಿವರ ಸಲ್ಲಿಸಬೇಕು? ಇಲ್ಲಿದೆ ಡಿಟೇಲ್ಸ್‌ | Oneindia Kannada

ತನ್ನ ಹೆಂಡತಿಗೆ ಬೇಕಿರುವ ಲ್ಯಾಪ್‌ಟಾಪ್ ಮತ್ತು ವೈಫೈ ಕೊಡಿಸಲು ದುಡ್ಡು ಇರಲಿಲ್ಲ. ಹೀಗಾಗಿ ಹೆಂಡತಿಗೆ ಬೇಕಿದ್ದ ಲ್ಯಾಪ್‌ಟಾಪ್ ಗಾಗಿ ಕೆ.ಆರ್. ಪುರಂನಲ್ಲಿರುವ ಸಂಯುಕ್ತ ಸೂಪರ್ ಮಾರ್ಕೆಟ್ ಮೇಲೆ ಕಣ್ಣು ಹಾಕಿದ. ಕಿಟಕಿ ಗಾಜು ಒಡೆದು ಮಳಿಗೆಗೆ ನುಗ್ಗಿ ಎಪತ್ತು ಸಾವಿರ ನಗದು, ವೈಫೈ, ರೂಟರ್, ಕದ್ದಿದ್ದ. ಕಳ್ಳತನ ಮಾಡಿ ಇನ್ನೇನು ಹೊರಗೆ ಬರುವಷ್ಟರಲ್ಲಿ ಹೊಯ್ಸಳ ಪೊಲೀಸರು ಅದೇ ಸಮಯಕ್ಕೆ ಬಂದಿದ್ದಾರೆ. ಹೊಯ್ಸಳ ಪೊಲೀಸರನ್ನು ನೋಡಿ ಎಲ್ಲಾ ವಸ್ತುಗಳನ್ನು ಬಿಸಾಡಿ ಓಡಲು ಯತ್ನಿಸಿದ್ದಾರೆ. ಹೊಯ್ಸಳ ಸಿಬ್ಬಂದಿ ಚೇಸ್ ಮಾಡಿ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನ್ನ ಹೆಂಡತಿಯ ಫೇಸ್ ಬುಕ್ ಸ್ಟೋರಿ, ಲ್ಯಾಪ್‌ಟಾಪ್ ಗೆ ಕಿರಿಕ್ ಮಾಡುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಆತನ ವಿರುದ್ಧ ಕೆ.ಆರ್. ಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ.

English summary
Police have arrested a man who robbed a supermarket to satisfy his wife demand know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X