ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಹಣ ಕೊಡಲಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ

|
Google Oneindia Kannada News

ದೊಡ್ಡಬಳ್ಳಾಪುರ, ಡಿಸೆಂಬರ್ 02: ಬೆಂಗಳೂರು ನಗರ ಸಮೀಪದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ್ದಾನೆ.

ತೂಬುಗೆರೆ ನಿವಾಸಿ ಕುಮಾರ ಎಂಬಾತ ಇಂದು ಬೆಳಿಗ್ಗೆ ಗ್ರಾಮದ ಕಾರ್ಪೊರೇಷನ್ ಬ್ಯಾಂಕ್‌ ಬ್ಯಾಂಕ್‌ ಗೆ ಬಂದು ತನ್ನ ಖಾತೆಯಲ್ಲಿರುವ ಹಣ ನೀಡುವಂತೆ ಸಿಬ್ಬಂದಿಗೆ ಕೇಳಿದ್ದಾನೆ. 'ನಿಮ್ಮ ಬ್ಯಾಂಕ್ ಖಾತೆಯಲ್ಲಿ ಈಗ 240 ರೂಪಾಯಿ ಅಷ್ಟೇ ಇದೆ. ಖಾತೆಯಲ್ಲಿ ಮೂರು ವರ್ಷದಿಂದ ವ್ಯವಹಾರ ನಡೆದಿಲ್ಲ, ಹಾಗಾಗಿ ಅಗ್ಯತ್ಯ ದಾಖಲೆಗಳನ್ನು ನೀಡಿ, ಹಣ ಪಡೆದುಕೊಳ್ಳಿ' ಎಂದು ಬ್ಯಾಂಕ್ ನೌಕರ ಹೇಳಿದ್ದಾನೆ.

 ಆಗಷ್ಟೇ ಡ್ರಾ ಮಾಡಿದ್ದ ಗರಿಗರಿ ನೋಟುಗಳ ಲಪಟಾಯಿಸಿದ ಕಳ್ಳರು ಆಗಷ್ಟೇ ಡ್ರಾ ಮಾಡಿದ್ದ ಗರಿಗರಿ ನೋಟುಗಳ ಲಪಟಾಯಿಸಿದ ಕಳ್ಳರು

ಆದರೆ ಇದಕ್ಕೆ ಒಪ್ಪದ ಕುಮಾರ, ನನ್ನ ಖಾತೆಯಲ್ಲಿರುವ ಹಣ ನನಗೆ ಕೊಡಿ ಎಂದು ಗಲಾಟೆ ಮಾಡಿದ್ದಾನೆ. ಆದರೆ ಇದಕ್ಕೆ ಒಪ್ಪದ ಬ್ಯಾಂಕ್ ನೌಕರ ಅಗತ್ಯ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ.

A Man Try To Kill Bank Worker For Silly Reason

ಇದರಿಂದ ಕುಪಿತಗೊಂಡು ಮನೆಗೆ ತೆರಳಿ, ಮಚ್ಚೊಂದನ್ನು ತೆಗೆದುಕೊಂಡು ಬ್ಯಾಂಕ್‌ ಗೆ ನುಗ್ಗಿದ ಕುಮಾರ, ಏಕಾ-ಏಕಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಬ್ಯಾಂಕ್ ನೌಕರ ಹಿಂದೆ ಸರಿದಿದ್ದರಿಂದ ಮಚ್ಚಿನೇಟಿನಿಂದ ಬಚಾವ್ ಆಗಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಮುದ್ರಾ ಯೋಜನೆ ಸೀಮಿತವೇ..?ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಮುದ್ರಾ ಯೋಜನೆ ಸೀಮಿತವೇ..?

ಮತ್ತೂ ನೌಕರನನ್ನು ಅಟ್ಟಾಡಿಸಿ ಮಚ್ಚಿನಿಂದ ಹೊಡೆಯಲು ಮುಂದಾದಾಗ ಅಲ್ಲಿದ್ದ ಸ್ಥಳೀಯರು ಕುಮಾರ ನನ್ನು ಹಿಡಿದು, ಥಳಿಸಿ, ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

English summary
Man try to kill a bank worker for not giving 240 rs money which is in his account. Incident happened in Doddaballapura near Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X