ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್ ದರೋಡೆಗೆ ವಿಫಲ ಯತ್ನ, ಗಾರ್ಡ್ ಮೇಲೆ ಹಲ್ಲೆ

By Super Admin
|
Google Oneindia Kannada News

ಬೆಂಗಳೂರು, ಜ. 10: ರಾಜಾಜಿನಗರದ ವೀರಶೈವ ಸಹಕಾರ ಬ್ಯಾಂಕ್‌ನಲ್ಲಿ ಬುಧವಾರ ರಾತ್ರಿ ಕಳ್ಳತನಕ್ಕೆ ಕಳವಿಗೆ ಯತ್ನಿಸಿದವ ಉದ್ದೇಶ ಈಡೇರದೆ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಹಲ್ಲೆಗೀಡಾಗಿರುವ ಕಾವಲುಗಾರ ಮಣಿಕಂಠನ್ (63) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮತ್ತೋರ್ವ ಸೆಕ್ಯುರಿಟಿ ಗಾರ್ಡ್ ನಾಗೇಶ್ (52) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. [ಸರಗಳ್ಳನಿಗೆ ಗುಂಡೇಟು]

ರಾಜಾಜಿನಗರದ 3ನೇ ಬ್ಲಾಕ್‌ನ 46ನೇ ಅಡ್ಡ ರಸ್ತೆಯಲ್ಲಿ ವೀರಶೈವ ಸಹಕಾರಿ ಬ್ಯಾಂಕ್ ಕಚೇರಿ ಇದೆ. ಬ್ಯಾಂಕ್ ಇದ್ದ ಕಟ್ಟಡಕ್ಕೆ ಇದ್ದವ ಒಬ್ಬನೇ ಸೆಕ್ಯೂರಿಟಿ ಗಾರ್ಡ್ ಮಣಿ. ರಾತ್ರಿ ಅವರು ಮಲಗಿದ್ದಾಗ 2.30 ಗಂಟೆ ಸಮಯದಲ್ಲಿ ಕಳ್ಳನೋರ್ವ ನಕಲಿ ಕೀಲಿ ಬಳಸಿ ಬ್ಯಾಂಕ್ ಶೆಟರ್ ತೆರೆಯಲು ಯತ್ನಿಸಿದ್ದ. ಆಗ ಉಂಟಾದ ಶಬ್ದಕ್ಕೆ ಎಚ್ಚರಗೊಂಡ ಮಣಿ ಹೊರಬಂದು ಆತನನ್ನು ಹಿಡಿಯಲು ಯತ್ನಿಸಿದರು.

money

ಗಾಯಗೊಂಡಿದ್ದು ಓರ್ವ, ಮೃತಪಟ್ಟಿದ್ದು ಇನ್ನೋರ್ವ : ತಕ್ಷಣ ಮಣಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ. ಆದರೆ, ಪ್ರತಿರೋಧ ಎದುರಾದಾಗ ಕಳ್ಳ ಪರಾರಿಯಾದ. ಗಲಾಟೆ ಕೇಳಿ ಪಕ್ಕದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ತುಳಸೀರಾಮ್ ಎಂಬುವರು ಓಡಿ ಬಂದರು. ತಕ್ಷಣ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿ, ಆತನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. [ಟೆಕ್ಕಿಗೆ ಚಾಕುವಿನಿಂದ ಇರಿದು ದರೋಡೆ]

ಅನಂತರ ಬ್ಯಾಂಕ್ ಬಳಿ ಮತ್ತೋರ್ವ ಸೆಕ್ಯುರಿಟಿ ಗಾರ್ಡ್ ನಾಗೇಶ ಎಂಬುವರನ್ನು ನೇಮಿಸಲಾಗಿತ್ತು. ಅವರು ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ! : ಸಾಮಾನ್ಯವಾಗಿ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳು ಭದ್ರತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತವೆ. ಸಿಸಿ ಕ್ಯಾಮರಾ ಅದರಲ್ಲಿ ಪ್ರಮುಖವಾದುದು. ಆದರೆ, ದರೋಡೆಗೆ ಯತ್ನ ನಡೆಸಿದ್ದ ವೀರಶೈವ ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. [ಶೂಟೌಟ್, 7 ಲಕ್ಷ ರು. ದರೋಡೆ]

ಇದು ಪೊಲೀಸ್ ಆಯುಕ್ತರ ಆದೇಶದ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಐಪಿಸಿ ಕಲಂ 188 ಅನ್ವಯ ಎಫ್ಐಆರ್ ದಾಖಲಿಸಲಾಗಿದೆ ಎಂದು ರಾಜಾಜಿನಗರದ ಪೊಲೀಸರು ತಿಳಿಸಿದ್ದಾರೆ.

{promotion-urls}

English summary
A man tried to rob Veerashaiva co-operative Bank at Rajajinagar in Bengaluru. But security guard stopped him while he tried to open bank door shutter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X