ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಕೆಆರ್‌ ಪುರಂ ನಿಲ್ದಾಣದಲ್ಲಿ ರೈಲಿಗೆ ಸಿಲುಕಬೇಕಾಗಿದ್ದ ವ್ಯಕ್ತಿ ರಕ್ಷಣೆ

|
Google Oneindia Kannada News

ಬೆಂಗಳೂರು, ಜುಲೈ 17: ರೈಲಿಗೆ ಸಿಲುಕಬೇಕಾಗಿದ್ದ ವ್ಯಕ್ತಿಯನ್ನು ಸಮಯ ಪ್ರಜ್ಞೆಯಿಂದ ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಬೆಂಗಳೂರಿನ ಕೆಆರ್ ಪುರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಸಚಿವಾಲಯ ವಿಡಿಯೋ ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ.

28 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯಾವಳಿಯಲ್ಲಿ, ಬೆಂಗಳೂರಿನ ಕೆಆರ್ ಪುರ ನಿಲ್ದಾಣದಲ್ಲಿ ರೈಲ್ವೆ ನೌಕರರು ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರಲ್ಲಿ ಒಬ್ಬರು ಇದ್ದಕ್ಕಿದ್ದಂತೆ ತಿರುಗಿ ನೋಡಿದಾಗ ಪ್ಲಾಟ್‌ಫಾರ್ಮ್‌ಗೆ ಏರಲು ಪ್ರಯತ್ನಿಸುವಾಗ ಕಾಲು ಜಾರಿ ಬಿದ್ದ ವ್ಯಕ್ತಿಯನ್ನು ನೋಡಿದರು.

ಯೋಧರ ಕಾಲಿಗೆ ನಮಸ್ಕರಿಸಿದ ಪುಟ್ಟ ಕಂದಮ್ಮ: ವಿಡಿಯೋ ವೈರಲ್ ಯೋಧರ ಕಾಲಿಗೆ ನಮಸ್ಕರಿಸಿದ ಪುಟ್ಟ ಕಂದಮ್ಮ: ವಿಡಿಯೋ ವೈರಲ್

ಸಮವಸ್ತ್ರದಲ್ಲಿದ್ದ ಇಬ್ಬರು ವ್ಯಕ್ತಿಗಳು ವ್ಯಕ್ತಿಯನ್ನು ರಕ್ಷಿಸಲು ಪ್ಲಾಟ್‌ಫಾರ್ಮ್‌ನಿಂದ ಹಳಿಗಳ ಮೇಲೆ ಹಾರಿದರು. ರೈಲ್ವೆ ಸಿಬ್ಬಂದಿ ಮತ್ತು ಫ್ಲಾಟ್‌ಫಾರ್ಮ್‌ನಲ್ಲಿದ್ದ ಇತರರು ವ್ಯಕ್ತಿಯ ಜೀವ ಉಳಿಸಲು ರೈಲ್ವೆ ಹಳಿ ಕಡೆಗೆ ಓಡಿ ಬಂದರು.

A Man Being Saved From The Tracks By Railway Staff

ರೈಲು ಬರುವ ಕೆಲವೇ ಸೆಕೆಂಡ್‌ಗಳ ಮೊದಲು, ಹಳಿಯಿಂದ ವ್ಯಕ್ತಿಯನ್ನು ಫ್ಲಾಟ್‌ಫಾರ್ಮ್‌ ಮೇಲಕ್ಕೆ ಎಳೆದುಕೊಂಡಿದ್ದಾರೆ. ಕೆಲವು ಸೆಕೆಂಡ್ ತಡವಾಗಿದ್ದರು ಅನಾಹುತವೇ ಸಂಭವಿಸುವ ಅಪಾಯವಿತ್ತು.

ಮಳೆಯಿಂದ ರೈಲು ರದ್ದು: ಮದ್ರಾಸ್ ಐಐಟಿ ವಿದ್ಯಾರ್ಥಿಗೆ ಭಾರತೀಯ ರೈಲ್ವೇ ಮಾಡಿದ ಸಹಾಯವೇನು?ಮಳೆಯಿಂದ ರೈಲು ರದ್ದು: ಮದ್ರಾಸ್ ಐಐಟಿ ವಿದ್ಯಾರ್ಥಿಗೆ ಭಾರತೀಯ ರೈಲ್ವೇ ಮಾಡಿದ ಸಹಾಯವೇನು?

"ಬೆಂಗಳೂರಿನ ಕೆಆರ್ ಪುರ ರೈಲು ನಿಲ್ದಾಣದಲ್ಲಿ ರೈಲು ಬರುವ ಕೆಲವೇ ಸೆಕೆಂಡ್‌ಗಳ ಮೊದಲು ಆರ್‌ಪಿಎಫ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಹಳಿಗಳ ಮೇಲೆ ಜಾರಿ ಬಿದ್ದ ವ್ಯಕ್ತಿಯ ಅಮೂಲ್ಯ ಜೀವವನ್ನು ಉಳಿಸಿದೆ" ಎಂದು ರೈಲ್ವೇ ಸಚಿವಾಲಯ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

ರಕ್ಷಣೆ ಮಾಡುವ ವಿಡಿಯೋ ವೈರಲ್; ಕೆಲವೇ ಸೆಕೆಂಡ್ ತಡವಾಗಿದ್ದರು ವ್ಯಕ್ತಿ ರೈಲೆಗೆ ಸಿಲುಕುವ ಅಪಾಯವಿತ್ತು. ವ್ಯಕ್ತಿ ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದನೋ, ಅಥವಾ ಉದ್ದೇಶಪೂರ್ವಕವಾಗಿ ಬಿದ್ದಿದ್ದಾನೋ ಎಂದು ವಿಡಿಯೋದಿಂದ ಸ್ಪಷ್ಟವಾಗಿಲ್ಲ. ಈ ವೀಡಿಯೊ ಟ್ವಿಟರ್‌ನಲ್ಲಿ ಇದುವರೆಗೆ ಸುಮಾರು 11,500 ಲೈಕ್‌ಗಳನ್ನು ಮತ್ತು 1,400 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ.

ಇದೇ ರೀತಿಯ ಪ್ರಯತ್ನಗಳ ವಿಡಿಯೋಗಳನ್ನು ಹೆಚ್ಚಾಗಿ ರೈಲ್ವೆ ಸಚಿವಾಲಯವು ಹಂಚಿಕೊಳ್ಳುತ್ತದೆ. ಕಳೆದ ತಿಂಗಳು ರೈಲ್ವೇ ಸಿಬ್ಬಂದಿಯೊಬ್ಬರು ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಹಸಿರು ನಿಶಾನೆ ತೋರುತ್ತಿದ್ದಾಗ ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಲು ಧಾವಿಸುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ರೈಲು ಬರುವ ಕೆಲವೇ ಸೆಕೆಂಡ್‌ಗಳ ಮೊದಲು ರೈಲ್ವೆ ಹಳಿಗಳ ಮೇಲೆ ಹಾರಿದ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದರು.

ರೈಲ್ವೆ ಸಿಬ್ಬಂದಿಯ ಸಮಯ ಪ್ರಜ್ಞೆಗೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷಣೆಯಾದ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ರೈಲ್ವೆ ನಿಲ್ದಾಣಗಳು, ರೈಲ್ವೆ ಹಳಿಗಳ ಸಮೀಪದಲ್ಲಿ ಚಲಿಸುವಾಗ ನಾಗರಿಕರು ಹೆಚ್ಚಿನ ಜಾಗೃತಿ ವಹಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

English summary
A man being saved from the tracks by just seconds before a train came speeding by In KR Puram station in Bengaluru. A video from Bengaluru has been shared by the ministry of railways went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X