ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ಐನಾತಿ ಕಳ್ಳನಿಗೆ ಕ್ರೈಂ ಸ್ಟೋರಿಗಳೇ ಸ್ಫೂರ್ತಿ!

|
Google Oneindia Kannada News

ಬೆಂಗಳೂರು, ಜನವರಿ.26: ಸೋಷಿಯಲ್ ಮೀಡಿಯಾವನ್ನು ಜನರು ಸಿಕ್ಕಾಪಟ್ಟೆ ಬಳಸುತ್ತಾರೆ. ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಸರ್ವೇ ಸಾಮಾನ್ಯ. ಇದನ್ನೇ ಬಳಸಿಕೊಂಡು ಬೆಂಗಳೂರಿನಲ್ಲಿ ಐನಾತಿ ಕಳ್ಳನೊಬ್ಬ ಮನೆಮನೆಗೂ ನುಗ್ಗಿ ತನ್ನ ಕೈಚಳಕ ತೋರುತ್ತಿದ್ದನು.

ಬೆಂಗಳೂರು ಬನಶಂಕರಿ ಪೊಲೀಸ್ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳನಿಗೆ ಕ್ರೈಂ ಸ್ಟೋರಿಗಳೇ ಸ್ಫೂರ್ತಿಯಂತೆ. ಟಿವಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಈತ ಕ್ರೈಂ ಸ್ಟೋರಿಗಳನ್ನು ನೋಡುತ್ತಿದ್ದ. ಬೆಳಗ್ಗೆ ಸ್ಟೋರಿಗಳನ್ನು ನೋಡಿ, ರಾತ್ರೋರಾತ್ರಿ ಮನೆಗೆ ನುಗ್ಗುತ್ತಿದ್ದ ಎಂಬ ಆಘಾತಕಾರಿ ವಿಚಾರ ಹೊರ ಬಿದ್ದಿದೆ.

ಬೆಂಗಳೂರಲ್ಲಿ ಪೊಲೀಸ್ ಮಾಹಿತಿದಾರನ ಹತ್ಯೆಬೆಂಗಳೂರಲ್ಲಿ ಪೊಲೀಸ್ ಮಾಹಿತಿದಾರನ ಹತ್ಯೆ

ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಅಪ್ ಡೇಟೆಂಡ್ ಕಳ್ಳ ಕಿರಣ್ ನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರ ಬಲೆಗೆ ಕಳ್ಳ ಸರಿಯಾಗಿ ತಗ್ಲಾಕೊಂಡಿದ್ದಾನೆ.

A Man Arrested Who Learn Theft From Social Media

ವೃದ್ಧೆಯ ಮನೆಗೆ ನುಗ್ಗಿದ್ದ ಆಸಾಮಿ ಅರೆಸ್ಟ್:

ಬೆಂಗಳೂರಿನಲ್ಲಿ ಒಂಟಿ ಮಹಿಳೆಯರು ಇರುವ ಮನೆಗಳನ್ನೇ ಆರೋಪಿ ಕಿರಣ್ ಟಾರ್ಗೆಟ್ ಮಾಡಿಕೊಂಡಿದ್ದನು. ಇತ್ತೀಚಿಗೆ ವೃದ್ಧೆಯೊಬ್ಬರ ಮನೆಗೆ ನುಗ್ಗಿದ್ದ ಆರೋಪಿ ಕಿರಣ್, ವೃದ್ಧೆಯ ಕೈ-ಕಾಲುಗಳನ್ನು ಕಟ್ಟಿಹಾಕಿ ಕಳ್ಳತತ ಮಾಡಿ ಎಸ್ಕೇಪ್ ಆಗಿದ್ದನು. ಮನೆಯಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಸೋಷಿಯಲ್ ಮೀಡಿಯಾಗಳಲ್ಲಿ ಕಳ್ಳತನದ ಬಗ್ಗೆ ಕಿರಣ್ ತಿಳಿದುಕೊಳ್ಳುತ್ತಿದ್ದನು. ಕ್ರೈಂ ಸ್ಟೋರಿಗಳನ್ನು ನೋಡಿಕೊಂಡು ಕಳ್ಳತನ ಮಾಡೋದನ್ನು ಕಲಿತಿದ್ದ ಎಂದು ತಿಳಿದು ಬಂದಿದೆ.

English summary
A Man Learned How To Theft From Social Media. Bangalore Police Arrested The Updated Thief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X