ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿಗಳೆ‌ ಕರುಣೆ ತೋರಿಸಿ, ನಮ್ಮನ್ನು ಕರೆಸಿಕೊಳ್ಳಿ

|
Google Oneindia Kannada News

ಗುಂಟೂರು, ಮಾರ್ಚ್ 28: ಕರುಣೆ ತೋರಿಸಿ ಇಲ್ಲಿಂದ‌ ನಮ್ಮನ್ನು ಕರೆಸಿಕೊಳ್ಳಿ‌‌ ಎಂದು ಕರ್ನಾಟಕ ಮೂಲದ ಕುಟುಂಬವೊಂದು ಆಂಧ್ರಪ್ರದೇಶದಿಂದ ಯಡಿಯೂರಪ್ಪನವರಿಗೆ ಮನವಿ‌ ಮಾಡಿದೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಲಸ‌ಕ್ಕೆ ಅಂತ ಹೋಗಿದ್ದ ಕುಟುಂಬ ಈಗ ತುಂಬ ತೊಂದರೆಯಲ್ಲಿದೆ. ಲಾಕ್ ಡೌನ್ ನಿಂದ ಊಟಕ್ಕೂ ಸಮಸ್ಯೆ ಆಗಿದೆ. ಹೀಗಾಗಿ ವಿಡಿಯೋ ಮಾಡಿ ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ತಮ್ಮ ತಂದೆ, ತಾಯಿ ತಮ್ಮಂದಿರ ಜೊತೆ ವಿಡಿಯೋ ಮಾಡಿ ಯುವಕನೊಬ್ಬ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ.

ಹಿರಿಯೂರಿನಲ್ಲಿ ಆತಂಕ ತಂದ ಶಿರಾ ಮೃತ ವ್ಯಕ್ತಿ ಸಂಬಂಧಿಗಳ ವಾಸ್ತವ್ಯಹಿರಿಯೂರಿನಲ್ಲಿ ಆತಂಕ ತಂದ ಶಿರಾ ಮೃತ ವ್ಯಕ್ತಿ ಸಂಬಂಧಿಗಳ ವಾಸ್ತವ್ಯ

a-karnataka-based-family-requesting-to-take-there-back-from-andra-pradesh

"ನಮ್ಮ ಕುಟುಂಬಕ್ಕೆ ತಿನ್ನಲು ಸಹ ಗತಿ ಇಲ್ಲದಂತೆ ಆಗಿದೆ. ಇಲ್ಲಿ ಯಾರು ಒಂದು ರೂಪಾಯಿ ಸಹ ಸಹಾಯ ಮಾಡುತ್ತಿಲ್ಲ. ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ.ನಮ್ಮನ್ನು ದಯಮಾಡಿ ಕರ್ನಾಟಕಕ್ಕೆ‌ ಕರೆಸಿಕೊಳ್ಳಿ." ಎಂದು ವಿಡಿಯೋದಲ್ಲಿ‌ ಮನವಿ ಮಾಡಿದ್ದಾನೆ.

ನೂರಕ್ಕೂ ಹೆಚ್ಚು ಕನ್ನಡಿಗರು, ದುಡಿಮೆ ಇಲ್ಲದ ಹಿನ್ನೆಲೆ ಊಟಕ್ಕೂ ಪರದಾಡುತ್ತಿರುತ್ತಿದ್ದಾರೆ. ಗುಂಟೂರಿನ ಬೇಕರಿಗಳಲ್ಲಿ ಚಿಕ್ಕಮಗಳೂರು, ಹಾಸನದ ಅನೇಕ ಜನರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ದಯವಿಟ್ಟು ನಮ್ಮನ್ನು ಕರ್ನಾಟಕಕ್ಕೆ ಕರೆಯಿಸಿಕೊಳ್ಳಿ ಅಂತ ಕನ್ನಡಿಗರು ಅಳಲು ತೋಡಿಕೊಂಡಿದ್ದಾರೆ.

English summary
Lack Down: A Karnataka based family requesting Yeddyurappa to take there bank from Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X