ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಜೆ ತಪ್ಪಿಸಲು ಸಿಬ್ಬಂದಿಗೆ ಗರ್ಭಪಾತ ಮಾಡಿಸಿದ ಆಸ್ಪತ್ರೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ನೂರಾರು ತಾಯಂದಿರ ಪಾಲಿಗೆ ದಾರಿದೀಪವಾಗಿರುವ ಆಸ್ಪತ್ರೆಯೊಂದು ತನ್ನ ಸಿಬ್ಬಂದಿಯ ಜೀವನವನ್ನೇ ನರಕ ಮಾಡಿದೆ.

ರಜೆ ನೀಡಬೇಕಾಗುತ್ತದೆ ಎಂದು ತನ್ನ ಸಿಬ್ಬಂದಿಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿರುವ ಆರೋಪ ಆಸ್ಟರ್ ಸಿಎಂಐ ಆಸ್ಪತ್ರೆ ಮೇಲೆ ಕೇಳಿಬಂದಿದೆ.ಈ ಸಂಬಂಧ ಹೆಬ್ಬಾಳದ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆಗಿರುವ ಸಿಬ್ಬಂದಿ ಆಸ್ಪತ್ರೆ ವಿರುದ್ಧ ಕೊಡಗೇಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

20 ನೇ ಬಾರಿಗೆ ಗರ್ಭಿಣಿಯಾದ ಮಹಾರಾಷ್ಟ್ರದ 38 ರ ಮಹಿಳೆ!20 ನೇ ಬಾರಿಗೆ ಗರ್ಭಿಣಿಯಾದ ಮಹಾರಾಷ್ಟ್ರದ 38 ರ ಮಹಿಳೆ!

ಆರೋಪಿಗಳಾದ ಆಸ್ಟರ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೀಶ್, ಸಿಓಓ ರಮೇಶ್ ರಮೇಶ್, ಮಾನವ ಸಂಪನ್ಮೂಲ ವಿಭಾಗದ ದುರ್ಗಾ ಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

A Hospital Forcefully Done Staff Abortion

ಯಲಹಂಕದ ಮಾರುತಿ ನಗರ ನಿವಾಸಿಯಾಗಿರುವ ನಾನು ಕೆಲ ವರ್ಷಗಳಿಂದ ಬಳ್ಳಾರಿ ಮುಖ್ಯರಸ್ತೆಯಲ್ಲಿರುವ ಅವರು ಆಸ್ಟರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ಗರ್ಭಿಣಿಯಾಗಿರುವ ವಿಚಾರವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ದುರ್ಗ ಪ್ರಸಾದ್ ಅವರು ಕರೆದು ನೀನು ಗರ್ಭಪಾತ ಮಾಡಿಸಿಕೋ ಇಲ್ಲವಾದರೆ ಕೆಲಸದಿಂದ ವಜಾ ಮಾಡುತ್ತೇವೆ ಎಂದು ಹೇಳಿದ್ದರು.

ಗರ್ಭಿಣಿ ಮೇಲೆ ಅತ್ಯಾಚಾರ, ಜೀವಬಿಟ್ಟ ಭ್ರೂಣ: ಅಮಾನವೀಯ ಕೃತ್ಯ ಬಹಿರಂಗಗರ್ಭಿಣಿ ಮೇಲೆ ಅತ್ಯಾಚಾರ, ಜೀವಬಿಟ್ಟ ಭ್ರೂಣ: ಅಮಾನವೀಯ ಕೃತ್ಯ ಬಹಿರಂಗ

ರಜೆ ಮುಗಿಸಿ ಜು.8ರಂದು ಕೆಸಲಕ್ಕೆ ವಾಪಸಾಗಿದ್ದರು. ಕೆಲಸ ಬಿಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಒಪ್ಪಿ ರಾಜೀನಾಮೆಯನ್ನೂ ಕೂಡ ನೀಡಿದ್ದರು. ಒಂದು ತಿಂಗಳ ನೊಟಿಸ್ ಪೀರಿಯಡ್‌ನಲ್ಲಿ ಕೆಲಸ ಮಾಡಬೇಕಿತ್ತು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಗರ್ಭಪಾತ ಮಾಡಿಸಿಕೊಂಡರೆ ಇಲ್ಲೇ ಕೆಲಸ ಮಾಡಬಹುದು ಎಂದು ಒತ್ತಡ ಹಾಕಿದ್ದರು. ಕೊನೆಗೆ ಒತ್ತಾಯಪೂರ್ವಕವಾಗಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

English summary
Hospital Done Abortion Forcefully of its Staff to Avoid leaves,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X