ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಮನೆ ಮುಂದಿನ ಕಾರಿಗೂ ಹೊತ್ತಿಕೊಂಡೀತು ಬೆಂಕಿ ಎಚ್ಚರ!

|
Google Oneindia Kannada News

ಬೆಂಗಳೂರು, ಜನವರಿ.30: ಸಿಲಿಕಾನ್ ಸಿಟಿ ಬರುತ್ತಾ ಬರುತ್ತಾ ಕ್ರೈಂ ಸಿಟಿ ಆಗುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಎಲ್ಲೆಂಲ್ಲಿಂದಲೋ ಬರುವ ಆಸಾಮಿಗಳು ಬೆಂಗಳೂರಿಗರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಅನ್ನೋದಕ್ಕೆ ಬುಧವಾರ ರಾತ್ರಿ ನಡೆದ ಘಟನೆಯೇ ಬೆಸ್ಟ್ ಎಕ್ಸಾಂಪಲ್.

ದಿನವಿಡೀ ಟ್ರಾಫಿಕ್ ಜಾಮ್ ನಲ್ಲಿ ಪರದಾಡಿಕೊಂಡು ಕಚೇರಿಗೆ ತೆರಳಿ ಮನೆಗೆ ಬಂದು ಮಲಗಿದ ಜನರ ನಿದ್ದೆ ರಾತ್ರೋರಾತ್ರಿ ಹಾರಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದಾ ಗಾಂಜಾ ಮತ್ತಿನಲ್ಲಿ ಅಪರಿಚಿತ ಮಾಡಿದ ಒಂದೇ ಒಂದು ಕೆಲಸ.

ಬೆಂಗಳೂರು ಜೈಲಲ್ಲೂ ಲವ್ ಸ್ಟೋರಿ, ಇದು TikTok ತೆರೆದಿಟ್ಟ ಸೀಕ್ರೆಟ್!ಬೆಂಗಳೂರು ಜೈಲಲ್ಲೂ ಲವ್ ಸ್ಟೋರಿ, ಇದು TikTok ತೆರೆದಿಟ್ಟ ಸೀಕ್ರೆಟ್!

ಹೌದು, ಬೆಂಗಳೂರು ರಾಜಾಜಿನಗರ ಬಳಿಯ ಮಂಜುನಾಥ್ ನಗರದಲ್ಲಿ ಸಾಲು ಸಾಲಾಗಿ ಒಬ್ಬನೇ ವ್ಯಕ್ತಿ ಮನೆ ಎದುರಿಗೇ ನಿಲ್ಲಿಸಿದ್ದ ಐದು ಕಾರುಗಳಿಗೆ ಬೆಂಕಿ ಹಚ್ಚಿಕೊಂಡು ಹೋಗಿದ್ದಾನೆ. ಮನೆ ಎದುರಿಗೆ ನಿಂತ ಕಾರು ನೋಡನೋಡುತ್ತಿದ್ದಂತೆ ರಾತ್ರೋರಾತ್ರಿ ಹೊತ್ತಿ ಉರಿದಿವೆ.

ಇದು ಎಣ್ಣೆ ಏಟು, ಗಾಂಜಾ ಮತ್ತಿನ ಯಡವಟ್ಟು!

ಇದು ಎಣ್ಣೆ ಏಟು, ಗಾಂಜಾ ಮತ್ತಿನ ಯಡವಟ್ಟು!

ಎಣ್ಣೆ ಏಟಿನ ಜೊತೆಗೆ ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದ ಕಿಡಿಗೇಡಿ ಮಂಜುನಾಥ್ ನಗರದ ಮನೆ ಎದುರಿಗೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿಕೊಂಡು ಹೋಗಿದ್ದಾನೆ. ಸಾಲು ಸಾಲಾಗಿ ಐದು ಮನೆಗಳ ಎದುರಿಗೆ ನಿಲ್ಲಿಸಿದ್ದ ಕಾರ್ ಗಳಿಗೆ ಬೆಂಕಿ ಹಚ್ಚುತ್ತಾ ಅಲ್ಲಿಂದ ಕಿಡಿಗೇಡಿ ಮೊದಲು ಕಾಲು ಕಿತ್ತಿದ್ದಾನೆ.

ಪೊಲೀಸರೇ ಏನಾಯ್ತು ಅನ್ನೋದಾ ಈ ಆಸಾಮಿ?

ಪೊಲೀಸರೇ ಏನಾಯ್ತು ಅನ್ನೋದಾ ಈ ಆಸಾಮಿ?

ಕಾರುಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿ ಅಷ್ಟಕ್ಕೆ ಸುಮ್ಮನೆ ಹೋಗಲಿಲ್ಲ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರ ಬಳಿ ತೆರಳಿ ಕಾರಿಗೆ ಬೆಂಕಿ ಹಚ್ಚಿದವನೇ ಹೋಗಿ, ಏನಾಯ್ತು ಸಾರ್ ಅಂತಾ ಪ್ರಶ್ನೆ ಮಾಡಿದ್ದಾನೆ.

ಭೂಪನ ಸುಳಿವು ಕೊಟ್ಟಿದ್ದ ಸಿಸಿ ಕ್ಯಾಮರಾ ದೃಶ್ಯ

ಭೂಪನ ಸುಳಿವು ಕೊಟ್ಟಿದ್ದ ಸಿಸಿ ಕ್ಯಾಮರಾ ದೃಶ್ಯ

ಇನ್ನು, ಪಾರ್ಚುನರ್, ಎರ್ಟಿಕಾ, ರೆಡ್ ಬಾಕ್ಸ್ ಸೇರಿದಂತೆ ಐದು ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ. ಹೊತ್ತಿ ಉರಿಯುತ್ತಿದ್ದ ಕಾರಿನ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ನಂತರ ಘಟನೆಗೆ ಕಾರಣವೇನು ಎಂಬುದನ್ನು ಸಿಸಿ ಕ್ಯಾಮರಾದಲ್ಲಿ ನೋಡಿದ್ದು, ಕಿಡಿಗೇಡಿಯೊಬ್ಬ ಐದು ಕಾರುಗಳಿಗೆ ಸಾಲು ಸಾಲಾಗಿ ಬೆಂಕಿ ಹಚ್ಚುತ್ತಾ ತೆರಳಿದ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ.

ಕಾರ್ ಸುಟ್ಟವನಿಗೆ ಬೆಂಡೆತ್ತಿ ಖಾಕಿ ಕೈಗೆ ಕೊಟ್ಟ ಸ್ಥಳೀಯರು

ಕಾರ್ ಸುಟ್ಟವನಿಗೆ ಬೆಂಡೆತ್ತಿ ಖಾಕಿ ಕೈಗೆ ಕೊಟ್ಟ ಸ್ಥಳೀಯರು

ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಯನ್ನು ಸಿಸಿ ಕ್ಯಾಮರಾದಲ್ಲಿ ಮೊದಲೇ ಸ್ಥಳೀಯರು ನೋಡಿದ್ದರು. ಇದರಿಂದ ಮತ್ತೆ ಸ್ಥಳದಲ್ಲಿ ಕಾಣಿಸಿಕೊಂಡ ಆಸಾಮಿಯನ್ನು ಸ್ಥಳೀಯರೇ ಹಿಡಿದು ಸರಿಯಾಗಿ ಥಳಿಸಿದ್ದಾರೆ. ನಂತರ ಆರೋಪಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

English summary
A Drunken Man Set Fire To 5 Cars In Bangalore. Basaveshwara Nagar Police Arrested The Accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X