ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಯುವತಿಗೆ ಯುವಕ ಮಾಡಿದ್ದೇನು ಗೊತ್ತಾ?

|
Google Oneindia Kannada News

ಬೆಂಗಳೂರು, ಮಾರ್ಚ್ 29 : ಸಾಂಪ್ರದಾಯಿಕ ಮದುವೆ ಪದ್ದತಿ ಇಂದು ತೆರೆಮರೆಗೆ ಸರಿದು, ಆಧುನಿಕ ಮದುವೆ ಪದ್ದತಿ ಜನಪ್ರಿಯವಾಗುತ್ತಿದೆ. ಮದುವೆ ಮಾಡಿಸಲು ಅನೇಕ ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ.

ಆದರೆ, ಇಂದಿನ ಡಿಜಿಟಲ್ ಯುಗದಲ್ಲಿ ಮದುವೆ ವೆಬ್‌ಸೈಟ್‌ ಹೆಸರಲ್ಲೂ ಮೋಸ ವಂಚನೆಗಳು ಕೂಡ ಸದ್ದು ಮಾಡುತ್ತಿವೆ. ಯುವತಿಯೊಬ್ಬಳಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾದ ಯುವಕನೊಬ್ಬ ಮೂರೇ ದಿನಕ್ಕೆ ಆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೈಕ್ ಇಲ್ಲ ಅಂತ ಲೇವಡಿ ಮಾಡಿದ ಪ್ರೇಯಸಿ: ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಿಯಕರ!ಬೈಕ್ ಇಲ್ಲ ಅಂತ ಲೇವಡಿ ಮಾಡಿದ ಪ್ರೇಯಸಿ: ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಿಯಕರ!

ಈ ಸಂಬಂಧ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ಲೋಹಿತ್ ಎನ್ನುವ ಯುವಕನ ವಿರುದ್ದ ದೂರು ದಾಖಲಿಸಿದ್ದಾರೆ ಮುಂದೆ ಓದಿ...

27 ವರ್ಷದ ಯುವತಿ

27 ವರ್ಷದ ಯುವತಿ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 27 ವರ್ಷದ ಯುವತಿ, ಮ್ಯಾಟ್ರಿಮೋನಿಯಲ್ ಡಾಟ್ ಕಾಮ್ ವೈವಾಹಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಫೋಟೊ ಸಮೇತ ವೈಯಕ್ತಿಕ ಮಾಹಿತಿ ನಮೂದಿಸಿದ್ದರು. ಅದನ್ನು ಮೆಚ್ಚಿದ್ದ ಆರೋಪಿ ಲೋಹಿತ್, ತನಗೆ ಇಷ್ಟವೆಂದು ಹೇಳಿ ಸಂದೇಶ ಕಳುಹಿಸಿದ್ದನಂತೆ.

ದುರುಪಯೋಗವಾಯಿತು ಪರಿಚಯ

ದುರುಪಯೋಗವಾಯಿತು ಪರಿಚಯ

ನಂತರ ಯುವತಿ, ಕೆಲ ದಿನ ಆತನೊಂದಿಗೆ ಮಾತನಾಡಿದ್ದರು. ಆದರೆ ಆರೋಪಿ, ತನ್ನ ಸ್ನೇಹಿತರ ಜೊತೆಯೂ ನೀನು ಮಾತನಾಡಬೇಕು ಎಂದು ಒತ್ತಾಯಿಸಿದ್ದನಂತೆ. ಅಲ್ಲದೇ ಕಾನ್ಫರೆನ್ಸ್ ಕರೆ ಮಾಡುವಂತೆಯೂ ಪೀಡಿಸಿದ್ದ. ಇದರಿಂದ ನೊಂದ ಯುವತಿ, ಆತನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದರು.

ಗನ್‌ನಿಂದ ಕೊಲೆ ಮಾಡುತ್ತೇನೆ

ಗನ್‌ನಿಂದ ಕೊಲೆ ಮಾಡುತ್ತೇನೆ

ಇಷ್ಟಕ್ಕೆ ಸುಮ್ಮನಾಗದ ಯುವಕ, ಮಾರ್ಚ್ 23ರಂದು ಯುವತಿಗೆ ಆಡಿಯೊ ಸಂದೇಶ ಕಳುಹಿಸಿ, 'ಗನ್ ತಂದು ನಿನ್ನನ್ನು ಕೊಲೆ ಮಾಡುತ್ತೇನೆ' ಎಂದು ಬೆದರಿಸಿದ್ದ. ಇದರಿಂದ ಭಯಗೊಂಡು ಯುವತಿ ದೂರು ದಾಖಲಿಸಿದ್ದಾರೆ.

ಹತ್ತು ಸಾರಿ ಯೋಚಿಸುವುದು ಒಳಿತು

ಹತ್ತು ಸಾರಿ ಯೋಚಿಸುವುದು ಒಳಿತು

ದೂರು ದಾಖಲಿಸಿಕೊಂಡಿರುವ ಮಾರತ್‌ಹಳ್ಳಿ ಪೊಲೀಸರು ಬೆದರಿಕೆ ಹಾಕಿದ್ದ ಯುವಕ ಲೋಹಿತ್ ಎನ್ನುವನ ಬಂಧನಕ್ಕೆ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟಿನಲ್ಲಿ ವ್ಯವಹರಿಸಬೇಕಾದರೆ ಹತ್ತು ಸಾರಿ ಯೋಚಿಸುವುದು ಒಳಿತು.

English summary
A Complaint Lodged In Marathhalli Police Station About Matrimonial Website Fraud. 27 year old young girl lodged complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X