ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ಜನರ ಬಲಿ ಪಡೆಯುತ್ತಿತ್ತು ಕುಸಿದು ನಿಂತ ಪಿಜಿ ಕಟ್ಟಡ!

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ಹೆಬ್ಬಾಳ ಹತ್ತಿರದ ಕೆಂಪಾಪುರ ವ್ಯಾಪ್ತಿಯ ರಾಮಯ್ಯ ಲೇಔಟ್‌ನಲ್ಲಿ ಕುಸಿದು ವಾಲಿಕೊಂಡ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡಕ್ಕೆ ಬಿಬಿಎಂಪಿ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದರು.

G+3 ಕಟ್ಟಡ ಇದಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯುವ ವೇಳೆ ಬುಧವಾರ ಬೆಳಿಗ್ಗೆ ಕಟ್ಟಡ ವಾಲಿಕೊಂಡಿದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು, ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳನ್ನು ಕಲ್ಯಾಣಮಂಟಪ ಹಾಗೂ ಶಾಲೆಯಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾರೆ. ಅಕ್ಕಪಕ್ಕದ ಮನೆಗಳಿಗೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಆಪರೇಷನ್ ಅಪಾರ್ಟ್‌ಮೆಂಟ್: ಏನಿದು ಪ್ರಕರಣ? ಸಂಪೂರ್ಣ ವಿವರಆಪರೇಷನ್ ಅಪಾರ್ಟ್‌ಮೆಂಟ್: ಏನಿದು ಪ್ರಕರಣ? ಸಂಪೂರ್ಣ ವಿವರ

ಯಾವ ಮನೆಗಳಿಗೂ ತೊಂದರೆಯಾಗದಂತೆ ವಾಲಿರುವ ಕಟ್ಟಡವನ್ನು ತೆರವುಗೊಳಿಸಲಾಗುವುದು. ಪಾಲಿಕೆಯ ಗಮನಕ್ಕೆ ಬಾರದೆ ಕಟ್ಟಡ ನಿರ್ಮಿಸಲು ಪಾಯ ತೆಗೆದಿರುರವ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

A Building Partially Collapsed In Bengaluru Officers Visit

ಪೇಯಿಂಗ್ ಗೆಸ್ಟ್ ಕಟ್ಟಡ ವಾಲಿಕೊಂಡಿದ್ದರಿಂದ 30ಕ್ಕೂ ಹೆಚ್ಚು ವಾಸಿಗಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡ ಸಂಪೂರ್ಣ ಕುಸಿದಿದ್ದರೇ ಹೆಚ್ಚು ಪ್ರಾಣಾಪಾಯವಾಗುವ ಸಂಭವವಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದರು. ಕಟ್ಟಡ ಯಾವುದೇ ಕ್ಷಣದಲ್ಲಾದರೂ ಉರುಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A Building Partially Collapsed In Bengaluru Officers Visit, Near Hebbal Ramayya Layout. BBMP Officers Visit And Vacate It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X