• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರೊಫೈಲ್

|

ಬೆಂಗಳೂರು, ಆ 2: ಈ ತಕ್ಷಣದಿಂದಲೇ ಜಾರಿಗೆ ಬರುವಂತೆ, ಬೆಂಗಳೂರು ಮಹಾನಗರದ ನೂತನ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನವರೇ ಆಗಿರುವ ಭಾಸ್ಕರ್ ರಾವ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು. ನಗರದ ಕಮಿಷನರ್ ಆಗಿದ್ದ, ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ. 35 ವರ್ಷಗಳ ನಂತರ ಬೆಂಗಳೂರಿನವರೇ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ. ಭಾಸ್ಕರ್ ರಾವ್ ಅವರ ಸ್ವವಿವರ (ಬಯೋಡೇಟಾ) ಇಂತಿದೆ:

ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

ಭಾಸ್ಕರ್ ರಾವ್ ರವರು 1990 ಬ್ಯಾಚ್‍ನ ಐ.ಪಿ.ಎಸ್. ಅಧಿಕಾರಿಯಾಗಿದ್ದು, ಕರ್ನಾಟಕ ರಾಜ್ಯ ಸೇವೆಗೆ ನಿಯೋಜಿತರಾಗಿದ್ದವರು. ಇವರು, ಈ ಹಿಂದೆ, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಉಪಆಯುಕ್ತ ಹುದ್ದೆಗಳನ್ನು ಮಂಡ್ಯ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ನಗರ, ಕೊಡಗು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿದ್ದಾಗ ಸೆಪ್ಟೆಂಬರ್ 2011ರ ಯು.ಎಸ್.ಎ. ದಾಳಿಯ ನಂತರದಲ್ಲಿ ಹಲವಾರು ಪಾಶ್ಚಿಮಾತ್ಯ ಕಂಪನಿಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದು, ಇವರ ಸೇವಾವಧಿಯಲ್ಲಿ ಹಲವಾರು ನವೀನ ಯೋಜನೆಗಳನ್ನು ಪ್ರಾರಂಭಿಸಲಾಗಿತ್ತು.

ಭಾಸ್ಕರ್ ರಾವ್, ಕೆ.ಎಸ್.ಆರ್.ಟಿ.ಸಿ.ಯಲ್ಲಿ ಕಾರ್ಯಾಚರಣೆ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದು, ಇವರ ಈ ಸೇವಾವಧಿಯಲ್ಲಿ ನಿಗಮಕ್ಕೆ ವೋಲ್ವೊ ಬಸ್, ಎಲೆಕ್ಟ್ರಾನಿಕ್ ಟಿಕೆಟ್ ನೀಡುವ ಯಂತ್ರ, ಬಸ್‍ಗಳಿಗೆ ನೈಸರ್ಗಿಕ ಇಂಧನ, ಡಿಪೋಗಳ ಗಣಕೀಕರಣ ಮತ್ತು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಟಿಕೆಟ್ ಬುಕಿಂಗ್ ವ್ಯವಸ್ಥೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದ ಹಿರಿಮೆ ಇವರಿಗೆ ಸಲ್ಲುತ್ತದೆ.

ಐಪಿಎಸ್ ಅಧಿಕಾರಿಗಳ ಮೇಲೆ ಮತ್ತೆ ಸರ್ಕಾರದ ಕಣ್ಣು: 6 ಮಂದಿ ವರ್ಗಾವಣೆ

ಇವರು, ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ರಾಜಸ್ವ ಸಂಗ್ರಹಣೆ ದ್ವಿಗುಣಗೊಂಡಿತ್ತು. ಜೊತೆಗೆ, ವಾಹನ ನೋಂದಣಿ ಮತ್ತು ಪರವಾನಗಿ ಪಡೆಯುವ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಿ ಆನ್‍ಲೈನ್

ಮೂಲಕ ಪಡೆಯುವ ಕೆಲಸವೂ ಈ ಅವಧಿಯಲ್ಲಿ ನಡೆದಿತ್ತು. ಪರವಾನಗಿ ಪುಸ್ತಕ ಮತ್ತು ಆರ್.ಸಿ. ಪುಸ್ತಕಕ್ಕೆ ಬದಲಾಗಿ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸುವ ಯೋಜನೆ ಇವರು ಜಾರಿಗೆ ತಂದಿದ್ದರು.

ಭಾಸ್ಕರ್ ರಾವ್, ಆಂತರಿಕ ಭದ್ರತೆಯ Inspector ಜನರಲ್ ಆಗಿ ಸೇವೆ ಸಲ್ಲಿಸಿರುವಾಗ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ರಾಜ್ಯಾದ್ಯಂತ ಸುಮಾರು 4.60 ಲಕ್ಷ ಸೆಕ್ಯೂರಿಟಿ ಗಾರ್ಡ್ ಮತ್ತು 1,500ಕ್ಕೂ ಹೆಚ್ಚು ಖಾಸಗಿ ಭದ್ರತಾ ಏಜೆನ್ಸಿಗಳನ್ನು ಬಲಪಡಿಸಲು ಇವರು ಬುನಾದಿ ಹಾಕಿದವರಾಗಿದ್ದಾರೆ.

ಭಾಸ್ಕರ್ ರಾವ್ ಮುಂದಾಳತ್ವದಲ್ಲಿ ಭಾರತೀಯ ನೌಕಾಪಡೆ ಮತ್ತು ಗೋವಾ ಶಿಪ್‍ಯಾರ್ಡ್‍ಗಳ ಸಹಯೋಗದೊಡನೆ ಕರಾವಳಿ ಕಾವಲು ಪೊಲೀಸ್ ಪಡೆಯನ್ನು ಬಲಪಡಿಸಿದ್ದರು. ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಉಗ್ರಗಾಮಿ ನಿಗ್ರಹ ದಳ, ಕೇಂದ್ರ ರೈಲ್ವೇಸ್ ತರಬೇತಿ ಮತ್ತು ಅರಣ್ಯ ಇಲಾಖೆಗಳಲ್ಲಿಯೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಉತ್ತರ ಪ್ರಾಂತ್ಯ ಮತ್ತು ಬೆಳಗಾವಿ ನಗರದ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸದ್ಯ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‍ನಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಭಾಸ್ಕರ್ ರಾವ್ ಸೇವೆ ಸಲ್ಲಿಸುತ್ತಿದ್ದು, 12 ಪಡೆಗಳು ಮತ್ತು 2 ಭಾರತೀಯ ಮೀಸಲು ಪೊಲೀಸ್ ಪಡೆಗಳು ಮತ್ತು 2 ಪೊಲೀಸ್ ತರಬೇತಿ ಶಾಲೆಗಳೂ ಸೇರಿದಂತೆ ಒಟ್ಟು 16 ಪಡೆಗಳ ಮೇಲುಸ್ತುವಾರಿಯನ್ನು ವಹಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ಯಡಿಯೂರಪ್ಪ

2008ರ ರಾಷ್ಟ್ರಪತಿಗಳ ಪೊಲೀಸ್ ಪದಕ, 2015ರಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ, 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಯುದ್ಧಭೂಮಿಯಲ್ಲಿ ಶಾಂತಿ ಕಾಪಾಡಲು ಸೇವೆ ಸಲ್ಲಿಸಿರುವುದಕ್ಕೆ ಸಂಯುಕ್ತ ರಾಷ್ಟ್ರದ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ವೃತ್ತಿಯಲ್ಲಿ ಮಾತ್ರವಲ್ಲದೆ ಇವರು ಸಮಾಜಮುಖಿ ಕಾರ್ಯಗಳಾದ ಕೆರೆ ಸ್ವಚ್ಛತೆ, ಮಹಿಳಾ ಸಬಲೀಕರಣ, ಸಾವಯವ ಕೃಷಿಯಲ್ಲಿಯೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದು, ಮಹಿಳಾ ಸಿಬ್ಬಂದಿಗಾಗಿಯೇ ವಿಶೇಷ ಶೌಚಾಲಯವುಳ್ಳ ವಾಹನ ವ್ಯವಸ್ಥೆ ಕಲ್ಪಿಸಿರುವುದು ಇವರ ಪ್ರಮುಖ ಮೈಲುಗಲ್ಲಾಗಳಾಗಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Brief Profile Of Bhaskar Rao, New Bengaluru Police Commissioner. Mr. Rao, is an Indian Police Service officer of 1990 Batch and allotted to Karnataka Cadre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more