ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟರ್ ಐಡಿ ಮರೆತು ಬಿ ಫಾರ್ಮ್ ಪಡೆಯಲು ಬಂದ ಬಿಜೆಪಿ ಅಭ್ಯರ್ಥಿ

|
Google Oneindia Kannada News

ಬೆಂಗಳೂರು, ನವೆಂಬರ್ 15: ಬಿಜೆಪಿ ಅಭ್ಯರ್ಥಿಯೊಬ್ಬರು ಬಿ ಫಾರ್ಮ್ ಪಡೆಯಲು ಮತದಾರರ ಗುರುತಿನ ಚೀಟಿಯನ್ನೇ ಮರೆತು ಬಂದಿದ್ದರು.

ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಬಿ ಫಾರ್ಮ್ ಪಡೆಯಲು ಬಂದಿದ್ದು ಬಿಜೆಪಿ ಕಚೇರಿಯಲ್ಲೇ ಕಾದುಕುಳಿತಿದ್ದರು. ಅರುಣ್‌ ಅವರನ್ನು ರಾಣೆಬೆನ್ನೂರಿನ ಬಿಜೆಪಿ ಅಭ್ಯರ್ಥಿಯನ್ನಾಗಿ ಇಂದು ಬೆಳಗ್ಗೆಯಷ್ಟೇ ಘೋಷಿಸಲಾಗಿದೆ.

ರಾಣೇಬೆನ್ನೂರು ಬಿಜೆಪಿ ಟಿಕೆಟ್ ಗೆ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರುರಾಣೇಬೆನ್ನೂರು ಬಿಜೆಪಿ ಟಿಕೆಟ್ ಗೆ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರು

ವೋಟರ್ ಐಡಿ ಇಲ್ಲದ ಕಾರಣ ಬಿ ಫಾರ್ಮ್ ವಿತರಿಸಲು ವಿಳಂಬವಾಯಿತು, ಇದೀಗ ಬಿಫಾರ್ಮ್ ಪಡೆದು ಬಿಜೆಪಿ ಕಚೇರಿಯಿಂದ ತೆರಳಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದ ಹಿರಿಯ ಮುಖಂಡರ ಆಶೀರ್ವಾದದಿಂದ ನನಗೆ ಬಿ ಫಾರ್ಮ್ ಸಿಕ್ಕಿದೆ.

A BJP Candidate Who Came To Get B Form Without Voter ID

ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ, ಎಲ್ಲರ ಆಶೀರ್ವಾದದಿಂದ ನಾನು ಗೆದ್ದು ಬರುತ್ತೇನೆ. ಎಲ್ಲರ ಸಹಕಾರದಿಂದ ನಾನು ಜನರ ಸೇವೆ ಮಾಡುತ್ತೇನೆ.

ಮುಖಂಡರು ನಮ್ಮ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳುತ್ತೇನೆ. ಕ್ಷೇತ್ರದ ಎಲ್ಲಾ ಗೊಂದಲಗಳನ್ನು ಮುಖಂಡರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ರಾಣೇಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪರ್ಧಿಸುತ್ತಿದ್ದಾರೆ.

English summary
A BJP candidate had forgotten the voter ID card to get a B form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X