ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣ್ಣು ಮಕ್ಕಳಿಲ್ಲವೆಂದು ಹೆಣ್ಣು ಆನೆ ದತ್ತು ಪಡೆದ ದಂಪತಿ

|
Google Oneindia Kannada News

ಬೆಂಗಳೂರು, ಮಾರ್ಚ್ 9: ಹೆಣ್ಣು ಮಕ್ಕಳು ಇಲ್ಲವೆಂದು ಹೆಣ್ಣು ಆನೆಯನ್ನು ದಂಪತಿ ದತ್ತು ಪಡೆದಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳಾ ದಿನಾಚರಣೆಯ ವಿಶೇಷವಾಗಿ ಹೆಣ್ಣು ದಂಪತಿ ಆನೆಯನ್ನು ದತ್ತು ತೆಗೆದುಕೊಂಡಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಗಿಹಳ್ಳಿ ರೇಂಜ್‌ನಲ್ಲಿ ಆನೆಯೊಂದು ಕೆಲ ದಿನಗಳ ಹಿಂದೆ ಒಂಟಿಯಾಗಿ ಕಾಣಿಸಿಕೊಂಡಿತ್ತು. ಸರಸ್ವತಿ ಎಂಬ ಈ ಆನೆ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ದೂರವಾಗಿತ್ತು. ಈ ಆನೆಯನ್ನು ದಿನೇಶ್ ದಂಪತಿ ದತ್ತು ಸ್ವೀಕರಿಸಿದ್ದಾರೆ.

ವಿಡಿಯೋ: ಆನೆಯನ್ನು ಅಟ್ಟಾಡಿಸಿದ ಮರಿ ಎಮ್ಮೆವಿಡಿಯೋ: ಆನೆಯನ್ನು ಅಟ್ಟಾಡಿಸಿದ ಮರಿ ಎಮ್ಮೆ

ಒಂದು ವರ್ಷಕ್ಕೆ 1 ಲಕ್ಷ 75 ಸಾವಿರ ಹಣವನ್ನು ದಿನೇಶ್ ನೀಡಿದ್ದಾರೆ. ಅವರ ಜೀವಿತಾವಧಿ ಇರುವರೆಗೆ ಆನೆಯನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಆನೆ ಜೊತೆಗೆ ಕೆಲ ಕಾಲ ಕಳೆದು ಅದಕ್ಕೆ ಹಾಲು ಕುಡಿಸಿದ್ದಾರೆ. ಪ್ರೀತಿಯ ಆನೆಗೆ ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.

A Bengaluru Couple Adopted An Female Elephant

ದಿನೇಶ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಹೆಣ್ಣು ಮಕ್ಕಳು ಬೇಕು ಎನ್ನುವ ಆಸೆ ಅವರಿಗೆ ಇತ್ತು. ಹೀಗಾಗಿ, ಹೆಣ್ಣು ಆನೆಯನ್ನು ದತ್ತು ಪಡೆದು, ತಮ್ಮ ಮಕ್ಕಳಂತೆ ಕಂಡಿದ್ದಾರೆ.

ಬೆಳ್ಳಂಬೆಳಿಗ್ಗೆ ಸಾಸಲಪುರ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿಸಲಗಬೆಳ್ಳಂಬೆಳಿಗ್ಗೆ ಸಾಸಲಪುರ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿಸಲಗ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಆಹಾರವಿಲ್ಲದೆ ಒಂಟಿಯಾಗಿ ಅಲೆದಾಟ ನಡೆಸಿದ್ದ ಆನೆಯನ್ನು ಆರೈಕೆ ಮಾಡಿದ್ದರು. ತಾಯಿ ಕಳೆದುಕೊಂಡ ಆನೆ ಮರಿಯನ್ನು ಮತ್ತೆ ತಾಯಿಯ ಬಳಿ ಸೇರಿಸಲು ಆಪರೇಷನ್ ನಡೆದಿತ್ತು. ಇದರಲ್ಲಿ ದಿನೇಶ್ ಕೂಡ ಭಾಗಿಯಾಗಿದ್ದರು. ಈ ವೇಳೆ ಆನೆ ಮರಿ ಸ್ಥಿತಿ ಕಂಡು ಆ ಆನೆಯನ್ನು ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ.

English summary
A bengaluru couple adopted an female elephant in Bannerghatta national park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X