ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿಬೆಟ್ಟ: ಭೋಗ ನಂದೀಶ್ವರ ದೇವಸ್ಥಾನಕ್ಕೆ ಶೀಘ್ರ ಹೊಸ ಲುಕ್‌

By Nayana
|
Google Oneindia Kannada News

ಬೆಂಗಳೂರು, ಜು.5: ನಂದಿಬೆಟ್ಟದ ತಪ್ಪಲಿನಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ ಶೀಘ್ರದಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಪಡೆಯಲಿದ್ದು, ಇನ್ನಷ್ಟು ಪ್ರವಾಸಿಗರ ಗಮನ ಸೆಳೆಯಲಿದೆ.

ಬೆಂಗಳೂರಿನಿಂದ 60 ಕಿ.ಮೀ ದೂರದಲ ಚಿಕ್ಕಬಳ್ಳಾಪುರದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು, ನಂದಿಬೆಟ್ಟಕ್ಕೆ ಬಂದ ಪ್ರತಿಯೊಬ್ಬರು ನಂದಿ ದೇವಸ್ಥಾನಕ್ಕೆ ಬಾರದೆ ಹೋಗುತ್ತಿರಲಿಲ್ಲ. ಇದೀಗ ಮತ್ತಷ್ಟು ಜನರನ್ನು ಸೆಳೆಯಲು ಸಿದ್ಧವಾಗುತ್ತಿದೆ.

ಅಭದ್ರತೆಯಲ್ಲಿ ನಂದಿ ಬೆಟ್ಟ: ಆತಂಕದಲ್ಲಿ ಪ್ರವಾಸಿಗರುಅಭದ್ರತೆಯಲ್ಲಿ ನಂದಿ ಬೆಟ್ಟ: ಆತಂಕದಲ್ಲಿ ಪ್ರವಾಸಿಗರು

9ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ದೇವಸ್ಥಾನ ಇದಾಗಿದೆ. ಶೀಘ್ರ ಕಿಯೋಸ್ಕ್‌ ಒಂದನ್ನು ಅಳವಡಿಸಲಾಗುತ್ತಿದ್ದು, ದೇವಸ್ಥಾನದ ವಾಸ್ತುಶಿಲ್ಪ ಹಾಗೂ ಪ್ರವಾಸಿಗರ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಆರ್ಕಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾವು ದ್ರಾವಿಡ ಡೈನೆಸ್ಟಿಯಿಂದ ನಿರ್ಮಾಣವಾದಂತಹ ದೇವಸ್ಥಾನವನ್ನು ಉಳಿಸಿಕೊಂಡು ಬಂದಿದೆ.

9th century temple near Nandi Hills to get world-class amenities soon

ಪ್ರತಿ ವಾರವೂ ಕೂಡ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಹೊಸ ದಾಗಿ ಬರುವ ಪ್ರವಾಸಿಗರಿಗೆ ಭೋಗ ನಂದೀಶ್ವರ ದೇವಸ್ಥಾನ ಇರುವ ಕುರಿತು ಮಾಹಿತಿ ಇಲ್ಲ. ಜತೆಗೆ ಮೂಲಭೂತ ಸೌಕರ್ಯಗಳು ಕೂಡ ಇಲ್ಲ. ಪಾರ್ಕಿಂಗ್‌ ಸ್ಥಳವಿರುವ ಪ್ರವಾಸಿಗರ ಪ್ಲಾಝಾವನ್ನು ನಿರ್ಮಿಸಲಾಗುತ್ತದೆ. ಕೆಲವು ಅಂಗಡಿಗಳು, ಕೆಫೆಟೇರಿಯಾವನ್ನು ನಿರ್ಮಿಸಲಾಗುತ್ತದೆ. ಹಾಗೆಯೇ ನಂದಿ ಬೆಟ್ಟವನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

English summary
Bhogha Nandeeshwara temple, one of the oldest temples of Karnataka dating back to the early 9th century, will soon welcome visitors with world class amenities. The temple located at the base of Nandi Hills, about 60km from Bengaluru city, will soon have a state-of-the-art interpretation centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X