ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

9ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು(ಫೆ.2) ಚಾಲನೆ

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 2: 9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಗುರುವಾರ ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ವಿಧಾನ ಸೌಧ ಮುಂಬಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಈಜಿಫ್ಟಿನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ಬಂಗಾಲಿ ಹೆಸರಾಂತ ನಿರ್ದೇಶಕ ಬುದ್ಧದೇವದಾಸ್ ಗುಪ್ತ, ನಟ ಪುನೀತ್ ರಾಜ್ ಕುಮಾರ್ ಭಾಗವಹಿಸಲಿದ್ದು ನಟ ರಮೇಸ್ ಅರವಿಂದ್ ಮತ್ತು ನಟಿ ಸುಹಾಸಿನಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಅಲ್ಲದೆ ಹೆಸರಾಂತ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.[ಬೆಂಗಳೂರು ಚಿತ್ರೋತ್ಸವದಲ್ಲಿ ದರ್ಶನ್, ಸುದೀಪ್, ಪುನೀತ್ ಚಿತ್ರಗಳು!]

9th BIFFES: Feb 2 evening CM Siddaramaiah will inaugurate the program

ಇನ್ನು ನಾಳೆ(ಫೆ.3) ಯಿಂದ ಫೆ.9ರ ವರೆಗೆ ನಡೆಯಲಿರುವ ಚಿತ್ರೋತ್ಸವ ಬೆಂಗಳೂರು ಮತ್ತು ಮೈಸೂರಿನಲ್ಲಿಯೂ ನಡೆಯಲಿದೆ. ಬೆಂಗಳೂರಿನ ಒರಾಯನ್ ಮಾಲಿನ ಫಿವಿಆರ್ ಸಿನಿಮಾಸ್ ನ 11 ಬೆಳ್ಳಿತೆರೆಯ ಮೇಲೆ ಹಾಗು ಮೈಸೂರಿನ ಮಾಲ್ ಆಫ್ ಮೈಸೂರು ಐನಾಕ್ಸ್ ಸಿನೆಮಾಸ್ ನ 4 ಬೆಳ್ಳಿ ಪರದೆಯ ಮೇಲೆ ವಿಶ್ವದ ಅತ್ಯುತ್ತಮ 60 ದೇಶಗಳ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ.

ಉದ್ಘಾಟಿತ ಚಿತ್ರವಾಗಿ ಅಲ್ಗೇರಿಯಾದ ಮಹ್ಮದ್ ಹಮಿದಿ ನಿರ್ದೇಸನದ ಲಾವ ವಚೆ ಚಿತ್ರ ಪ್ರದರ್ಶನವಾಗಲಿದೆ. ಇನ್ನು ಅನೇಕ ದೇಶದ ಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿದ್ದು, ಭಾರತದ ಬುದ್ಧದೇವ್ ದಾಸ್ ಗುಪ್ತ ಅವರ ಕುರಿತ ಸಾಕ್ಷಚಿತ್ರಗಲು ಪ್ರೇಕ್ಷಕರನ್ನು ಮನಸೂರೆಗೊಳಿಸಲಿವೆ.

English summary
9th Bengaluru International Film Festival (BIFFES) To be held on from February 2. Today evening Chief Minister Siddaramaiah will inagurate the festival in front Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X