ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ರೈಲು; ಬೆಂಗಳೂರಿಂದ ಹೊರಟ 950 ಯೋಧರು

|
Google Oneindia Kannada News

ಬೆಂಗಳೂರು, ಏಪ್ರಿಲ್ 17 : ಲಾಕ್ ಡೌನ್ ಪರಿಣಾಮ ಭಾರತೀಯ ರೈಲ್ವೆ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರನ್ನು ಮೇ 3ರ ತನಕ ರದ್ದು ಮಾಡಿದೆ. ಬೆಂಗಳೂರಿನಿಂದ ವಿಶೇಷ ರೈಲೊಂದು ಇಂದು ಸಂಚಾರ ಆರಂಭಿಸಿದೆ. 950 ಯೋಧರು ಈ ರೈಲಿನಲ್ಲಿ ಸಂಚಾರವನ್ನು ನಡೆಸಿದರು.

Recommended Video

ಇದು ನಿಜವಾಗಿಯೂ ನಮ್ಮ‌ ಬೆಂಗಳೂರೇನಾ?ನೀವೇ ನೋಡಿ ಹೇಳಿ | Bengaluru | oneindia kannada

ಹೌದು ಯೋಧರಿಗಾಗಿಯೇ ಭಾರತೀಯ ರೈಲ್ವೆ ಎರಡು ವಿಶೇಷ ರೈಲನ್ನು ಬೆಂಗಳೂರು ನಗರದಿಂದ ಓಡಿಸುತ್ತಿದೆ. ಶುಕ್ರವಾರ ಜಮ್ಮುವಿಗೆ ರೈಲು ಸಂಚಾರ ಆರಂಭಿಸಿದೆ. ಬೆಂಗಳೂರು, ಬೆಳಗಾವಿ, ಸಿಕಂದರಾಬಾದ್‌ನಿಂದ ಆಗಮಿಸಿದ್ದ 950 ಯೋಧರು ರೈಲಿನಲ್ಲಿ ತೆರಳಿದರು.

ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ

ರಜೆ, ವಿವಿಧ ತರಬೇತಿಗಾಗಿ ಬಂದಿದ್ದ ಯೋಧರು ಗಡಿಗೆ ವಾಪಸ್ ಆಗಬೇಕಿತ್ತು. ಲಾಕ್ ಡೌನ್ ಪರಿಣಾಮ ರೈಲು ಸಂಚಾರ ರದ್ದುಗೊಂಡಿತ್ತು. ರಕ್ಷಣಾ ಇಲಾಖೆಯ ಮನವಿಯಂತೆ ಭಾರತೀಯ ರೈಲ್ವೆ ವಿಶೇಷ ರೈಲನ್ನು ಬೆಂಗಳೂರಿನಿಂದ ಓಡಿಸುತ್ತಿದೆ.

ಕೊವಿಡ್ ಸಮರಕ್ಕೆ ರೈಲ್ವೆ ಸಾಥ್, 4800 ಪಿಪಿಇ ಕಿಟ್ ತಯಾರಿಸಲು ಸಜ್ಜುಕೊವಿಡ್ ಸಮರಕ್ಕೆ ರೈಲ್ವೆ ಸಾಥ್, 4800 ಪಿಪಿಇ ಕಿಟ್ ತಯಾರಿಸಲು ಸಜ್ಜು

ಯೋಧರು ಸಂಚಾರ ನಡೆಸುವ ರೈಲನ್ನು ಮೊದಲು ಸ್ಯಾನಿಟೈಸ್ ಮಾಡಲಾಯಿತು. ಬಳಿಕ ಸೋಂಕು ನಿವಾರಕ ಸುರಂಗದ ಮೂಲಕ ಯೋಧರು ರೈಲ್ವೆ ನಿಲ್ದಾಣವನ್ನು ಪ್ರವೇಶಿಸಿದರು. ಈ ಯೋಧರು ಏಪ್ರಿಲ್ 20ರಂದು ಜಮ್ಮುವನ್ನು ತಲುಪಲಿದ್ದಾರೆ.

ಮುಂಬೈನಲ್ಲಿ ಹೈಡ್ರಾಮ; ರೈಲು ನಿಲ್ದಾಣದಲ್ಲಿ ಸೇರಿದ ನೂರಾರು ಜನ ಮುಂಬೈನಲ್ಲಿ ಹೈಡ್ರಾಮ; ರೈಲು ನಿಲ್ದಾಣದಲ್ಲಿ ಸೇರಿದ ನೂರಾರು ಜನ

ರೈಲು ಸಂಪೂರ್ಣ ಸ್ಯಾನಿಟೈಸ್

ರೈಲು ಸಂಪೂರ್ಣ ಸ್ಯಾನಿಟೈಸ್

ಬೆಂಗಳೂರು ರೈಲು ನಿಲ್ದಾಣದಲ್ಲಿ ಯೋಧರು ಹೊರಡುವ ರೈಲನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಏಪ್ರಿಲ್ 17ರಂದು ಯೋಧರು ತಮ್ಮ ಪ್ರಯಾಣ ಆರಂಭಿಸಿದ್ದು, ಮೂರು ದಿನಗಳ ಬಳಿಕ ಅವರು ಜಮ್ಮುವನ್ನು ತಲುಪಲಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.

ಸೋಂಕು ನಿವಾರಕ ಸುರಂಗ

ಸೋಂಕು ನಿವಾರಕ ಸುರಂಗ

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಯೋಧರಿಗಾಗಿಯೇ ಸೋಂಕು ನಿವಾರಕ ಸುರಂಗ ನಿರ್ಮಾಣ ಮಾಡಲಾಗಿತ್ತು. ಎಲ್ಲಾ ಯೋಧರು ಎಂದಿನ ಶಿಸ್ತಿನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸುರಂಗದ ಮೂಲಕ ನಿಲ್ದಾಣವನ್ನು ಪ್ರವೇಶ ಮಾಡಿದರು.

ಕರ್ತವ್ಯಕ್ಕೆ ಮರಳಿದ ಯೋಧರು

ಕರ್ತವ್ಯಕ್ಕೆ ಮರಳಿದ ಯೋಧರು

ದೇಶದ ವಿವಿಧ ಗಡಿಯಲ್ಲಿ ಕರ್ತವ್ಯ ನಿರತವಾಗಿದ್ದ ಯೋಧರು ತರಬೇತಿಗಾಗಿ ಬೆಂಗಳೂರು, ಬೆಳಗಾವಿ, ಸಿಕಂದರಾಬಾದ್‌ ತರಬೇತಿ ಶಿಬಿರಕ್ಕೆ ಆಗಮಿಸಿದ್ದು. ಈಗ ಎಲ್ಲರೂ ಸೇವೆಗೆ ವಾಪಸ್ ಆಗಬೇಕು ಶುಕ್ರವಾರ ಒಟ್ಟು 950 ಯೋಧರು ವಿಶೇಷ ರೈಲಿನಲ್ಲಿ ತೆರಳಿದರು.

ಶನಿವಾರ ಮತ್ತೊಂದು ರೈಲು

ಶನಿವಾರ ಮತ್ತೊಂದು ರೈಲು

ಬೆಂಗಳೂರಿನಿಂದ ಹೊರಟ ಮೊದಲ ರೈಲಿನಲ್ಲಿ 950 ಯೋಧರು ಜಮ್ಮುವಿಗೆ ತೆರಳಿದರು. ಶನಿವಾರ ಬೆಂಗಳೂರಿನಿಂದ ಮತ್ತೊಂದು ರೈಲು ಹೊರಡಲಿದ್ದು ಅಸ್ಸಾಂ ಗಡಿ ಭಾಗಕ್ಕೆ ಯೋಧರು ತೆರಳಲಿದ್ದಾರೆ.

English summary
A special train with around 950 army personnel left Bengaluru on April 17, 2020. The personnel are to rejoin their units in North India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X