ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

92.7 ಬಿಗ್ ಎಫ್ ಎಂ ನಿಂದ ವಿಶಿಷ್ಟ ಸಂಗೀತ ಹಬ್ಬ ಆಚರಣೆ

By Mahesh
|
Google Oneindia Kannada News

ಬೆಂಗಳೂರು, ಜನವರಿ 30: ಭಾರತದಲ್ಲಿ ಮುಂಚೂಣಿಯಲ್ಲಿರುವ 92.7 ಬಿಗ್ ಎಫ್.ಎಂ ಭಾರತದ 69ನೇ ಗಣರಾಜ್ಯೋತ್ಸವದಂದು ಸಂಗೀತ ಆಚರಣೆಯೊಂದಿಗೆ ಹೆಚ್ಚಿನ ಸಂಗೀತವನ್ನು ಒದಗಿಸುವ ಭರವಸೆಯನ್ನು ನೀಡಿತ್ತು.

ಬೆಂಗಳೂರಿನಲ್ಲಿ ಏಕೈಕ ದ್ವಿಭಾಷಾ ರೇಡಿಯೋ ಸ್ಟೇಷನ್ ಆಗಿರುವ 92.7 ಬಿಗ್ ಎಫ್ ಎಂ, ಜನವರಿ 26 ರಂದು ವಿವಿಧ ಸಂಗೀತ ಕಾರ್ಯಕ್ರಮಗಳೊಂದಿಗೆ 'ಮ್ಯೂಸಿಕ್ ಯೂನಿಟ್ಸ್' ಸಂದೇಶವನ್ನು ಉತ್ತೇಜಿಸಿತು. 'ಸ್ಟುಡಿಯೋ-ಆನ್-ವೀಲ್ಸ್' ಎಂಬ ಪರಿಕಲ್ಪನೆಯೊಂದಿಗೆ 5ಲಕ್ಷಕ್ಕೂ ಹೆಚ್ಚು ಬೆಂಗಳೂರಿಗರಿಗೆ ಈ ಪರಿಕಲ್ಪನೆಯ ಕುರಿತು ಸಾರಲು ಎಂಜೆಗಳು ಲಾಲ್ ಬಾಗ್ ನಲ್ಲಿ ಸೇರಿದರು. ಜನಪ್ರಿಯ ಸಂಗೀತ ತಂಡವಾದ ನಿನಾದ್ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಿಂದ ಸಾಕಷ್ಟು ಸಂಖ್ಯೆಯ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

92.7 Big FM celebrates musical Republic Day Music Unites

92.7 ಬಿಗ್ ಎಫ್ ಎಂ ತನ್ನ ಹೊಸ ಹೊಸ ಪರಿಕಲ್ಪನೆಗಳ ಮೂಲಕ ಕೇಳುಗರಿಗೆ ಮನರಂಜನೆ ನೀಡಲು ಹೆಸರುವಾಸಿಯಾಗಿದೆ. ಈ ಗಣರಾಜ್ಯೋತ್ಸವ ದಿನದಂದು ರೇಡಿಯೋ ಸ್ಟೇಷನ್ ವಿವಿಧ ಭಾಷೆಗಳ ಜನರನ್ನು ಸಂಗೀತ ಶಕ್ತಿಯ ಮೂಲಕ ವೇದಿಕೆಯ ಮೇಲೆ ಒಟ್ಟು ಸೇರಿಸಿತು. ಸಂಗೀತ ತಂಡವು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನ ಎರಡೂ ಮನರಂಜನಾ ಕ್ಷೇತ್ರದ ಉತ್ಸಾಹಿಗಳನ್ನುಸಂಗೀತದ ಮೂಲಕ ಪ್ರೋತ್ಸಾಹಿಸಿತು.

ಇನ್ನು ಗಣರಾಜೋತ್ಸವದ ಕುರಿತು ಮಾತನಾಡಿದ 92.7 ಬಿಗ್ ಎಫ್ ಎಂ ನ ಎಂ.ಜೆ ಶೃತಿ 'ಕೇಳುಗರಿಗೆ ಅರ್ಥಪೂರ್ಣವಾದ ಮನರಂಜನೆಯನ್ನು ಒದಗಿಸುವ ಬಗ್ಗೆ ನಾವು ಪ್ರತಿ ವರ್ಷ ಪ್ರಯತ್ನಿಸುತ್ತೇವೆ. ಅದರಲ್ಲೂ ಇಂತಹ ಪ್ರಮುಖ ಸಂದರ್ಭದಲ್ಲಿ. 'ಮ್ಯೂಸಿಕ್ ಯೂನೈಟ್ಸ್' ಬೆಂಗಳೂರಿಗರ ವೈವಿಧ್ಯತೆಯ ಏಕತೆಯನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿತ್ತು.

92.7 Big FM celebrates musical Republic Day Music Unites

ನಿನಾದ್ ತಂಡವು ಈ ದಿನದಂದು ನಮ್ಮೊಂದಿಗೆ ಸೇರಿಕೊಂಡು ಎಲ್ಲರಿಗೂ ಸಂಗೀತದ ರಸದೌತಣವನ್ನು ಉಣಬಡಿಸಿತು. ಇದರ ಜತೆ ನಮ್ಮ ಬಿಗ್ ಗಣ್ಯರಿಗೆ ತುಳಸಿ ಗಿಡಗಳನ್ನು ನೀಡುವುದು ಈ ಸಂಭ್ರಮದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು. ಸ್ವಚ್ಛ ಹಾಗೂ ಹಸಿರುಮಯವಾದ ಪರಿಸರವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ತೆಗದುಕೊಳ್ಳುವ ಅವರ ಉತ್ಸಾಹದ ಕುರಿತು ನಮಗೆ ತಿಳಿದಿದೆ.

ಒಂದು ಒಳ್ಳೆಯ ಕಾರಣದೊಂದಿಗೆ ಮನರಂಜನೆಯನ್ನು ನೀಡುತ್ತಿರುವ ಈ ರೇಡಿಯೋ ಸ್ಟೇಷನ್ ಆಗಾಧವಾದ ಪ್ರೇಕ್ಷಕರನ್ನು ತಲುಪಿದೆ. ಈ ಬಾರಿ 'ರೈಟ್ ಟು ಕ್ಲೀನ್ ಏರ್' ಎಂಬ ಕಾರಣವನ್ನು ತೆಗೆದುಕೊಂಡಿದೆ.

English summary
92.7 BIG FM, one of the India’s largest radio network stayed true to its promise of providing more music with a musical celebration on the occasion of India's 69th Republic Day.Studio-on-Wheels, the MJs went on-ground at Lal Bagh to spread the idea among the 5 + lakhs Bengalureans present at the location
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X