ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಕಾಗಕ್ಕ-ಗುಬ್ಬಕ್ಕನ ಕಥೆಯಲ್ಲ, ಶೋಭಕ್ಕನ ಮೇಲೆ 90 ಕೋಟಿ ಅವ್ಯವಹಾರ ಆರೋಪ

|
Google Oneindia Kannada News

Recommended Video

ಕೋಟ್ಯಾಂತರ ರೂ. ಅವ್ಯಹಾರ ನಡೆಸಿದ್ರಂತೆ ಶೋಭಾ | Oneindia Kannada

ಬೆಂಗಳೂರು, ಡಿಸೆಂಬರ್ 26: ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಇಂಧನ ಸಚಿವರಾಗಿ ಶೋಭಾ ಕರಂದ್ಲಾಜೆ ಅವರು ಜವಾಬ್ದಾರಿ ಹೊತ್ತಿದ್ದರಲ್ಲ ಆಗ ಬೆಸ್ಕಾಂನಲ್ಲಿ ಅವರು 90 ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ನೀತಿ ಟ್ರಸ್ಟ್ ಅಧ್ಯಕ್ಷ ಜಯನ್.

ಅಸಲಿಗೆ ಆರೋಪದ ಹೂರಣ ಏನೆಂದರೆ, ಈ ಹಗರಣ ನಡೆದಿದ್ದು 2012-13ನೇ ಇಸವಿಯಲ್ಲಿ. ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್, ಕನೆಕ್ಟರ್ ಸ್ವಿಚ್ ಮತ್ತು ಎಬಿ-ಎಲ್ ಟಿ, ಎಬಿ-ಎಚ್ ಟಿ, ಬಂಜ್ ಕೇಬಲ್ ಕೆಲಸದಲ್ಲಿ ಕೋಟ್ಯಂತರ ರುಪಾಯಿ ಒಳ ಹಾಕಿಕೊಂಡಿದ್ದಾರೆ ಎಂದು ಸಿಕ್ಕಾಪಟ್ಟೆ ಆರೋಪ ಮಾಡಲಾಗಿದೆ.

ಹಾಲಪ್ಪ, ಯಡಿಯೂರಪ್ಪ, ಶೋಭಾಗೆ ಪರೋಕ್ಷವಾಗಿ ಕುಟುಕಿದ ಬೇಳೂರುಹಾಲಪ್ಪ, ಯಡಿಯೂರಪ್ಪ, ಶೋಭಾಗೆ ಪರೋಕ್ಷವಾಗಿ ಕುಟುಕಿದ ಬೇಳೂರು

ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ವೊಂದರ ಮಾರುಕಟ್ಟೆಯ ಬೆಲೆ 800 ರುಪಾಯಿ ಇತ್ತಂತೆ. ಸರಿ, ಬೆಸ್ಕಾಂನವರು ಇದಕ್ಕಾಗಿ 1987 ರುಪಾಯಿ ಎಂದು ನಿರ್ಧರಿಸಿದರಂತೆ. ಆದರೆ ಖರೀದಿ ಮಾಡಿದ್ದು 6000 ರುಪಾಯಿಗಳಿಗಂತೆ. ಇನ್ನು ನಲವತ್ತೊಂಬತ್ತು ಸಾವಿರ ಕನೆಕ್ಟರ್ ಖರೀದಿ ಮಾಡುವುದರಲ್ಲೂ ಭಾರೀ ಅಕ್ರಮ ನಡೆದಿದೆ ಎಂಬುದು ಆರೋಪ.

Shobha Karandlaje

ಆಗ ಅದರ ಮಾರುಕಟ್ಟೆ ಬೆಲೆ 80 ರುಪಾಯಿ ಇದ್ದರೆ, ಬೆಸ್ಕಾಂ 152 ರುಪಾಯಿ ಫಿಕ್ಸ್ ಮಾಡಿತ್ತಂತೆ. ಕೊನೆಗೆ ಖರೀದಿ ಮಾಡಿದ್ದು 855 ರುಪಾಯಿಗಂತೆ. ಇದು ಇಲ್ಲಿಗೇ ನಿಲ್ಲುವುದೂ ಇಲ್ಲ. ಏಷ್ಯನ್ ಫ್ಯಾಬ್ ಟೆಕ್ ಕಂಪನಿಯಿಂದ ಕೂಲ ಬಟವಾಡೆಯಲ್ಲೂ ಒನ್ ಟೂ ಕಾ ಫೋರ್ ಆಗಿದೆಯಂತೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ!ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ!

ಇಷ್ಟೆಲ್ಲ ಅವ್ಯವಹಾರಗಳಿಗೆ ಆಗಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಹನ್ನೆರಡು ಅಧಿಕಾರಿಗಳು ಕಾರಣ ಎಂದು ಎಸಿಬಿಗೆ ದೂರು ಕೊಟ್ಟಿದ್ದೇವೆ ಎಂದು ಜಯನ್ ಮಾಹಿತಿ ಕೊಟ್ಟಿದ್ದಾರೆ. ಇನ್ನು ಕೋಟ್ಯಂತರ ರುಪಾಯಿಯ ಈ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಯೂ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಸೆಲ್ವಕುಮಾರ್ ಹೆಸರೂ ತಳುಕು ಹಾಕಿಕೊಂಡಿದೆ.

English summary
90 crore corruption allegation against former minister Shobha Karandlaje by Neeti trust president Jayan in Bengaluru on Wednesday. While she was power minister there was a corruption in BESCOM, alleged by Jayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X