ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

4 ಮೆಟ್ರೋ ನಿಲ್ದಾಣಗಳು, 9 ನೂತನ ಮಾರ್ಗ: 90 ಫೀಡರ್ ಬಸ್‌ಗಳು

|
Google Oneindia Kannada News

ಬೆಂಗಳೂರು, ಜನವರಿ 7: ಈ ನಾಲ್ಕು ಮೆಟ್ರೋ ನಿಲ್ದಾಣಗಳಿಂದ ಪ್ರತಿ 5-10 ನಿಮಿಷಕ್ಕೊಂದು ಫೀಡರ್‌ ಬಸ್‌ ನಿಮಗೆ ಲಭ್ಯವಾಗಲಿದೆ.

ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ಬನಶಂಕರಿ ಹಾಗೂ ಇಂದಿರಾನಗರ ಮೆಟ್ರೋ ನಿಲ್ದಾಣಗಳಲ್ಲಿ ಪ್ರತಿ ಐದು ಹತ್ತು ನಿಮಿಷಗಳಿಗೊಂದು ಬಿಎಂಟಿಸಿ ಬಸ್‌ ನಿಮಗೆ ಸಿಗಲಿದೆ.

ಇಂದಿನಿಂದ ರಾತ್ರಿ 12 ಗಂಟೆವರೆಗೂ ಮೆಟ್ರೋ ರೈಲು ಓಡಾಡುತ್ತೆಇಂದಿನಿಂದ ರಾತ್ರಿ 12 ಗಂಟೆವರೆಗೂ ಮೆಟ್ರೋ ರೈಲು ಓಡಾಡುತ್ತೆ

ಇದೀಗ ನಮ್ಮ ಮೆಟ್ರೋದ 30 ಮಾರ್ಗಗಳಲ್ಲಿ ಒಟ್ಟು 155 ಫೀಡರ್‌ ಬಸ್‌ಗಳು ಸಂಚರಿಸುತ್ತಿವೆ. ಪ್ರತಿ ಬಸ್‌ ನಡುವಿನ ಅಂತರ ಹೆಚ್ಚಿದೆ ಎನ್ನುವುದು ಮೆಟ್ರೋ ಪ್ರಯಾಣಿಕರ ದೂರಾಗಿದೆ.

 9 ಹೊಸ ಮೆಟ್ರೋ ಮಾರ್ಗಗಳಿಗೆ ಬಸ್‌ ಸೇವೆ

9 ಹೊಸ ಮೆಟ್ರೋ ಮಾರ್ಗಗಳಿಗೆ ಬಸ್‌ ಸೇವೆ

ಬಿಎಂಟಿಸಿ ಅಧಿಕಾರಿಗಳು 9 ಮೆಟ್ರೋ ಮಾರ್ಗಗಳಿಗೆ ಹೊಸದಾಗಿ ಬಸ್ ಸೇವೆ ನೀಡಲು ಮುಂದಾಗಿದ್ದಾರೆ. ಒಟ್ಟು ಹತ್ತು ಬಸ್‌ಗಳು ಈ ಮಾರ್ಗಗಳಲ್ಲಿ ಓಡಾಡಲಿದೆ. ಪ್ರತಿ ಬಸ್ 9 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ.

 ಪ್ರತಿ 15 ನಿಮಿಷಕ್ಕೊಂದು ಬಸ್ ಸೇವೆ ಇತ್ತು

ಪ್ರತಿ 15 ನಿಮಿಷಕ್ಕೊಂದು ಬಸ್ ಸೇವೆ ಇತ್ತು

ಇಷ್ಟು ದಿನ ಈ ಮೆಟ್ರೋ ನಿಲ್ದಾಣಗಳಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಬಸ್ ಲಭ್ಯವಿತ್ತು. ಒಂದು ಮಾರ್ಗದಲ್ಲಿ ಪ್ರತಿ ಗಂಟೆಗೆ ನಾಲ್ಕು ಬಸ್‌ಗಳು ಸಂಚರಿಸುತ್ತಿದ್ದವು. ಕೆಲವೊಮ್ಮೆ ಪ್ರತಿ ಗಂಟೆಗೆ ಎರಡೇ ಬಸ್‌ಗಳು ಸಂಚರಿಸಿದ್ದ ಉದಾಹರಣೆಗಳೂ ಉಂಟು.

 ಮೆಟ್ರೋ ನಿಲ್ದಾಣಗಳಲ್ಲಿ ಬಸ್ ಬೇ ಇಲ್ಲ

ಮೆಟ್ರೋ ನಿಲ್ದಾಣಗಳಲ್ಲಿ ಬಸ್ ಬೇ ಇಲ್ಲ

ಸಾಕಷ್ಟು ಬಸ್ ನಿಲ್ದಾಣಗಳಲ್ಲಿ ಬಸ್ ಬೇ ಇಲ್ಲ. ಹಾಗಾಗಿ ಬಸ್‌ಗಳನ್ನು ನಿಲುಗಡೆ ಮಾಡುವುದು ಕಷ್ಟವಾಗುತ್ತದೆ. ಎಲ್ಲಾ ನಿಲ್ದಾಣಗಳಲ್ಲಿ ಬಸ್ ಬೇಗಳನ್ನು ಸ್ಥಾಪಿಸುವುದಾಗಿ ಬಿಎಂಆರ್‌ಸಿಎಲ್ ಭರವಸೆ ನೀಡಿದೆ. ಚಿಕ್ಕಪೇಟೆ, ಪೀಣ್ಯ, ದಾಸರಹಳ್ಳಿ, ಹಲಸೂರು, ಟ್ರಿನಿಟಿ, ವಿಧಾನಸೌಧ, ಮಾಗಡಿ ರಸ್ತೆ, ಹೊಸಹಳ್ಳಿ, ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣಗಳಲ್ಲಿ ಫೀಡರ್‌ ಬಸ್‌ಗಳ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಮೆಟ್ರೋ ಪ್ರಯಾಣಿಕರ ಸಂಖ್ಯೆ ಎಷ್ಟು?

ಮೆಟ್ರೋ ಪ್ರಯಾಣಿಕರ ಸಂಖ್ಯೆ ಎಷ್ಟು?

ನಮ್ಮ ಮೆಟ್ರೋ ನಿತ್ಯದ ಪ್ರಯಾಣಿಕರ ಸಂಖ್ಯೆ 4.5 ಲಕ್ಷ ದಾಟಿದ್ದು ಈ ವರ್ಷ ಕಳೆಯುವುದರ ಒಳಗಾಗಿ 5 ಲಕ್ಷಕ್ಕೆ ಹೆಚ್ಚಿಸುವ ಚಿಂತನೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಬೈಯಪ್ಪನಹಳ್ಳಿ, ಕೆಂಪೇಗೌಡ ನಿಲ್ದಾಣ, ಇಂದಿರಾನಗರ, ಯಲಚೇನಹಳ್ಳಿ, ಎಂಜಿ ರಸ್ತೆ, ಮೈಸೂರು ರಸ್ತೆ, ಮಂತ್ರಿ ಮಾಲ್, ವಿಜಯನಗರ, ಟ್ರಿನಿಟಿ ಸರ್ಕಲ್, ರಾಜಾಜಿನಗರದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಇರುತ್ತಾರೆ.

English summary
You may soon get a BMTC feeder bus every 5-10 minutes from Mysuru Road, Byappanahalli, Banashankari and Indiranagar Metro stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X