ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್; ಬೆಂಗಳೂರಲ್ಲಿ ಸಾವು, ಸಕ್ರಿಯ ಪ್ರಕರಣದಲ್ಲಿ ಇಳಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 06: ಬೆಂಗಳೂರು ನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಇಳಿಮುಖವಾಗುತ್ತಿದೆ.

ಗುರುವಾರ ಬೆಂಗಳೂರು ನಗರದಲ್ಲಿ 1627 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 9. ನಗರದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 3,45,134ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,716.

ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ: ಕೇಂದ್ರ ಸಚಿವರ ಮೆಚ್ಚುಗೆ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ: ಕೇಂದ್ರ ಸಚಿವರ ಮೆಚ್ಚುಗೆ

ಅಕ್ಟೋಬರ್ 9ರಂದು 57 ಜನರು, ಅಕ್ಟೋಬರ್ 17ರಂದು 14 ಮಂದಿ ಕೋವಿಡ್ ಸೋಂಕಿತರು ನಗರದಲ್ಲಿ ಮೃತಪಟ್ಟಿದ್ದರು. ನವೆಂಬರ್‌ 5ರಂದು ಕೇವಲ 9 ಜನರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ.

ಬೆಂಗಳೂರು; ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಭಾರಿ ಇಳಿಕೆ ಬೆಂಗಳೂರು; ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಭಾರಿ ಇಳಿಕೆ

9 People Died Due To COVID 19 In Bengaluru On November 5

ಸೆಪ್ಟೆಂಬರ್ 28ರಂದು ನಗರದಲ್ಲಿ 9 ಜನರು ಕೋವಿಡ್‌ನಿಂದ ಮೃತಪಟ್ಟಿದ್ದರು. ಆದರೆ, ಸೆಪ್ಟೆಂಬರ್ 29ರಂದು 67 ಜನರು ಮೃತಪಟ್ಟಿದ್ದರು. ಇದುವರೆಗೂ ಬೆಂಗಳೂರು ನಗರದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 3,926.

ಕೆಲವು ಕೋವಿಡ್ ಕೇರ್ ಸೆಂಟರ್‌ ಮುಚ್ಚಲಿದೆ ಬಿಬಿಎಂಪಿ ಕೆಲವು ಕೋವಿಡ್ ಕೇರ್ ಸೆಂಟರ್‌ ಮುಚ್ಚಲಿದೆ ಬಿಬಿಎಂಪಿ

ಕೋವಿಡ್ ಕೇರ್ ಸೆಂಟರ್; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ನಿರ್ಮಾಣ ಮಾಡಿದ ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆ 4ಕ್ಕೆ ಇಳಿಕೆಯಾಗಿದೆ. ನಗರದಲ್ಲಿನ ಜನರು ಹೋ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ.

Recommended Video

ರಾಜನೇ ಇಲ್ಲದ ಅರಮನೆ ( CCD) | NBW Issued Against SM Krishna's Daughter Malavika | Oneindia Kannada

ಹಜ್ ಭವನ, ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಎಚ್‌ಎಎಲ್‌ನಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ 247 ಸೋಂಕಿತರು ಇದ್ದಾರೆ. 581 ಹಾಸಿಗೆಗಳು ಇನ್ನೂ ಖಾಲಿ ಇವೆ.

English summary
Bengaluru city reported 1627 new COVID cases on November 5 and only 9 people died. Total number of cases 3,45,134 in city with 16,716 active cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X