ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಕಂಟಕವಾದ ಹೊಂಗಸಂದ್ರ ರೋಗಿ: ಭಯ ಹುಟ್ಟಿಸಿದೆ ಟ್ರಾವಲ್ ಹಿಸ್ಟರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿರುವ ಹೊಂಗಸಂದ್ರ ವಾರ್ಡ್‌ನಲ್ಲಿ ವೇಣು ಹೆಲ್ತ್ ಕೇರ್‌ನಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ವ್ಯಕ್ತಿ ಈಗ ಸಿಲಿಕಾನ್ ಸಿಟಿಗೆ ವಿಲನ್ ಆಗಿ ಪರಿಣಮಿಸಿದ್ದಾನೆ.

Recommended Video

ಹಿಂದೂ ಮುಸ್ಲಿಂ ಒಗ್ಗಟ್ಟಾದ್ರೆ ಮಾತ್ರ ಕೊರೊನಾ ವಿರುದ್ಧದ ಹೋರಾಟ ಫಲಿಸುತ್ತೆ | Oneindia Kannada

ಈ ಒಬ್ಬ ವ್ಯಕ್ತಿಯಿಂದ 9 ಜನರಿಗೆ ಸೋಂಕು ಅಂಟಿಕೊಂಡಿರುವುದು ಇಂದು ಖಚಿತವಾಗಿದೆ. ಬಿಹಾರ ಮೂಲದ ಕಾರ್ಮಿಕನಾಗಿದ್ದ ಈ ವ್ಯಕ್ತಿ ಜೊತೆ ಸಂಪರ್ಕದಲ್ಲಿ 9 ಮಂದಿಗೆ ಈಗ ಕೊವಿಡ್ ಸೋಂಕಿಗೆ ಸಿಲುಕಿಕೊಂಡಿರುವುದು ಈಗ ಭಾರಿ ಆತಂಕ ಹೆಚ್ಚಿಸಿದೆ.

ಕ್ವಾರಂಟೈನ್‌ಗೆ ಹೆದರಿ ಆಸ್ಪತ್ರೆ ಲಾಕ್‌ ಮಾಡಿಕೊಂಡ ವೈದ್ಯರು!ಕ್ವಾರಂಟೈನ್‌ಗೆ ಹೆದರಿ ಆಸ್ಪತ್ರೆ ಲಾಕ್‌ ಮಾಡಿಕೊಂಡ ವೈದ್ಯರು!

ನಿನ್ನೆಯಷ್ಟೇ ವೇಣು ಹೆಲ್ತ್ ಕೇರ್ ಆಸ್ಪತ್ರೆಯ ಪರವಾನಗಿ ರದ್ದು ಮಾಡಲಾಗಿತ್ತು. ರೋಗಿಯ ಬಗ್ಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡದ ಕಾರಣ, ಆಸ್ಪತ್ರೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಡಿಸಿ ತಿಳಿಸಿದ್ದರು. ಅಂದ್ಹಾಗೆ, ಸೋಂಕಿತ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಹೇಗಿದೆ?

ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ

ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ

ಸೋಂಕಿತ ವ್ಯಕ್ತಿ ಲಾಕ್‌ಡೌನ್‌ ಘೋಷಣೆ ಆಗುವುದಕ್ಕೂ ಮುಂಚೆ ಬಿಹಾರ್‌ಗೆ ಹೋಗಿ ಬಂದಿದ್ದನು ಎಂಬ ಮಾಹಿತಿ ಇದೆ. ಮೂಲತಃ ಬಿಹಾರ ವ್ಯಕ್ತಿಯಾಗಿದ್ದ ಈತನಿಗೆ ಅಲ್ಲಿಂದ ಬಂದ ಕೆಲವು ದಿನಗಳ ಬಳಿಕ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿದೆ. ಹಾಗಾಗಿ, ಸ್ಥಳೀಯ ಕ್ಲೀನಿಕ್‌ನಲ್ಲಿ ತೋರಿಸಿಕೊಂಡಿದ್ದಾನೆ.

ವೇಣು ಹೆಲ್ತ್ ಕೇರ್‌ಗೆ ಹೋಗಿದ್ದ

ವೇಣು ಹೆಲ್ತ್ ಕೇರ್‌ಗೆ ಹೋಗಿದ್ದ

ಮೊದಲು ನಾಲ್ಕು ಕ್ಲೀನಿಕ್‌ಗೆ ಭೇಟಿ ನೀಡಿದ ವ್ಯಕ್ತಿಗೆ ಜ್ವರ ಮತ್ತು ಕೆಮ್ಮು ಕಡಿಮೆಯಾಗಿಲ್ಲ. ಅದಾದ ಬಳಿಕ ಕೊನೆಯದಾಗಿ ವೇಣು ಹೆಲ್ತ್ ಕೇರ್‌ಗೆ ಹೋಗಿದ್ದಾನೆ. ಅಲ್ಲಿ ಆತನಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ಅಲ್ಲಿಂದ ಆತ ಜಯದೇವ ಆಸ್ಪತ್ರೆಗೆ ಹೋಗಿದ್ದಾನೆ ಎಂಬ ಮಾಹಿತಿ ಇದೆ.

ಕೊರೊನಾ ಸೋಂಕು: ಬೆಂಗಳೂರಿನ ಪಶ್ಚಿಮ ವಲಯದ ಜನರೇ ಹುಷಾರ್...!ಕೊರೊನಾ ಸೋಂಕು: ಬೆಂಗಳೂರಿನ ಪಶ್ಚಿಮ ವಲಯದ ಜನರೇ ಹುಷಾರ್...!

ದೊಡ್ಡ ಆಸ್ಪತ್ರೆಗಳನ್ನು ತಿರುಗಾಡಿದ್ದ

ದೊಡ್ಡ ಆಸ್ಪತ್ರೆಗಳನ್ನು ತಿರುಗಾಡಿದ್ದ

ಮೊದಲು ಜಯದೇವ ಆಸ್ಪತ್ರೆಗೆ ಹೋಗಿದ್ದ, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಹೋದ, ತದನಂತರ ಕಿಮ್ಸ್ ಆಸ್ಪತ್ರೆಗೆ ಹೋಗಿದ್ದ ಕೊನೆಯದಾಗಿ ಆತನನ್ನು ಏಪ್ರಿಲ್ 20 ರಂದು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಏಪ್ರಿಲ್ 22ರಂದು ಆತನಿಗೆ ಕೊರೊನಾ ಸೋಂಕು ಖಚಿತವಾಗಿದೆ. ಕರ್ನಾಟಕದಲ್ಲಿ ಸೋಂಕು ಪತ್ತೆಯಾದ 419ನೇ ರೋಗಿ ಈತ.

9 ಜನರಿಗೆ ಸೋಂಕು ಹರಡಿದೆ

9 ಜನರಿಗೆ ಸೋಂಕು ಹರಡಿದೆ

ಬಿಹಾರ್ ಮೂಲದ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ವ್ಯಕ್ತಿಗೆ ಸೋಂಕು ಖಚಿತವಾಗುತ್ತಿದ್ದ ಆತನ ಜೊತೆ ಸಂಪರ್ಕದಲ್ಲಿ ಕುಟುಂಬದವರನ್ನು, ಆಸ್ಪತ್ರೆಯ ಸಿಬ್ಬಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಇದೀಗ, 6 ಜನರಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಕ್ವಾರೆಂಟೈನ್‌ನಲ್ಲಿರುವ ಉಳಿದ ವ್ಯಕ್ತಿಗಳಲ್ಲಿ ಆತಂಕ ಹೆಚ್ಚಾಗಿದೆ. ವೇಣು ಹೆಲ್ತ್ ಕೇರ್ ವೈದ್ಯರು ಮತ್ತು ನರ್ಸ್‌ಗಳಿಗೂ ಸೋಂಕು ತಗುಲಿರಬಹುದಾ ಎಂಬ ಅನುಮಾನ ಕಾಡುತ್ತಿದೆ.

'ಕೊರೊನಾ ನಮ್ಮೊಂದಿಗೆ ದೀರ್ಘಕಾಲ ಇರುತ್ತದೆ': WHO ಎಚ್ಚರಿಕೆ'ಕೊರೊನಾ ನಮ್ಮೊಂದಿಗೆ ದೀರ್ಘಕಾಲ ಇರುತ್ತದೆ': WHO ಎಚ್ಚರಿಕೆ

ಸೀಲ್‌ಡೌನ್‌ ಆಗುತ್ತಾ ಹೊಂಗಸಂದ್ರ?

ಸೀಲ್‌ಡೌನ್‌ ಆಗುತ್ತಾ ಹೊಂಗಸಂದ್ರ?

ಬಿಹಾರ್ ಮೂಲದ ವ್ಯಕ್ತಿಯಿಂದ 9 ಜನರಿಗೆ ಸೋಂಕು ಹರಡಿದ ಬೆನ್ನೆಲ್ಲೆ, ಹೊಂಗಸಂದ್ರ ಸಂಪೂರ್ಣ ಬಂದ್ ಆಗಿದೆ. ಆ ಕಾರ್ಮಿಕ ವಾಸವಾಗಿದ್ದ ಸುತ್ತಮುತ್ತ ಪ್ರದೇಶ ಈಗ ಸೀಲ್‌ಡೌನ್‌ ಆಗಿದೆ. ಬಿಬಿಎಂಪಿ ಕಡೆಯಿಂದ ಔಷಧ ಸಿಂಪಡಣೆ ಆಗುತ್ತಿದ್ದು, ಇದೀಗ, ಹೊಂಗಸಂದ್ರ ಸೀಲ್‌ಡೌನ್‌ಗೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಇದೆ.

English summary
9 new coronavirus case reported in bengaluru today. they all linked with COVID19 patient number 419.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X