ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಲಸಿಕಾ ಮೇಳದಲ್ಲಿ 9.50 ಲಕ್ಷ ಡೋಸ್‌ ನೀಡಲಾಗಿದೆ': ಆರೋಗ್ಯ ಸಚಿವ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 02: "ಬುಧವಾರ ನಡೆದ ಕೋವಿಡ್ ವಿಶೇಷ ಲಸಿಕೆ ಮೇಳದಲ್ಲಿ 9.50 ಲಕ್ಷ ಡೋಸ್ ಲಸಿಕೆ ನೀಡಿದ್ದು, ಉತ್ತಮವಾಗಿ ಲಸಿಕಾಕರಣ ನಡೆದಿದೆ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ಲಸಿಕೆ ಮೇಳದಲ್ಲಿ 9.50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ಡೋಸ್ ಪಡೆದವರ ಪ್ರಮಾಣ ಶೇಕಡ 62 ಕ್ಕೆ ಏರಿದೆ. ಮೊದಲ ಡೋಸ್ ಪಡೆದವರ ಪ್ರಮಾಣ ಶೇಕಡ 92 ಕ್ಕೆ ತಲುಪಿದೆ. ಎರಡೂ ಡೋಸ್ ಪಡೆದವರ ಪ್ರಮಾಣ ಶೇಕಡ 62 ಕ್ಕೆ ಏರಿದೆ. ನಿನ್ನೆವರೆಗೆ ಒಟ್ಟು 7.50 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಲಸಿಕೆ ನೀಡುವಲ್ಲಿ 2 ಅಥವಾ 3 ನೇ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಧಿಕಾರ ಸ್ವೀಕರಿಸಿದ ಬಳಿಕ ವಿಶೇಷ ಯೋಜನೆಗಳಿಗೆ ಬಹಳ ಒತ್ತು ನೀಡುತ್ತಿದ್ದಾರೆ," ಎಂದು ಹೇಳಿದರು.

ಓಮಿಕ್ರಾನ್‌ ದೃಢ: ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆ ಎಂದ ಸಿಎಂ ಬೊಮ್ಮಾಯಿಓಮಿಕ್ರಾನ್‌ ದೃಢ: ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆ ಎಂದ ಸಿಎಂ ಬೊಮ್ಮಾಯಿ

"ಮುಂದುವರಿದ ದೇಶಗಳಲ್ಲಿ ಕೂಡ ಲಸಿಕೆ ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚು ರೋಗ ನಿರೋಧಕ ಶಕ್ತಿ ಪಡೆಯಲು ಎರಡೂ ಡೋಸ್ ಗಳನ್ನು ಪಡೆಯಬೇಕು. ಲಸಿಕೆಯ ಒಂದು ಡೋಸ್ ಪಡೆದರೆ ಸ್ವಲ್ಪ ರೋಗ ನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿಗಾಗಿ ಹಾಗೂ ವೈರಾಣು ವಿರುದ್ಧ ಸದೃಢವಾಗಿ ಹೋರಾಡಲು 2 ಡೋಸ್ ತೆಗೆದುಕೊಳ್ಳಬೇಕು. ಒಂದು ಕಣ್ಣಿದ್ದರೆ ಕಾಣಿಸುತ್ತದೆ. ಆದರೆ ಎರಡೂ ಕಣ್ಣುಗಳಿದ್ದರೆ ಸಂಪೂರ್ಣ ದೃಷ್ಟಿ ಸಿಗುತ್ತದೆ. ಹಾಗೆಯೇ ಕೊರೊನಾ ಲಸಿಕೆಯ 2 ಡೋಸ್ ತೆಗೆದುಕೊಂಡರೆ ಸಂಪೂರ್ಣ ರೋಗ ನಿರೋಧಕ ಶಕ್ತಿ ಸಿಗುತ್ತದೆ," ಎಂದರು.

9.50 Lakh Doze Vaccination In Vaccine Mela Said Karnataka Health Minister

ವಿಮಾನ ನಿಲ್ದಾಣದಲ್ಲಿ ಆರ್‌‌ಟಿಪಿಸಿಆರ್ ಪರೀಕ್ಷೆಗೆ ಎಷ್ಟು ಶುಲ್ಕ?

"ಕೊರೊನಾ ಪರೀಕ್ಷೆ ಸಂಬಂಧ ವಿಮಾನ ನಿಲ್ದಾಣಗಳಲ್ಲಿ ಸಿದ್ಧತೆ ನಡೆದಿದೆ. ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ವಿಮಾನ ನಿಲ್ದಾಣದಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಲಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರಿಗೆ ತಪಾಸಣೆ, ಪರೀಕ್ಷೆ ಬಗ್ಗೆ ಸೂಚನೆ ನೀಡಲಾಗಿದೆ. ಪರೀಕ್ಷೆ ಮುಗಿದ 3 ಅಥವಾ 4 ಗಂಟೆಯೊಳಗೆ ಫಲಿತಾಂಶ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ," ಎಂದು ಮಾಹಿತಿ ನೀಡಿದರು.

"ವಿಮಾನ ನಿಲ್ದಾಣಗಳಲ್ಲಿ ಅಬೋಟ್ ಮತ್ತು ಆರ್ ಟಿಪಿಸಿಆರ್ ಎಂಬ ಎರಡು ರೀತಿಯ ಪರೀಕ್ಷೆಗಳಿವೆ. ಅಬೋಟ್ ಪರೀಕ್ಷೆಗೆ ಕೇಂದ್ರ ಸರ್ಕಾರ 3,000 ರೂ. ನಿಗದಿಪಡಿಸಿದೆ. ಅಬೋಟ್ ನಿಂದ ಕೇವಲ ಅರ್ಧ ಅಥವಾ 1 ಗಂಟೆಯೊಳಗೆ ಫಲಿತಾಂಶ ಪಡೆಯಬಹುದು. ಅಬೋಟ್ ಪರೀಕ್ಷೆಯಲ್ಲಿ ನಿಖರತೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಅಬೋಟ್ ಕೂಡ ಆರ್ ಟಿಪಿಸಿಆರ್ ನಷ್ಟೇ ನಿಖರತೆ ಹೊಂದಿದೆ," ಎಂದು ಸ್ಪಷ್ಟಪಡಿಸಿದರು.

Breaking: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆBreaking: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆ

"ವಿಮಾನ ನಿಲ್ದಾಣದಲ್ಲಿ ಆರ್‌‌ಟಿಪಿಸಿಆರ್ ಪರೀಕ್ಷೆಗೆ 500 ರೂ. ಶುಲ್ಕವಿದೆ. ಈ ಪರೀಕ್ಷೆ ನಡೆಸಿದ 3 ರಿಂದ 4 ಗಂಟೆಯೊಳಗೆ ಫಲಿತಾಂಶ ದೊರೆಯುತ್ತದೆ. ಇಡೀ ಸಮುದಾಯಕ್ಕೆ ವೈರಸ್ ಹರಡಬಾರದು ಎಂಬುದು ಸರ್ಕಾರದ ಉದ್ದೇಶ. ಕಂಪನಿ ಉದ್ಯೋಗಿಗಳು ಪರೀಕ್ಷೆ ಮಾಡಿಸಿಕೊಳ್ಳುವ ಮುನ್ನ ಮನೆಗೆ ಬಿಟ್ಟುಬಿಡಿ, ಆಮೇಲೆ ಟ್ರ್ಯಾಕ್ ಮಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರಕ್ಕೆ ಬಹಳ ಅನುಭವ ಆಗಿದೆ. ಹೀಗಾಗಿ ಈಗಿರುವ ಕ್ರಮಗಳಿಗೆ ಸಹಕರಿಸಬೇಕು," ಎಂದು ಮನವಿ ಮಾಡಿದರು. "ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಶಾಪಿಂಗ್ ಮಾಲ್ ಗಳಿಗೆ ಪ್ರವೇಶಿಸುವಂತೆ ನಿಯಮ ರೂಪಿಸುವಂತೆ ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಮುಗಿಸಿ ಬಂದ ನಂತರ ಈ ಕುರಿತು ಚರ್ಚಿಸಲಾಗುವುದು," ಎಂದರು.

Recommended Video

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada

ನಟ ಪುನೀತ್ ರಾಜ್‍ಕುಮಾರ್ ಮನೆಗೆ ಭೇಟಿ: ಸಚಿವ ಡಾ.ಕೆ.ಸುಧಾಕರ್ ಅವರು, ಆದಿಚುಂಚನಗಿರಿ ಮಠದ ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

English summary
9.50 Lakh Doze Vaccination In Vaccine Mela Said Karnataka Health Minister Dr. K. Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X